ಕಸಾಪ ಜಿಲ್ಲಾಧ್ಯಕ್ಷ ಚುನಾವಣೆ

ಮಲ್ಲಿಕಾರ್ಜುನಸ್ವಾಮಿ ಶಿಖರಮಠರನ್ನು ಬೆಂಬಲಿಸಲು ಮನವಿ
ಲಿಂಗಸುಗೂರು : ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರ ಚುನಾವಣೆ ಘೋಷಣೆಯಾಗಿವೆ. ಜಿಲ್ಲಾಧ್ಯಕ್ಷ ಸ್ಥಾನದ ಸೇವಾಕಾಂಕ್ಷಿ ಮಲ್ಲಿಕಾರ್ಜುನಸ್ವಾಮಿ ಶಿಖರಮಠರನ್ನು ಸಾಹಿತ್ಯಾಭಿಮಾನಿಗಳು ಬೆಂಬಲಿಸಬೇಕೆಂದು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಲಕ್ಷ್ಮಣ ಬಾರಿಕೇರ ಮನವಿ ಮಾಡಿದ್ದಾರೆ.
ಪಟ್ಟಣದ ಪತ್ರಿಕಾಭವನದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಸಾಪ ಚುನಾವಣೆಗಳು ಪ್ರಾರಂಭವಾಗಿವೆ. ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಗಳು ಸ್ಪರ್ದೆ ಮಾಡುತ್ತಿದ್ದಾರೆ. ಕಸಾಪ ಜಿಲ್ಲಾಧ್ಯಕ್ಷ ಸ್ಥಾನ ಈವರಿಗೂ ಹಿರಿಯರೇ ಹಾಗೂ ಒಂದೇ ಕೋಮಿಗೆ ಸೀಮಿತವಾಗಿದೆ. ಇದರಿಂದ ಬೇಸತ್ತು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಯುವಕರಾಗಿರುವ ಮಲ್ಲಿಕಾರ್ಜುನ ಶಿಖರಮಠ ಸ್ಪರ್ದೆ ಮಾಡಿದ್ದಾರೆ. ತಾಲೂಕಿನ ಸಮಾನ ಮನಸ್ಕ ಕಸಾಪ ಮತದಾರರು ಒಂದಡೆ ಕುಳಿತು ಮಲ್ಲಿಕಾರ್ಜುನ ಶಿಖರಮಠ ಅವರಿಗೆ ಬೆಂಬಲಿಸಲು ತಿರ್ಮಾನ ಮಾಡಿದ್ದೇವೆ. ಮಲ್ಲಿಕಾರ್ಜುನ ಶಿಖರಮಠ ಅವರ ಹಿಂದೆ ಯುವಕರ ಪಡೆಯೇ ಇದೆ. ಕಸಾಪ ಒಬ್ಬರಿಗೆ ಸೀಮಿತವಲ್ಲ ಅಧಿಕಾರ ಎಲ್ಲರಿಗೂ ಸಮಾನ ಹಕ್ಕಾಗಿದೆ ಈಗಾಗಿ ಮಲ್ಲಿಕಾರ್ಜುನ ಶಿಖರಮಠ ಅವರಿಗೆ ಪ್ರೋತ್ಸಾಹ ನೀಡಬೇಕು ಎಂದರು.
ಸಿರಿಗನ್ನಡ ವೇದಿಕೆ ಅಧ್ಯಕ್ಷ ಶರಣಬಸವ ಮ್ಯಾಡಿ, ದಲಿತ ಸಾಹಿತ್ಯ ಪರಿಷತ್ ಅಧ್ಯಕ್ಷ ಅಮರೇಶ ವೆಂಕಟಾಪುರ, ಡಾ.ಶರಣಪ್ಪ ಆನಾಹೊಸೂರು, ಮಹಾಂತಗೌಡ ಪಾಟೀಲ್, ಹಾಗೂ ಇನ್ನಿತರಿದ್ದರು.