ಕಸಾಪ ಚುನಾವಣೆ ಶಿವಕುಮಾರ್ ನಾಮಪತ್ರ ಸಲ್ಲಿಕೆ

ಕೋಲಾರ,ಏ.೯: ಕನ್ನಡ ಸಾಹಿತ್ಯ ಪರಿಷತ್ತು ಚುನಾವಣೆಗೆ ಕೋಲಾರ ನಗರದ ಕಾರಂಜಿಕಟ್ಟೆ ವಿ.ಶಿವಕುಮಾರ್ ಅವರು ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಹಾಲಿ ಅಧ್ಯಕ್ಷರು ಮತ್ತೊಮ್ಮೆ ಚುನಾವಣೆಗೆ ಸ್ಪರ್ಧಿಸುತ್ತಿರುವುದು ನೋಡಿದರೆ ಅವರಿಗೆ ಅಧಿಕಾರದ ಆಸೆ ಹೆಚ್ಚಾಗಿರುವಂತೆ ಕಾಣುತ್ತಿದೆ. ಆದರೆ ಕೋಲಾರ ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ, ಜನಪದ, ಕಲೆ, ಸಂಸ್ಕೃತಿಗಳನ್ನು ಎತ್ತಿ ಹಿಡಿಯದೆ ಕೇವಲ ಕಾರ್ಯಕ್ರಮಗಳ ಪ್ಲೆಕ್ಸ್, ಬಂಟಿಂಗ್ಸ್, ಬ್ಯಾನರ್‍ಗಳನ್ನು ಹಾಕಿ ಕನ್ನಡ ಸಾಹಿತ್ಯ ಪರಿಷತ್ತು ಹಬ್ಬ ಮಾಡುವುದಲ್ಲ ಎಂದರು. ಕನ್ನಡವನ್ನು ಮತ್ತು ಕನ್ನಡ ಸಾಹಿತ್ಯವನ್ನು ಪ್ರತಿ ಕುಗ್ರಾಮಕ್ಕೂ ಕೊಂಡೊಯ್ಯವುದು, ಅಲ್ಲಿ ಕನ್ನಡದ ಕಂಪನ್ನು ಅವರು ಪಸರಿಸಿದ್ದರೆ ಅದು ಕನ್ನಡಕ್ಕೆ ಕೊಟ್ಟಂತಹ ಗೌರವವಾಗುತ್ತಿತ್ತು. ಆದರೆ ಅವರು, ಅದನ್ನು ಮಾಡದೆ ಕೇವಲ ಜಿಲ್ಲೆ, ತಾಲೂಕು ಕೆಂದ್ರಗಳಲ್ಲಿ ಕಾರ್ಯಕ್ರಮಗಳನ್ನು ಮಾಡುತ್ತಾ ಇದೇ ತಮ್ಮ ಐದು ವರ್ಷದ ಕಾರ್ಯ ಸಾಧನೆಯೆಂದು ತಿಳಿದುಕೊಂಡಿದ್ದಾರೆಂದರು.
ಆದ್ದರಿಂದ ತಾವುಗಳು ಕನ್ನಡ ನೆಲ, ಭಾಷೆ, ವಿಚಾರವಾಗಿ ಹಾಗೂ ಹೋರಾಟಗಳನ್ನು ಮಾಡಿಕೊಂಡು ಚಳುವಳಿಗಳಲ್ಲಿ ಭಾಗವಹಿಸುತ್ತಾ ಬಂದಿರುವಂತ ನಮ್ಮಂತಹವರಿಗೆ ಒಂದು ಅವಕಾಶ ಮಾಡಿಕೊಟ್ಟಿದ್ದೇ ಆದಲ್ಲಿ ಕನ್ನಡದ ಕಂಪು ಪ್ರತಿ ಗ್ರಾಮದಲ್ಲೂ ಅರಳುವಂತೆ ಮಾಡುವ ಕೆಲಸವನ್ನು ಮಾಡುತ್ತೇನೆ ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಸೀಪೂರು ಗಂಗಾಧರ್, ಕೆಂಬೋಡಿ
ಸಿ.ನಾರಾಯಣಸ್ವಮಿ, ಛತ್ರಕೋಡಿಹಳ್ಳಿ ನಾರಾಯಣಸ್ವಾಮಿ, ದಲಿತ ಮುಖಂಡ ಚಿನ್ನಾಪುರ ವೆಂಕಟೇಶ್, ಕನ್ನಡ ಸೇವಕ ಮಂಜುನಾಥಚಾರಿ, ಅಂಬರೀಶ್, ಹೂಹಳ್ಳಿ ಹನುಮಪ್ಪ ಇನ್ನು ಹಲವಾರು ಮುಖಂಡರು ಉಪಸ್ಥಿತರಿದ್ದರು.