ಕಸಾಪ ಚುನಾವಣೆ : ಜಾತಿ ರಾಜಕೀಯ – ಆರೋಪ

ರಾಯಚೂರು.ನ.೨೩- ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ಜಾತಿ ರಾಜಕೀಯ ಚುನಾವಣೆ ಆಗಿದೆ ಎಂದು ರಾಮಪ್ಪ ಆರ್. ಎಚ್.ಜೆ ಅವರು ಗಂಭೀರವಾಗಿ ಆರೋಪಿಸಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ಕನ್ನಡ, ನಾಡ, ನುಡಿಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಸಾಹಿತ್ಯ ಸೀಮಿತವಾಗಬೇಕು ಎಂದು ಅವರು ಹೇಳಿದರು.
ಸಾಹಿತ್ಯ ಕ್ಷೇತ್ರ ಜಾತಿ ಧರ್ಮ ರಾಜಕೀಯಕ್ಕೆ ಸೀಮಿತವಗಬಾರದು. ಸಾಹಿತ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರಿಗೆ ಅವಕಾಶ ನೀಡಬೇಕು ಎಂದು ಅವರು ಹೇಳಿದರು. ಇದು ಅನೈತಿಕ ಚುನಾವಣೆ ಆಗಿದ್ದು, ಇಂತಹ ಚುನಾವಣೆಗಳಿಗೆ ಸಾಹಿತ್ಯಗಳು ಎಂದಿಗೂ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅಧ್ಯಕ್ಷರಾಗಲು ಸಾಧ್ಯವೇ ಇಲ್ಲ ಎಂದು ಅವರು ಅಸಮಾಧಾನ ಹೊರ ಹಾಕಿದರು.
ಈ ಸಂದರ್ಭದಲ್ಲಿ ಯೇಸು ಮಿತ್ರಾ ಮತ್ತು ಬಸವರಾಜ್ ಇದ್ದರು.