ಕಸಾಪ ಚುನಾವಣೆ : ಬಿರುಸಿನ ಮತದಾನ


ಶಿವಮೊಗ್ಗ, ನ. 21: ಕನ್ನಡ ಸಾಹಿತ್ಯ ಪರಿಷತ್  ಶಿವಮೊಗ್ಗ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಭಾನುವಾರ ಬೆಳಿಗ್ಗೆ 8 ಗಂಟೆಯಿಂದ ಮತದಾನ ಪ್ರಕ್ರಿಯೆ ಆರಂಭವಾಯಿತು. ಮಧ್ಯಾಹ್ನ 12 ಗಂಟೆಯವರೆಗೆ ಶೇ. 24.67 ರಷ್ಟು ಮತದಾನವಾಗಿತ್ತು.
ಆಯಾ ತಾಲೂಕು ಕೇಂದ್ರದ ತಾಲೂಕು ಕಚೇರಿಯಲ್ಲಿ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಮತದಾನ ಪ್ರಕ್ರಿಯೆ ಪೂರ್ಣಗೊಂಡ ನಂತರ, ಸಂಜೆ 4 ಗಂಟೆ ಬಳಿಕ ಮತ ಎಣಿಕೆ ಕಾರ್ಯ ಆರಂಭವಾಗಲಿದೆ. 
ನಾಲ್ವರು ಅಭ್ಯರ್ಥಿಗಳು ಅಖಾಡದಲ್ಲಿದ್ದಾರೆ. ಕಸಾಪ ಮಾಜಿ ಅಧ್ಯಕ್ಷರುಗಳಾದ ಡಿ. ಮಂಜುನಾಥ್, ಡಿ.ಬಿ.ಶಂಕರಪ್ಪ, ಪತ್ರಕರ್ತರುಗಳಾದ ಶಿ.ಜು.ಪಾಶ ಹಾಗೂ ಗಾ.ರಾ.ಶ್ರೀನಿವಾಸ್ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. 
ಒಟ್ಟಾರೆ ಜಿಲ್ಲೆಯಲ್ಲಿ 9143 ಮತದಾರರಿದ್ದಾರೆ. ಶಿವಮೊಗ್ಗ ತಾಲೂಕಿನಲ್ಲಿ 2811, ಶಿಕಾರಿಪುರ 1999, ಭದ್ರಾವತಿ 1202, ತೀರ್ಥಹಳ್ಳಿ 730, ಹೊಸನಗರ 1052, ಸಾಗರ 839 ಹಾಗೂ ಸೊರಬ ತಾಲೂಕಿನಲ್ಲಿ 510 ಮತದಾರರಿದ್ದಾರೆ.