ಕಸಾಪ ಚುನಾವಣೆ: ಬಿ.ಎಸ್.ವಿನಯ್ ನಾಮಪತ್ರ ಸಲ್ಲಿಕೆ

ಚಾಮರಾಜನಗರ, ಏ.5- ಚಾಮರಾಜನಗರ ಜಿಲ್ಲಾ ಕಸಾಪ ಅಧ್ಯಕ್ಷ ಸ್ಥಾನಕ್ಕೆ ಮೇ 8 ರಂದು ನಡೆಯಲಿರುವ ಚುನಾವಣೆಗೆ ಕಸಾಪ ಪ್ರಭಾರ ಅಧ್ಯಕ್ಷ ಬಿ.ಎಸ್.ವಿನಯ್ ಶನಿವಾರ ನಾಮಪತ್ರ ಸಲ್ಲಿಸಿದರು.
ಮಧ್ಯಾಹ್ನ ಚಾಮರಾಜನಗರದ ತಾಲ್ಲೂಕು ಕಚೇರಿಯಲ್ಲಿ ನೂರಾರು ಮಿತ್ರರು ಹಾಗೂ ಹಿತೈಷಿಗಳ ಜೊತೆ ಆಗಮಿಸಿ ನಾಮಪತ್ರ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು, ಕಳೆದ ಐದು ವರ್ಷಗಳ ಅವಧಿಯಲ್ಲಿ ಕಸಾಪ ಅಧ್ಯಕ್ಷನಾಗಿ ಉತ್ತಮ ಸೇವೆ ಸಲ್ಲಿಸಿರುವ ತೃಪ್ತಿ ಇದೆ. ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತು ಮನೆ ಮನೆಗೆ ತಲುಪಿಸುವ ಜೊತೆಗೆ ಗಡಿ ಜಿಲ್ಲೆಯಲ್ಲಿ ಕನ್ನಡ ಕಂಪು ಹೆಚ್ಚ್ಚಿದೆ ಹೆಚ್ಚು ಮಂದಿಯನ್ನು ಪರಿಷತ್‍ಗೆ ಸದಸ್ಯತ್ವವನ್ನು ನೀಡಿ ಅವರಲ್ಲಿ ಸಾಹಿತ್ಯ ಅಸಕ್ತಿ ಮೂಡಿಸುವಲ್ಲಿ ಶ್ರಮ ವಹಿಸಿದ್ದೇನೆ.
ಐದು ವರ್ಗಗಳ ಸೇವೆಯ ಜೊತೆಗೆ ಇನ್ನು ಹೆಚ್ಚಿನ ಸೇವೆಯನ್ನು ಮಾಡಬೇಕು. ಜಿಲ್ಲೆಯಲ್ಲಿ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆ ಮಾಡಬೇಕು. ಜಿಲ್ಲೆಯಲ್ಲಿ ಗಡಿ ಭವನ ನಿರ್ಮಾಣವಾಗಬೇಕು, ಇನ್ನು ಹೆಚ್ಚು ಹೆಚ್ಚ್ಚು ಯುವಕರು, ಯುವತಿಯರಿಗೆ ಸಾಹಿತ್ಯ ಪರಿಷತ್ ಸದಸ್ಯತ್ವವನ್ನು ನೀಡಿ ಅವರು ಕನ್ನಡಾಂಬೆ ತೇರು ಎಳೆಯಬೇಕು. ಭುವನೇಶ್ವರಿಯ ಸೇವೆ ಮಾಡಬೇಕೆಂಬ ಕಲ್ಪನೆಯೊಂದಿಗೆ ಮತ್ತೊಮ್ಮೆ ಆಯ್ಕೆ ಬಯಸಿ, ಹಿರಿಯರ ಅಶೀರ್ವಾದ ಹಾಗೂ ಹಿತೈಷಿಗಳು ಮತ್ತು ಸ್ನೇಹಿತರ ವಿಶ್ವಾಸದೊಂದಿಗೆ ಚುನಾವಣೆಗೆ ಸ್ಪರ್ಧೆ ಮಾಡಿರುವುದಾಗಿ ವಿನಯ್ ತಿಳಿಸಿದರು.
ಈ ಸಂದರ್ಭದಲ್ಲಿ ಸಾಹಿತಿ ನವಮಿ ಬಂಡಿಗೆರೆ, ವೀರಶೈವ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಡಾ.ಪರಮೇಶ್ವರಪ್ಪ, ಬಂಗಾರಗಿರಿನಾಯಕ, ವೆಂಕಟ ಮಾದೇಗೌಡ, ಮಹದೇವ ನಾಯಕ, ಜಿ.ರಾಜಪ್ಪ, ಪುಟ್ಟಸ್ವಾಮಿ, ನಿರಂಜನ್ ಕುಮಾರ್, ರೇಚಣ್ಣ, ರಾಜು, ಕಿರಣ್ ರಾಜ್, ಗುರುಪ್ರಸಾದ್, ದೊರೆಸ್ವಾಮಿ, ಗುರುಸ್ವಾಮಿ, ಅಂಜನಾ, ಶ್ರೀನಿವಾಸನಾಯ್ಡು, ಶಿವಾಲಂಕಾರ್, ಮಹಾಂತಯ್ಯ, ಗುರುಸಿದ್ದಪ್ಪ, ಸಿದ್ದಮಲ್ಲಪ್ಪ, ಮಾ.ಮಹೇಶ್, ಮ.ಬಸವರಾಜು, ಪರಶಿವಮೂರ್ತಿ, ಬಸವಣ್ಣ, ಕೆಂಪಣ್ಣ, ಮಧು, ಸೇರಿದಂತೆ ನೂರಾರು ಮಂದಿ ಹಾಜರಿದ್ದರು.