ಕಸಾಪ ಚುನಾವಣೆ : ಭೀಮನಗೌಡ ಇಟಗಿ ಬೆಂಬಲಿಗರ ಸಭೆ

ಮಾನ್ವಿ.ಮಾ.೨೨-ಮೇ ೯ರಂದು ನಡೆಯಲಿರುವ ಕಸಾಪ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಭೀಮನಗೌಡ ಇಟಗಿಯವರು ಸ್ಪರ್ಧಿಸಲಿದ್ದು ಅವರಿಗೆ ಸಾಹಿತ್ಯ ಅಭಿಮಾನಿಗಳು ಬೆಂಬಲ ನೀಡಿ ಆರಿಸಿ ತರಬೇಕೆಂದು ಕಸಾಪ ಜಿಲ್ಲಾಧ್ಯಕ್ಷ ಡಾ.ಬಸವಪ್ರಭು ಪಾಟೀಲ್ ಮನವಿ ಮಾಡಿದರು.
ಪಟ್ಟಣದ ಬಿ.ವಿ.ಆರ್ ಶಿಕ್ಷಣ ಸಂಸ್ಥೆಯಲ್ಲಿ ಶನಿವಾರ ಸಂಜೆ ಭೀಮನಗೌಡ ಇಟಗಿ ಪರ ನಡೆದ ಸಭೆಯಲ್ಲಿ ಮಾತನಾಡಿದ ಅವರು ಸಾಹಿತ್ಯ ಕ್ಷೇತ್ರದಲ್ಲಿ ನಮ್ಮ ಅವಧಿಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ಜಿಲ್ಲಾ ಸಾಹಿತ್ಯ ಸಮ್ಮೇಳನ ತಾಲೂಕು ಮಟ್ಟದ ಸಮ್ಮೇಳನಗಳು ಅತ್ಯಂತ ಆಧೂರಿಯಾಗಿ ಕಾರ್ಯಕ್ರಮ ಮಾಡಿಲಾಗಿದೆ.
ಭೀಮನಗೌಡ ಇಟಿಗಿ ಅವರು ಸಾಹಿತ್ಯ ಸಂಘಟನೆಯಲ್ಲಿ ತಮ್ಮ ಸೇವೆ ಸಲ್ಲಿಸಿದ್ದಾರೆ ಈ ಬಾರಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಫರ್ಧಿಸಿದ್ದು ಇಟಿಗಿ ಅವರಿಗೆ ಜಯಗಳಿಸವುಂತೆ ಕೆಲಸ ಮಾಡಬೇಕು ಎಂದು ಹೇಳಿದರು.
ಇದು ಭೀಮನಗೌಡ ಇಟಗಿ ಅವರ ಚುನಾವಣೆ ಅಲ್ಲ. ಇದು ಡಾ.ಬಸವಪ್ರಭು ಪಾಟೀಲ್ ಅವರ ಚುನಾವಣೆ ಎಂದು ನಾನು ತಿಳಿದುಕೊಂಡಿದ್ದು ಈ ನಿಟ್ಟಿನಲ್ಲಿ ಚುನಾವಣೆ ಕಾರ್ಯ ಮಾಡುವುದಾಗಿ ಹೇಳಿದರು.
ಪ್ರತಿ ಮನೆ ಮನಗೆ ಭೇಟಿ ನೀಡಿ ಭೀಮನಗೌಡ ಇಟಿಗಿ ಅವರಿಗೆ ಬೆಂಬಲಸಿ ಮತ ಕೇಳುವುದು ನಮ್ಮ ಆದ್ಯತೆ ಕರ್ತವ್ಯ ಎಂದು ಪಾಟೀಲ್ ಅವರು ಹೇಳಿದರು.
ಈ ಸಭೆಯಲ್ಲಿ ಮುಖಂಡರು ಮಾತನಾಡಿ ಭೀಮನಗೌಡ ಇಟಗಿ ಗೆಲ್ಲುವ ಕುರಿತು ಕಾರ್ಯಯೋಜನೆ ಬಗ್ಗೆ ತಿಳಿಸಿದರು.
ಈ ಸಂದರ್ಭದಲ್ಲಿ.ಬಸವಪ್ರಭು ಪಾಟೀಲ್, ಮಹ್ಮದ ಮುಜೇಬು,
.ಡಿ ಜಿ ಕರ್ಕಿಳ್ಳಿ, ಸಿದ್ದಲಿಂಗಯ್ಯ ಸ್ವಾಮಿ, ಮೂಕಪ್ಪ ಕಟ್ಟಿಮನಿ, ಶೈಲಗೌಡ, ಸುರೇಶ್ ಕುರ್ಡಿ, ರಾಮಲಿಂಗಪ್ಪ, ಪಿ.ಪರಮೇಶ, ವೀರೇಶ್, ಶಿವರಾಜ್ ಜಾನಕೇಲ್, ನಾಗರತ್ನಮ್ಮ ಪಾಟೀಲ್, ಹನುಮಂತಪ್ಪ ಭಂಡಾರಿ, ವೀರನಗೌಡ ಪೋತ್ನಾಳ, ಜಿ ಎಲ್ ಈರಣ್ಣ, ಮನೋಹರ, ಹರೀಫ್ ಮಿಯ್ಯಾ, ಗುಮ್ಮಾ ಬಸವರಾಜ ವಕೀಲರು, ರೇವಣ್ಣ ಸಿದ್ದಯ್ಯ ಸ್ವಾಮಿ, ಮೌನೇಶ ಬ್ಯಾಗವಾಟ್, ಸುಭಾನ್ ಬೇಗ, ಸಿ ಎಮ್ ನರಸಿಂಹ, ಗೋಪಿಚಂದ್ ರಾಠೋಡ, ಲಿಂಗಮ್ಮ ಕರ್ಕಿಳ್ಳಿ, ಅಂಜನಾ, ಶೈಲ ಅಂಗಡಿ, ಸಿದ್ದಲಿಂಗಶ್ವರ, ಚಂದ್ರಶೇಖರ ಮದ್ಲಾಪೂರು, ಅಶೋಕ್ ತಡಕಲ್, ಶರಣಬಸವ ಪೂಜಾರಿ, ನೀಲಮ್ಮ, ಸರೋಜಾ ಗುಮ್ಮಾ, ಇನ್ನಿತರ ಅನೇಕರು ಸಾಹಿತ್ಯ ಅಭಿಮಾನಿಗಳು ಭಾಗವಹಿಸಿದ್ದರು.