ಕಸಾಪ ಚುನಾವಣೆ: ಸ್ಪರ್ಧೆ ಬಯಸಿ ನಾಮಪತ್ರ ಸಲ್ಲಿಸಿದ ಕರಣಂ

ಬಳ್ಳಾರಿ ಮಾ 31 : ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಮೇ 09 ರಂದು ನಡೆಯುವ ಚುನಾವಣೆಗೆ ಸ್ಪರ್ಧೆ ಬಯಸಿ ಇಂದು ಅಭ್ಯರ್ಥಿ ವಿನೋದ ಕರಣಂ ರವರು ತಾಲೂಕು ಕಚೇರಿಯಲ್ಲಿ ಸಹಾಯಕ ಚುನಾವಣಾಧಿಕಾರಿ ಶಿವಲಿಂಗರೆಡ್ಡಿ ಅವರಿಗೆ ನಾಮ ಪತ್ರ ಸಲ್ಲಿಸಿದರು.
ಜಿಲ್ಲೆಯ ಅಧ್ಯಕ್ಷ ಸ್ಥಾನಕ್ಕೆ, ನಾಮಪತ್ರ ಸಲ್ಲಿಸಿದ ಮೊದಲ, ಮಹಿಳಾ ಅಭ್ಯರ್ಥಿಯಾಗಿದ್ದಾರೆ.
ನಾಮ ಪತ್ರ ಸಲ್ಲಿಸಿದ ನಂತರ ಅವರು‌ ಮಾತನಾಡಿ ಬಳ್ಳಾರಿ ಜಿಲ್ಲೆಯ ಕಸಾಪ ಆಜೀವ ಸದಸ್ಯರು ನನಗೆ ಮತ ನೀಡಿ ಬಹುಮತದಿಂದ ಗೆಲ್ಲುಸುತ್ತಾರೆ ಎಂಬ ನಂಬಿಕೆ ಇದೆ.
ಅಧ್ಯಕ್ಷಸ್ಥಾನಕ್ಕೆ ಈವರಗೆ ಯಾರು ಸ್ಪರ್ಧೆ ಮಾಡಿರಲಿಲ್ಲ. ನಾನು ಸ್ಪರ್ಧೆ ಮಾಡಿರುವೆ. ಮಹಿಳೆಗೂ ಅವಕಾಶ ನೀಡಲಿದ್ದಾರೆಂದರು.
ಅದಕ್ಕೂ ಮುನ್ನ ಅವರು ದುರಗಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ತಮ್ಮ ಬೆಂಬಲಿಗರಾದ ಸಿಎಂ.ಗಂಗಾಧರಯ್ಯ, ಪದ್ಮಾವತಿ, ಶೈಲಾ ಸುರೇಶ್, ಅಲುವೇಲು, ಕಮಲ ಬಸವರಾಜ್, ಭಾಗ್ಯಲಕ್ಷ್ಮಿ, ವಿದ್ಯಾ ರಾಮಚಂದ್ರ ರಾವ್, ಸಿಎಂ.ಪೂರ್ಣಿಮಾ, ವಿ.ಬಾಬು, ಬಸವರಾಜ್ ಬಳೆ, ರಾಮಪ್ರಸಾದ್, ವೈದ್ಯನಾಥ, ವಿರುಪಾಕ್ಷಯ್ಯ ಹಿರೇಮಠ, ಕೆ.ವೀರಭದ್ರಗೌಡ, ಜಿ.ಎಸ್.ಮೃತ್ಯುಂಜಯ್ಯ, ಡಾ: ಅರುಣಾ ಕಾಮನೇನಿ, ರಾಮಚಂದ್ರಯ್ಯ, ಶ್ರೀನಿವಾಸ್ ಪಾಟೀಲ್ ಮೊದಲಾದವರು ಇದ್ದರು.