ಕಸಾಪ ಚುನಾವಣೆ ಪಂಪಾಪತಿ ಪರ ಮತಯಾಚನೆ

(ಸಂಜೆವಾಣಿ ವಾರ್ತೆ)
ಬಳ್ಳಾರಿ ನ 09 : ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಇಟ್ಟಿಗಿ ಹೋಬಳಿಯಲ್ಲಿ ಬಳ್ಳಾರಿ ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷ ಸಿದ್ದರಾಮ ಕಲ್ಮಠ ಗೆಳೆಯರ ಬಳಗದಿಂದ ಜಿಲ್ಲಾ ಅಧ್ಯಕ್ಷಸ್ಥಾನದ ಅಭ್ಯರ್ಥಿ ಟಿ.ಎಂ.ಪಂಪಾಪತಿ ಪರ ಅವರ ಬೆಂಬಲಿಗರು  ಮತಯಾಚನೆ ಮಾಡಿದರು.
ಜಿಲ್ಲಾಧ್ಯಕ್ಷ ಸ್ಥಾನದ ಪ್ರಬಲ ಸ್ಪರ್ಧಿಯಾಗಿರುವ ಪಂಪಾಪತಿ ಅವರ ಪರವಾಗಿ ಹಡಗಲಿಯ ಸೊಪ್ಪಿನ ಕಾಳಮ್ಮ ಪದವಿ ಪೂರ್ವ ಕಾಲೇಜಿನ ಉಪಪ್ರಾಚಾರ್ಯ ಚಂದ್ರೇಗೌಡ ಮತ್ತು ಇತರ ಮತದಾರರುಗಳಲ್ಲಿ  ಮತಯಾಚನೆ ಮಾಡಲಾಯಿತು.
 ಅಂಶಿ ಪ್ರಕಾಶನದ ಪ್ರಕಾಶಕರು ಮತ್ತು ಸಂಪಾದಕರಾದ ಪಂಪಾಪತಿ ಇವರಿಗೆವ ಮತ ನೀಡುವ  ಮೂಲಕ  ಜಿಲ್ಲಾದ್ಯಕ್ಷರನ್ನಾಗಿ ಆಯ್ಕೆ ಮಾಡಿ, ಕನ್ನಡ ಸೇವೆ ಮಾಡಲು ಅವಕಾಶ ಕಲ್ಪಿಸಬೇಕೆಂದು  ಮನವಿ ಮಾಡಲಾಯಿತು.
ಹೂವಿನಹಡಗಲಿ ಕಸಾಪ ನಿಕಟಪೂರ್ವ ಅಧ್ಯಕ್ಷ  ಸದ್ಗುರು ಶಿವಯೋಗಿ ಡಾ.ಮಂಜುನಾಥ ಹಾಲಸ್ವಾಮೀಜಿ, ಗೌರವ ಕಾರ್ಯದರ್ಶಿ ಎಂ.ದಯಾನಂದ, ಕೋಶಾಧ್ಯಕ್ಷ ಪಿ.ಎಂ.ಕೊಟ್ರಸ್ವಾಮಿ. ಸರ್ವಧರ್ಮ ರಕ್ಷಣಾ ವೇದಿಕೆಯ ಅಧ್ಯಕ್ಷ ಬಿಚ್ಚುಗತ್ತಿ ಖಾಜಾಹುಸೇನ್, ಇಟ್ಟಿಗಿ ಹೋಬಳಿ ಅಧ್ಯಕ್ಷ ಹಾಲಪ್ಪ ಚಿಗಟೇರಿ ಹಾಗೂ ಕಾರ್ಯದರ್ಶಿ ಹಿ.ಮ.ಗುರುಬಸವರಾಜ್ ಅವರುಗಳಿ ಮತಯಾಚನೆಯಲ್ಲಿ ಪಾಲ್ಗೊಂಡಿದ್ದರು.