ಕಸಾಪ ಚುನಾವಣೆ ಜಿಲ್ಲಾದ್ಯಂತ ಉತ್ತಮ ಬೆಂಬಲ

ಮಾನ್ವಿ.ಏ.೨೨-ಮೇ.೯ರಂದು ನಡೆಯಲಿರುವ ಕಸಾಪ ಚುನಾವಣೆ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಮಲ್ಲಿಕಾರ್ಜುನ ಸ್ವಾಮಿ ಶಿಖರಮಠ ಅವರು ಸ್ಫರ್ಧಿಸಿದ್ದು ಈಗಾಗಲೇ ಜಿಲ್ಲಾದ್ಯಾಂದತ ಉತ್ತಮ ಬೆಂಬಲ ವ್ಯಕ್ತವಾಗಿದೆ ಎಂದು ಪ್ರಗತಿ ಕಾಲೇಜು ಪ್ರಾಚಾರ್ಯರು ಬಸವರಾಜ ಭೋಗಾವತಿ ಅವರು ಹೇಳಿದರು.
ಪಟ್ಟಣದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಯುವಕರಿಗೆ ಜಿಲ್ಲಾ ಕಸಾಪ ಮನ್ನಣೆ ನೀಡಬೇಕು ಎಂದು ಹೇಳಿದರು.
ಮನೆ ಮನೆಗೆ ಭೇಟಿ ನೀಡಿದಾಗ ಅಜೀವ ಸದಸ್ಯರು ಇತಂಹ ಯುವಕರು ಸಾಹಿತ್ಯ ಪರಿಷತನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಬದಲಾವಣೆ ಮಾಡಬೇಕು ಎಂದು ಸಲಹೆ ನೀಡಿದರು. ಹಾಗಾಗಿ ಈ ಬಾರಿ ಮಲ್ಲಿಕಾರ್ಜುನ ಸ್ವಾಮಿ ಶಿಖರಮಠ ಗೆಲುವು ವಿಶ್ವಾಸ ಇದೆ ಎಂದು ಅಭಿಮತ ವ್ಯಕ್ತಪಡಿಸಿದರು.
ನಂತರ ಕಸಾಪ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿ ಮಲ್ಲಿಕಾರ್ಜುನ ಸ್ವಾಮಿ ಶಿಖರಮಠ ಪ್ರಸ್ತುತ ಕನ್ನಡ ಭವನವನ್ನು ನವೀಕರಣಗೊಳಿಸುವುದು. ಜಿಲ್ಲಾ ಕನ್ನಡ ಭವನದಲ್ಲಿ ಜಿಲ್ಲೆಯ ಸಾಹಿತಿ ಪುಸ್ತಕಗಳನ್ನು ಸಂಗ್ರಹಿಸಿ ಗ್ರಂಥಾಲಯ ಮಾಡುವುದು ಹಾಗೂ ಸಾಹಿತಿಗಳು ಮಾಹಿತಿ ನೀಡುವುದು.
ತಾಲೂಕಿಗೊಂದು ಕನ್ನಡ ಭವನ ನಿರ್ಮಾಣಕ್ಕೆ ಆದ್ಯತೆ ನೀಡುವುದು. ಕಸಾಪ ಸಹಾಯ ವಾಣಿ ಆರಂಭಿಸಿ ಮತ್ತು ಪ್ರತಿ ಸದಸ್ಯರಿಗೆ ಕಸಾಪ ಕಾರ್ಯಕ್ರಮ ಚಟುವಟಿಕೆಗಳು ಮಾಹಿತಿ ನೀಡುವುದು.
ಯುವ ಬರಹಗಾರರಿಗೆ ಮತ್ತು ಯುವ ಸಾಹಿತಿಗಳಿಗೆ ಹಿರಿಯ ಬರಹಗಾರರಿಂದ ರಾಜ್ಯ ಮಟ್ಟದ ಕಾರ್ಯಗಾರ ಹಮ್ಮಿಕೊಳ್ಳಲಾಗವುದು. ಶಾಲೆ ಮಠಗಳಲ್ಲಿ ಸಾಹಿತ್ಯ ಕಾರ್ಯಕ್ರಮ ನಡಸಿವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಈರಣ್ಣ ಮರ್ಲಟ್ಟಿ, ಮಲ್ಲಿಕಾರ್ಜುನ ಸ್ವಾವಿ, ಮಂಜುನಾಥ ಬಾಗಲವಾಡ, ರವಿ ಜಾನಕೇಲ್, ಲಕ್ಷ್ಮಣ ಕಪಗಲ್ ಇನ್ನಿತರ ಉಪಸ್ಧಿತಿರ ಇದ್ದರು.