ಕಸಾಪ ಜಿಲ್ಲಾಧ್ಯಕ್ಷಸ್ಥಾನ ಗಂಗಾವತಿಗೆ ಬಿಟ್ಟುಕೊಡುವಂತೆ ಅಜೀವ ಸದಸ್ಯರ ಆಗ್ರಹ

ಗಂಗಾವತಿ ಅ 29 : ಕೊಪ್ಪಳ ಜಿಲ್ಲಾ ರಚನೆಯಾದ ಬಳಿಕ ಗಂಗಾವತಿ ತಾಲೂಕಿಗೆ ಕಸಾಪ ಜಿಲ್ಲಾಧ್ಯಕ್ಷ ಸ್ಥಾನ ದೊರಕಿಲ್ಲ. ಆದ್ದರಿಂದ ಈ ಭಾರಿ ಕಸಾಪ ಜಿಲ್ಲಾಧ್ಯಕ್ಷ ಸ್ಥಾನವನ್ನು ಗಂಗಾವತಿಗೆ ಬಿಟ್ಟುಕೊಡಬೇಕು. ಪತ್ರಿಕಾವಲಯದಿಂದ ತಾವು ಸ್ಪರ್ಧೆ ಮಾಡಲು ನಿರ್ಧರಿಸಿದ್ದು ಕಸಾಪ ಅಜೀವ ಸದಸ್ಯರು ಸಾಹಿತಿಗಳು ಬರಹಗಾರರು ಬೆಂಬಲಿಸುವಂತೆ ಪತ್ರಕರ್ತ ರಾಮಮೂರ್ತಿ ನವಲಿ ಮನವಿ ಮಾಡಿದರು.
ಅವರು ನಗರದ ಐಎಂಎ ಭವನದಲ್ಲಿ ಕಸಾಪ ಚುನಾವಣೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಪತ್ರಕರ್ತರಿಗೂ ಕನ್ನಡ ಸಾಹಿತ್ಯಕ್ಕೂ ಅವಿನಾಭಾವ ಸಂಬಂಧವಿದ್ದು ಸಾಹಿತ್ಯ ಸಮ್ಮೇಳನ ಸೇರಿ ಪರಿಷತ್ತಿನ ಕಾರ್ಯ ಚಟುವಟಿಕೆ ನಿರಂತರವಾಗಿ ನಡೆಯಲು ಪತ್ರಕರ್ತರ ಕೊಡುಗೆ ಅಪಾರವಾಗಿದೆ. ಆದ್ದರಿಂದ ಈ ಭಾರಿ ಗಂಗಾವತಿಗೆ ಅಧ್ಯಕ್ಷ ಸ್ಥಾನ ಬಿಟ್ಟುಕೊಡಬೇಕು. ಪತ್ರಕರ್ತನಾಗಿ ತಾವು ಸಾಹಿತ್ಯ ವಲಯದ ಎಲ್ಲರ ಒಡನಾಡಿಯಾಗಿದ್ದು ಸಾಹಿತ್ಯದ ವಾತಾವರಣ ನಿರ್ಮಾಣ ಮಾಡುವ ಜತೆಗೆ ಸಾಹಿತಿಗಳು ಲೇಖಕರಿಂದ ಅಧಿಕ ಪುಸ್ತಕ ಹೊರತರುವ ಕಾರ್ಯ ಮಾಡಲಾಗುತ್ತದೆ ಎಂದರು.
ಪತ್ರಕರ್ತರ ಸಂಘದ ಅಧ್ಯಕ್ಷ ವಿಶ್ವನಾಥ ಬೆಳಗಲ್ ಮಠ ಮಾತನಾಡಿ, ಕನ್ನಡ ಸಾಹಿತ್ಯದಲ್ಲಿ ಕಾರ್ಯ ಮಾಡಿರುವ ಬಹುತೇಕ ಸಾಹಿತಿಗಳು ಪತ್ರಕರ್ತರಾಗಿ ಕೆಲಸ ಮಾಡಿದ್ದಾರೆ. ಈ ಭಾರಿ ಜಿಲ್ಲಾ ಕಸಾಪ ಅಧ್ಯಕ್ಷ ಸ್ಥಾನ ಗಂಗಾವತಿ ಮತ್ತು ಪತ್ರಿಕಾವಲಯಕ್ಕೆ ಬಿಟ್ಟುಕೊಡಬೇಕೆಂದರು.
ಪತ್ರಕರ್ತ ಹರೀಶ ಕುಲಕರ್ಣಿ ಮಾತನಾಡಿ, ಯುವಕ ಸಂಘ ದಾಸ ಸಾಹಿತ್ಯ ಮತ್ತು ಸಂಘಟನೆಯಂತಹ ಕಾರ್ಯದಲ್ಲಿ ಪತ್ರಕರ್ತ ರಾಮಮೂರ್ತಿ ನವಲಿ ಕೆಲಸ ಮಾಡಿದ್ದು ಈ ಭಾರಿ ಕಸಾಪಕ್ಕೆ ಅಧ್ಯಕ್ಷರಾಗಲಿ ಎಂದರು.
ಪತ್ರಕರ್ತರಾದ ಕೆ.ನಿಂಗಜ್ಜ, ವಿಶ್ವನಾಥ ಬೆಳಗಲ್‍ಮಠ, ಹರೀಶಕುಲಕರ್ಣಿ, ಮುಕ್ಕಣ್ಣ ಕತ್ತಿ, ದಶರಥ, ಹೊಸ್ಕೇರಿ ಮಲ್ಲಿಕಾರ್ಜುನ, ಶಿವಪ್ಪ ನಾಯಕ, ಸಿ.ಮಹಾಲಕ್ಷ್ಮಿ, ಶಿವಕುಮಾರ, ಚಂದ್ರುಮುಕ್ಕುಂದಿ, ವಸಂತ, ಮೃತ್ಯಂಜಯಸ್ವಾಮಿ, ಎಸ್.ಎಂ.;ಪಟೇಲ್, ತಿರುಪಾಲಯ್ಯ, ಸಂಜೀವಕುಮಾರ ನೇಕಾರ, ಎ.ಜೆ.ರಂಗನಾಥ, ಮಂಜುನಾಥ ಹೊಸ್ಕೇರಿ, ವಿರೇಶ ಶ್ರೀರಾಮನಗರ ,ಬಸವರಾಜ, ಕೊಟಗಿ ಚನ್ನಬಸವ ಸೇರಿ ಅನೇಕರಿದ್ದರು.