ಕಸಾಪ ಚುನಾವಣೆ- ಗೋಪಾಲಗೌಡ ಮತಯಾಚನೆ

ಕೋಲಾರ,ನ.೧೫: ತಾಲೂಕಿನ ಕೆಂಬೋಡಿ ಗ್ರಾಮದಲ್ಲಿ ಕಸಾಪ ಚುನಾವಣೆಯ ಪ್ರಚಾರದಲ್ಲಿ ಕಸಾಪ ಅಭ್ಯರ್ಥಿ ಎನ್.ಬಿ.ಗೋಪಾಲಗೌಡ ಮನೆ ಮನೆಗೂ ಬೇಟಿ ನೀಡಿ ಮಾತಯಾಚಿಸಿದರು.
ಈ ಸಂದರ್ಭದಲ್ಲಿ ಕಸಾಪ ಅಭ್ಯರ್ಥಿ ಎನ್.ಬಿ.ಗೋಪಾಲಗೌಡ ಮಾತನಾಡಿ, ನನಗೆ ಒಂದು ಅವಕಾಶ ನೀಡಿದ್ದೇ ಆದಲ್ಲಿ ಕೆಂಬೋಡಿ ಗ್ರಾಮದಲ್ಲಿ ಒಳ್ಳೆಯ ಕನ್ನಡ ಕಾರ್ಯಕ್ರಮಗಳನ್ನು ನಡೆಸುವುದಾಗಿ ಭರವಸೆ ನೀಡಿದರು.
ದೇಶದಲ್ಲಿ ಕೋಲಾರ ಜಿಲ್ಲೆಯ ಹೆಸರು ಬರಲು ನಾನಾ ಕ್ಷೇತ್ರದಲ್ಲಿ ಪ್ರತಿಭೆಗಳು ಹೊರಬರಲು ಕೆಂಬೋಡಿ ಶಾಲೆ ಹಾಗೂ ಗ್ರಾಮ ಮುಂಚೂಣಿಯಲ್ಲಿದೆ. ಇಂತಹ ಸಂದರ್ಭದಲ್ಲಿ ಹಳ್ಳಿಯಲ್ಲಿ ಕನ್ನಡ ಸಾಹಿತ್ಯ ಕಾರ್ಯಕ್ರಮ ಆಯೋಜನೆ ಮಾಡದೆ ಇರುವುದಕ್ಕೆ ಬೇಸರ ಹೊರಹಾಕಿದರು.
ಈ ನಿಟ್ಟಿನಲ್ಲಿ ಕಸಾಪ ಚುನಾವಣೆಯಲ್ಲಿ ಅಭ್ಯರ್ಥಿಯಾಗಿದ್ದು, ಮತದಾರರು ಒಂದು ಅವಕಾಶವನ್ನು ನೀಡಿದರೆ ಮುಂಬರುವ ದಿನಗಳಲ್ಲಿ ಕೆಂಬೋಡಿ ಗ್ರಾಮದಲ್ಲಿ ಕಸಾಪ ವತಿಯಿಂದ ಅದ್ದೂರಿ ಕನ್ನಡ ಸಾಹಿತ್ಯ ಕಾರ್ಯಕ್ರಮಗಳನ್ನು ಮಾಡಲು ಭರವಸೆಯನ್ನು ನೀಡಿದರು.
ಮತ ಯಾಚನೆ ಸಂದರ್ಭದಲ್ಲಿ ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ನಾರಾಯಣಪ್ಪ, ಜಿಲ್ಲಾ ಕನ್ನಡ ಸಿರಿ ಸಾಹಿತ್ಯ ಪರಿಷತ್ ಅಧ್ಯಕ್ಷ ಸುಬ್ಬರಾಮಯ್ಯ, ಕಸಾಪ ಗೌರವ ಅಧ್ಯಕ್ಷ ಪರಮೇಶ್ವರನ್ ಸೇರಿದಂತೆ ನೂರಕ್ಕು ಹೆಚ್ಚುಜನ ಪ್ರಾಚಾರದಲ್ಲಿ ಭಾಗವಹಿಸಿದ್ದರು.