ಕಸಾಪ ಚುನಾವಣೆ: ಬಿರುಸಿನ ಮತದಾನ

ಮೈಸೂರು: ನ.21:- ಕನ್ನಡದ ನೆಲೆ, ಜಲ, ಭಾಷೆಗೂ ಹೆಸರಾಗಿರುವ ಸಾಂಸ್ಕೃತಿಕ ನಗರಿ ಮೈಸೂರು ಸೇರಿದಂತೆ ಇಂದು ರಾಜ್ಯಾಧ್ಯಂತ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ಕಾರ್ಯಕಾರಿ ಮಂಡಳಿಯ ಚುನಾವಣೆ ಮತದಾನ ಬಿರುಸಿನಿಂದ ಸಾಗಿದೆ.
ಮೈಸೂರು ಜಿಲ್ಲೆಯಲ್ಲೂ ಮತದಾನ ನಡೆಯುತ್ತಿದ್ದು, ತಾಲೂಕು ಕೇಂದ್ರಗಳಲ್ಲಿ ಸ್ಥಾಪಿಸಿರುವ ಮತಗಟ್ಟೆಗಳಲ್ಲಿಯೂ ಕಸಾಪ ಸದಸ್ಯರು ಮತದಾನ ಮಾಡುತ್ತಿದ್ದಾರೆ.
ಇಂದು ಬೆಳಿಗ್ಗೆ 8 ಗಂಟೆಯಿಂದ ಸಂಜೆ 4ಗಂಟೆಯವರೆಗೆ ಮೈಸೂರಿನ ಜೆ.ಎಲ್.ಬಿ ರಸ್ತೆಯಲ್ಲಿರುವ ಮಹಾರಾಣಿ ಕಾಲೇಜಿನ 7 ಮತಗಟ್ಟೆಗಳಲ್ಲಿ ಚುನಾವಣೆ ನಡೆಯಲಿದೆ. ಇದಲ್ಲದೆ ಜಿಲ್ಲೆಯ ಟಿ.ನರಸೀಪುರ, ನಂಜನಗೂಡು, ಹುಣಸೂರು, ಹೆಚ್.ಡಿ.ಕೋಟೆ, ಸರಗೂರು, ಪಿರಿಯಾಪಟ್ಟಣ ತಾಲ್ಲೂಕುಗಳು ಸೇರಿದಂತೆ ಮೈಸೂರು ಜಿಲ್ಲೆಯ ಬನ್ನೂರಿನಲ್ಲಿ ಚುನಾವಣೆ ನಡೆಯಲಿದೆ. ಇಂದು ಸಂಜೆಯೇ ಫಲಿತಾಂಶ ತಿಳಿಯಲಿದೆ.
ಮೈಸೂರು ಕಸಾಪ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಮಡ್ಡಿಕೇರೆ ಗೋಪಾಲ್, ಬನ್ನೂರು ರಾಜು ಹಾಗೂ ನಾಗರಾಜ್ ಅವರು ಸ್ಪರ್ಧಿಸಿದ್ದು, ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದು, ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದೆ.
ಚುನಾವಣೆಯಲ್ಲಿ ನಕಲು ಮತದಾನ ತಡೆಗಟ್ಟುವ ನಿಟ್ಟಿನಲ್ಲಿ ಮಹತ್ವದ ಕ್ರಮವನ್ನು ಚುನಾವಣಾ ಆಯೋಗ ಕೈಗೊಂಡಿದ್ದು, ಮತ ಚಲಾಯಿಸಲು, ಮತದಾರರಿಗೆ ಈ ಕೆಲ ಗುರುತಿನ ಚೀಟಿ ಕಡ್ಡಾಯಗೊಳಿಸಲಾಗಿದೆ.
ಯಾವ ಮತದಾರರ ಬಳಿ ಕನ್ನಡ ಸಾಹಿತ್ಯ ಪರಿಷತ್ತು ನೀಡಿರುವ ಭಾವಚಿತ್ರ ಸಹಿತ ಗುರುತಿನ ಚೀಟಿ ಇರುವುದಿಲ್ಲವೋ ಅಂತಹ ಮತದಾರರು, ಈ ಕೆಳಕಂಡ 18 ವಿವಿಧ ರೀತಿಯ ದಾಖಲಾತಿಗಳನ್ನು ಮತದಾನದ ಸಂದರ್ಭದಲ್ಲಿ ಹಾಜರುಪಡಿಸಿ, ತಮ್ಮ ಮತವನ್ನು ಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ.
ಕಳೆದ ಬಾರಿ ಚುನಾವಣೆ ಹಿನ್ನೋಟ:
ಐದು ವರ್ಷಗಳ ಅವಧಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆ ನಡೆಯುತ್ತಾ ಬಂದಿದೆ. 2016ರ ಹಿಂದಿನ ಚುನಾವಣೆಯಲ್ಲಿ 8320 ಮತದಾರರಿದ್ದರು. ಅಂದು ಸ್ಪರ್ಧಿಗಳಾಗಿ ಬನ್ನೂರು ಕೆ.ರಾಜು ಅವರು 2100 ಮತಗಳಿಸಿದ್ದರೆ, ಅವರ ಪ್ರತಿಸ್ಪರ್ಧಿಯಾಗಿ ಡಾ.ವೈ.ಡಿ.ರಾಜಣ್ಣ 2738 ಮತ ಪಡೆದು ಅಧಿಕಾರ ಹಿಡಿದಿದ್ದರು. ಈಗ ಸದಸ್ಯತ್ವ ನೊಂದಣಿ ಹೆಚ್ಚಾಗಿದ್ದು, ಬರೋಬ್ಬರಿ 13260 ಮಂದಿ ಮತದಾರರು ನ.21ರ ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಈ ಬಾರಿ ಮತದಾರರ ಸಂಖ್ಯೆ 13ಸಾವಿರ ಮೀರಿದೆ.
ತ್ರಿಕೋನ ಸ್ಪರ್ಧೆ:
ಜಿಲ್ಲೆಯಲ್ಲಿ ಕಸಾಪ ಚುನಾವಣೆಗೆ ಕೊರೊನಾ ಅಡ್ಡಿಯಾಗಿ ಈಗ ಮುಕ್ತವಾಗಿ ಇನ್ನೂ ಹನ್ನೊಂದು ದಿನಗಳ ಅಂತಿಮ ಪ್ರಚಾರವಷ್ಟೇ ಇದೆ. ಈ ನಡುವೆ ಕಣದಲ್ಲಿ ಮೂವರಷ್ಟೇ ಸ್ಪರ್ಧಿಗಳಾಗಿ ಉಳಿದಿದ್ದಾರೆ. ಎರಡನೇ ಬಾರಿಗೆ ಅದೃಷ್ಠ ಪರೀಕ್ಷಿಗಿಳಿದಿರುವ ಮಡ್ಡಿಕೆರೆ ಗೋಪಾಲ್ ಹಾಗೂ ಬನ್ನೂರು ಕೆ.ರಾಜು ಮತ್ತು ಕೆ.ಎಸ್.ನಾಗರಾಜ್ ಮೂವರ ನಡುವಿನ ತ್ರಿಕೋನ ಸ್ಪರ್ಧೆ ನಡೆಯುತ್ತಿದೆ.
8ಮಂದಿ ಅಧ್ಯಕ್ಷರ ಕಂಡ ಕಸಾಪ:
1969ರಿಂದಲೂ ಕಸಪಾ ರಾಜ್ಯಧ್ಯಕ್ಷರೇ ಜಿಲ್ಲಾಧ್ಯಕ್ಷರನ್ನು ನೇಮಿಸುವ ವಾಡಿಕೆ ಚಾಲ್ತಿಯಲ್ಲಿತ್ತು. ಈ ಹಿನ್ನೆಲೆಯಲ್ಲಿ ಪೆÇ್ರ.ಶಂಕರನಾರಾಯಣ, ವಿ.ಎಚ್.ಗೌಡ, ಡಾ.ಮಳಲಿವಸಂತಕುಮಾರ್ ಅವರು ನೇರವಾಗಿ ಆಯ್ಕೆಯಾಗಿದ್ದರು. 1989ರಿಂದ ಚುನಾವಣೆ ಪ್ರಾರಂಭಗೊಂಡ ಬಳಿಕ ಬರೋಬ್ಬರಿ 1989ರಿಂದ 2004 ನಿ.ಗಿರಿಗೌಡ ಐದು ಅವಧಿ ಅಧ್ಯಕ್ಷರಾಗಿ ದಾಖಲೆ ನಿರ್ಮಿಸಿ ಜಿಲ್ಲಾ ಕಸಾಪದಲ್ಲಿ ತಮ್ಮ ಕುರುಹು ಉಳಿಸಿದ್ದಾರೆ. ಅನಂತರ ಮಾನಸ, ಮಡ್ಡಿಕೆರೆ ಗೋಪಾಲ್, ಎಂ.ಚಂದ್ರಶೇಖರ್, ಡಾ.ವೈ.ಡಿ.ರಾಜಣ್ಣ ಅವರು ಕ್ರಮವಾಗಿ ಕಸಾಪದಲ್ಲಿ ಕನ್ನಡದ ಕಂಪು ಮೂಡಿಸುತ್ತಿದ್ದಾರೆ.
ಶಿಕ್ಷಕರು, ಸಾಹಿತಿಗಳು, ಚಿಂತಕರೇ ಮತದಾರರಾಗಿರುವುದರಿಂದ ಮತದಾರರ ಒಲವು ಯಾರ ಕಡೆ ಬೀಳಲಿದೆ ಎಂಬ ಕೂತೂಹಲ ಕೊನೆ ಕ್ಷಣದವರೆಗೂ ಗೌಪ್ಯವಾಗಿಯೇ ಉಳಿಯುವ ಹಿನ್ನೆಲೆಯಲ್ಲಿ ಬಿರುಸಿನ ಪ್ರಚಾರವೂ ಸಹ ಮೂವರಿಂದಲೂ ನಡೆಯುತ್ತಿದೆ. ಹೀಗಾಗಿ ಗ್ರಾಮಾಂತರ ಭಾಗದಲ್ಲಿ ದಿನವಿಡೀ ಪ್ರಯತ್ನಿಸುತ್ತಿರುವ ಸ್ಪರ್ಧೆಗಳು ಸಂಜೆ ನಗರದಲ್ಲಿ ಸಂಚರಿಸಿ ಮತದಾರರ ಮನವೊಲಿಸುವ ಪ್ರಕ್ರಿಯೆಯಲ್ಲಿ ನಿರತರಾಗಿದ್ದಾರೆ. ಮತದಾರರು ಯಾರಿಗೆ ತಮ್ಮ ಒಲವು ತೋರಲಿದ್ದಾರೆ ಎಂಬುದನ್ನು ಫಲಿತಾಂಶದ ಬಳಿಕವೇ ತಿಳಿಯಲಿದೆ.