ಕಸಾಪ ಜಿಲ್ಲಾಧ್ಯಕ್ಷರಾಗಿ ಸುರೇಶ ಚನಶೆಟ್ಟಿ ಪುನರಾಯ್ಕೆ

ಬೀದರ:ನ.22: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರಾಗಿ ಸುರೇಶ ಚೆನಶೆಟ್ಟಿ ಸುಮಾರು 903 ಮತಗಳ ಅಂತರದಿಂದ ಹತ್ತಿರದ ಪ್ರತಿಸ್ಪರ್ಧಿ ಡಾ.ರಾಜಕುಮಾರ ಹೆಬ್ಬಾಳೆ ವಿರುದ್ಧ ಭರ್ಜರಿ ಜಯ ಸಾಧಿಸಿ ಪುನರಾಯ್ಕೆಯಾಗಿದ್ದಾರೆ.

ಕನ್ನಡ ಭವನ ನಿರ್ಮಾಣದ ಹೆಸರಲ್ಲಿ ಮತ್ತೊಂದು ಬಾರಿ ಆಯ್ಕೆ ಬಯಸಿ ಮತಯಾಚಿಸಿದ್ದ ಸುರೇಶ ಚೆನಶೆಟ್ಟಿಗೆ ಕೊನೆ ಘಳಿಗೆಯಲ್ಲಿ ಕಸಾಪ ಮಾಜಿ ಅಧ್ಯಕ್ಷ ಪೆÇ್ರ. ಸಿದ್ರಾಮಪ್ಪ ಮಾಸಿಮಾಡೆ ಅವರ ಬೆಂಬಲ ಜಯದ ಸಮೀಪ ಕೊಂಡೊಯ್ತು ಎಂಬ ಮಾತುಗಳು ಮತದಾರರು ಮತ್ತಷ್ಟು ಚೆನಶೆಟ್ಟಿ ಪರ ಹೊರಳಲು ಸಹಕಾರಿಯಾಗಿದ್ದಲ್ಲದೆ ವಚನ ಭ್ರಷ್ಟತೆಯ ಆರೋಪ ಹೆಬ್ಬಾಳೆ ಅವರಿಗೆ ಯಾವುದೇ ರೀತಿಯಲ್ಲಿ ಫಲಪ್ರದವಾಗಲಿಲ್ಲ ಎಂಬುದಕ್ಕೆ ಸುರೇಶ ಚೆನಶೆಟ್ಟಿ ಅವರ ಗೆಲುವೆ ಸಾಕ್ಷಿ.

ಜಿಲ್ಲಾ ಕೇಂದ್ರ ಬೀದರ್ ತಾಲೂಕಿನಲ್ಲಿ 5 ಬೂತ್‍ಗಳು, ಭಾಲ್ಕಿ 2 ಸೇರಿದಂತೆ ಇನ್ನುಳಿದ ತಾಲೂಕು ಕೇಂದ್ರಗಳಲ್ಲಿ ತಲಾ ಒಂದರಂತೆ ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. 9654 ಪುರುಷ ಹಾಗೂ 3183 ಮಹಿಳೆಯರು ಸೇರಿ ಒಟ್ಟು 12837 ಮತದಾರರ ಪೈಕಿ 5821 ಪುರುಷರು ಹಾಗೂ 1830 ಮಹಿಳೆಯರು ಸೇರಿದಂತೆ 7651 ಮತದಾರರು ಮತ ಚಲಾಯಿಸಿದ್ದು ಒಟ್ಟಾರೆ 59.6ರಷ್ಟು ಮತದಾನವಾಗಿದೆ.

ಬೀದರ್ ತಾಲೂಕಿನಲ್ಲಿ ಅತಿ ಹೆಚ್ಚು ಶೇ. 72.14 ಮತದಾನವಾಗಿದೆ.ಭಾಲ್ಕಿಯಲ್ಲಿ ಶೇ. 59.97, ಬಸವಕಲ್ಯಾಣದಲ್ಲಿ ಶೇ. 51.68, ಹುಮನಾಬಾದ್‍ನಲ್ಲಿ ಶೇ. 59.29, ಕಮಲನಗರದಲ್ಲಿ ಶೇ. 65.78, ಚಿಟಗುಪ್ಪ ಶೇ 59.65 ಹಾಗೂ ಹುಲಸೂರಲ್ಲಿ ಶೇ 59.12 ರಷ್ಟು ಮತದಾನವಾಗಿದೆ. ಔರಾದ್‍ನಲ್ಲಿ ಶೇ. 66.5ರಷ್ಟು ಮತದಾನ ದಾಖಲಾಗಿದೆ.

ಚುನಾವಣೆಯಯಲ್ಲಿ ಸುರೇಶ ಚೆನಶೆಟ್ಟಿ 3848, ರಾಜಕುಮಾರ ಹೆಬ್ಬಾಳೆ 2945, ಸಂಜೀವಕುಮಾರ ಅತಿವಾಳೆ 741, ಸಿದ್ದಲಿಂಗಯ್ಯ ಭಂಕಲಗಿಗೆ 49 ಹಾಗೂ 60 ಮತಗಳು ತಿರಸ್ಕøತಗೊಂಡಿದ್ದು ಇಲ್ಲಿ ಸುರೇಶ ಚೆನಶೆಟ್ಟಿ ಅವರು 903 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ.

ಜಿಲ್ಲಾ ಕೇಂದ್ರ ಬೀದರ್ ತಾಲೂಕಿನಲ್ಲಿ ಸುರೇಶ ಚೆನಶೆಟ್ಟಿ 1708, ರಾಜಕುಮಾರ ಹೆಬ್ಬಾಳೆ 1297, ಸಂಜೀವಕುಮಾರ ಅತಿವಾಳೆ 478, ಸಿದ್ದಲಿಂಗಯ್ಯ ಭಂಕಲಗಿ 25 ಹಾಗೂ 38 ಮತಗಳು ತಿರಸ್ಕøತಗೊಂಡಿದ್ದು ಇಲ್ಲಿ ಸುರೇಶ ಚೆನಶೆಟ್ಟಿ ಅವರು 411 ಮತಗಳ ಅಂತರದ ಮುನ್ನಡೆ ಹೊಂದಿದ್ದಾರೆ.

ಹುಮನಾಬಾದ್‍ನಲ್ಲಿ ರಾಜಕುಮಾರ ಹೆಬ್ಬಾಳೆ ಅವರಿಗೆ 263, ಸುರೇಶ ಚೆನಶೆಟ್ಟಿ 320, ಸಂಜುಕುಮಾರ ಅತಿವಾಳೆ 33 ಹಾಗೂ ಸಿದ್ದಲಿಂಗಯ್ಯ ಭಂಕಲಗಿ ಅವರಿಗೆ 5 ಅಲ್ಲದೆ ಒಂದು ಮತ ತಿರಸ್ಕøತಗೊಂಡಿದ್ದು ಇಲ್ಲಿ ಸುರೇಶ ಚೆನಶೆಟ್ಟಿ 57 ಮತಗಳ ಮುನ್ನಡೆ ಸಾಧಿಸಿದ್ದಾರೆ.

ಬಸವಕಲ್ಯಾಣದಲ್ಲಿ ರಾಜಕುಮಾರ ಹೆಬ್ಬಾಳೆ 302, ಸುರೇಶ ಚೆನಶೆಟ್ಟಿ 262, ಸಂಜೀವಕುಮಾರ ಅತಿವಾಳೆ 83, ಸಿದ್ದಲಿಂಗಯ್ಯ ಭಂಕಲಗಿ 4 ಹಾಗೂ 6 ಮತಗಳು ತಿರಸ್ಕøತಗೊಂಡಿದ್ದು ಇಲ್ಲಿ ರಾಜಕುಮಾರ ಹೆಬ್ಬಾಳೆ ಅವರು 40 ಮತಗಳ ಅಂತರದ ಮುನ್ನಡೆ ಹೊಂದಿದ್ದಾರೆ.

ಹುಲಸೂರು ತಾಲೂಕಿನಲ್ಲಿ ರಾಜಕುಮಾರ ಹೆಬ್ಬಾಳೆ 114, ಸುರೇಶ ಚೆನಶೆಟ್ಟಿ 57, ಸಂಜೀವಕುಮಾರ ಅತಿವಾಳೆ 13, ಸಿದ್ದಲಿಂಗಯ್ಯ ಭಂಕಲಗಿ 1 ಮತ ಪಡೆದರೆ 3 ಮತಗಳ ತಿರಸ್ಕøತಗೊಂಡಿದ್ದು ಇಲ್ಲಿ 57 ಮತಗಳ ಮುನ್ನಡೆಯನ್ನು ರಾಜಕುಮಾರ ಹೊಂದಿದ್ದರು.

ಚಿಟಗುಪ್ಪ ತಾಲೂಕಿನಲ್ಲಿ ರಾಜಕುಮಾರ ಹೆಬ್ಬಾಳೆ 127, ಸುರೇಶ ಚೆನಶೆಟ್ಟಿ 121, ಸಂಜೀವಕುಮಾರ ಅತಿವಾಳೆ 27 ಮತಗಗಳನ್ನು ಗಳಿಸಿದರೆ ರಾಜಕುಮಾರ ಹೆಬ್ಬಾಳೆ 6 ಮತಗಳ ಮುನ್ನಡೆ ಸಾಧಿಸಿದ್ದಾರೆ.

ಕಮಲನಗರ ತಾಲೂಕಿನಲ್ಲಿ ಸುರೇಶ ಚೆನಶೆಟ್ಟಿಗೆ 307, ರಾಜಕುಮಾರ ಹೆಬ್ಬಾಳೆಗೆ 123, ಸಂಜೀವಕುಮಾರ್ ಅತಿವಾಳೆಗೆ 12 ಹಾಗೂ ಸಿದ್ದಲಿಂಗಯ್ಯ ಭಂಕಲಗಿ ಅವರಿಗೆ 1 ಮತ್ತು 5 ಮತಗಳು ತಿರಸ್ಕøತಗೊಂಡು ಸುರೇಶ ಚೆನಶೆಟ್ಟಿಗೆ 184 ಮತಗಳ ಮುನ್ನಡೆ ಸಿಕ್ಕಿದೆ.

ಭಾಲ್ಕಿ ತಾಲೂಕಿನ ಎರಡೂ ಬೂತ್‍ಗಳಲ್ಲಿ ಸುರೇಶ ಚೆನಶೆಟ್ಟಿಗೆ 562, ರಾಜಕುಮಾರ ಹೆಬ್ಬಾಳೆಗೆ 463, ಸಂಜೀವಕುಮಾರ್ ಅತಿವಾಳೆಗೆ 67 ಹಾಗೂ ಸಿದ್ದಲಿಂಗಯ್ಯ ಅವರಿಗೆ 7 ಮತ್ತು 10 ಮತಗಳು ತಿರಸ್ಕøತಗೊಂಡು ಸುರೇಶ ಚೆನಶೆಟ್ಟಿಗೆ 99 ಮತಗಳ ಮುನ್ನಡೆ ಸಿಕ್ಕಿದೆ.

ಔರಾದ್ ತಾಲೂಕಿನಲ್ಲಿ ಸುರೇಶ ಚೆನಶೆಟ್ಟಿಗೆ 510, ರಾಜಕುಮಾರ ಹೆಬ್ಬಾಳೆಗೆ 255, ಸಂಜೀವಕುಮಾರ್ ಅತಿವಾಳೆಗೆ 24 ಹಾಗೂ ಸಿದ್ದಲಿಂಗಯ್ಯ ಭಂಕಲಗಿ ಅವರಿಗೆ 6 ಮತ್ತು 6 ಮತಗಳು ತಿರಸ್ಕøತಗೊಂಡು ಸುರೇಶ ಚೆನಶೆಟ್ಟಿಗೆ 255 ಮತಗಳ ಮುನ್ನಡೆ ಸಿಕ್ಕಿದೆ.

ಒಟ್ಟಾರೆ ಇಡೀ ಜಿಲ್ಲೆಯಲ್ಲಿ ಹುಲಸೂರ, ಬಸವಕಲ್ಯಾಣ ಹಾಗೂ ಚಿಟಗುಪ್ಪ ಹೊರತುಪಡಿಸಿದರೆ ಉಳಿದೆಲ್ಲ ಕಡೆ ಚನಶೆಟ್ಟಿ ಮುನ್ನಡೆ ಸಾಧಿಸಿ ರಾಜಕುಮಾರ ವಿರೂದ್ಧ 903 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ನಿನ್ನೆ ರಾತ್ರಿ 8.30 ಗಂಟೆ ಸುಮಾರಿಗೆ ಜಿಲ್ಲೆಯ ಎಲ್ಲ ಬೂತಗಳಲ್ಲಿನ ಫಲಿತಾಂಶ ಹೊರಬಿದ್ದ ತಕ್ಷಣ ಸುರೇಶ ಹಾಗೂ ಅವರ ಬೆಂಬಲಿಗರು ಪಟಾಕಿ ಸಿಡಿಸಿ, ಪರಸ್ಪರ ಸಿಂಹಿ ಹಂಚಿ, ದಿಜೆ ಸೌಂಡ್‍ಗೆ ಕುಣಿದು ಕುಪ್ಪಳಿಸಿದರು.