ಕಸಾಪ ಜಿಲ್ಲಾಧ್ಯಕ್ಷರಾಗಿ ಬಿ.ವಾಮದೇವಪ್ಪ ಆಯ್ಕೆ

ದಾವಣಗೆರೆ. ನ.೨೨;  ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು ದಾವಣಗೆರೆ ಜಿಲ್ಲಾಧ್ಯಕ್ಷರಾಗಿ  ಬಿ.ವಾಮದೇಪ್ಪ ಆಯ್ಕೆಗೊಂಡಿದ್ದಾರೆ. ವಾಮದೇವಪ್ಪ ಅವರು 3102 ಮತಗಳ ಅಂತರದಿಂದ ಗೆಲುವು ಪಡೆದಿದ್ದಾರೆ.ಈ ವೇಳೆ ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಪದಾಧಿಕಾರಿಗಳಿಂದ ಅಭಿನಂದನೆ ಸಲ್ಲಿಸಿದ್ದಾರೆ.ಕಲಾಕುಂಚದ ಪದಾಧಿಕಾರಿಗಳಾದ ಸಾಲಿಗ್ರಾಮ ಗಣೇಶ್ ಶೆಣೈ,ಜಿ.ಬಿ.ಲೋಕೇಶ್, ಹೇಮಾ ಶಾಂತಪ್ಪ ಪೂಜಾರಿ, ಜ್ಯೋತಿ ಗಣೇಶ್ ಶೆಣೈ, ಶೈಲಾ ವಿಜಯ್ ಕುಮಾರ್ ,ಬಿ.ಶಾಂತಪ್ಪ ಪೂಜಾರಿ,ಲತಾ ಪರಮೇಶ್ವರ,, ವಿಜಯ ಕುಮಾರ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.