ಕಸಾಪ ಚುನಾವಣೆ ಕೆಂಪರಾಜ್ ಗೆಲುವಿಗೆ ಮನವಿ

ಕೋಲಾರ,ಏ.೨೮- ಮುಂದಿನ ತಿಂಗಳು ೯ ರಂದು ನಡೆಯಲಿರುವ ಕಸಾಪ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯಾಗಿ ಸ್ವರ್ಧಿಸಿರುವ ನಾಗಾನಂದ ಕೆಂಪರಾಜ್ ರವರು ಈಗಾಗಲೇ ಅಧ್ಯಕ್ಷರಾಗಿದ್ದ ತಮ್ಮ ಅವಧಿಯಲ್ಲಿ ಸುಮಾರು ೪೦ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ನಡೆಸಿದ್ದು, ಇದರ ಜೊತೆಗೆ ದಲಿತ ಸಾಹಿತ್ಯ ಸಮ್ಮೇಳನವು ನಡೆಸಿರುವುದು ಹೆಮ್ಮೆಯ ವಿಷಯವಾಗಿದ್ದು, ಜಿಲ್ಲಾಧ್ಯಕ್ಷರನ್ನಾಗಿ ಗೆಲ್ಲಿಸಬೇಕೆಂದು
ಕರ್ನಾಟಕ ದಲಿತ ಸಂಘರ್ಷ ಸಮಿತಿ(ಸಂಯೋಜಕ) ಯ ರಾಜ್ಯಾಧ್ಯಕ್ಷ ಡಾ.ಅಶ್ವಥನಾರಾಯಣ ಅಂತ್ಕೇಜ ಮನವಿ ಮಾಡಿದ್ದಾರೆ.
ಇದರೊಂದಿಗೆ ಜಿಲ್ಲೆಗೆ ಶಾಶ್ವತ ನೀರಾವರಿಗಾಗಿ ಬೈಕ್ ರ್ಯಾಲಿ, ವಿದ್ಯಾರ್ಥಿ ಜಾಥಾ, ಧರಣಿ ಮಂತಾದ ಕಾರ್ಯಕ್ರಮಗಳ ಮೂಲಕ ಅಂದಿನ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ಹಾಗೂ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ೬೦ನೇ ಕರ್ನಾಟಕ ಏಕೀಕರಣದ ವಜ್ರ ಮಹೋತ್ಸವದ ಕಾರ್ಯಕ್ರಮಗಳನ್ನು ಅದ್ದೂರಿಯಾಗಿ, ಯಶಸ್ವಿಯಾಗಿ ನಡೆಸಿರುವ ಶ್ರೇಯ ಕೆಂಪರಾಜ್ ರವರಿಗೆ ಸಲ್ಲುತ್ತದೆ.
ಮುಂದಿನ ದಿನಗಳಲ್ಲಿ ಜಿಲ್ಲೆಗೆ ಶಾಶ್ವತ ಕಸಾಪ ಸಭಾಂಗಣ ನಿರ್ಮಾಣವಾಗಬೇಕಾಗಿದೆ. ಆಂಧ್ರ ತಮಿಳುನಾಡಿನ ಗಡಿ ಭಾಗ ಆಗಿರುವ ಕೋಲಾರ ಜಿಲ್ಲೆಗೆ ಹೆಚ್ಚಿನ ಪ್ರಾಧಾನ್ಯತೆ ಸೇರಿದಂತೆ ಜಿಲ್ಲೆಯ ನಾಡು, ನುಡಿ, ನೆಲ, ಜಲ, ಸಾಹಿತ್ಯ ಮತ್ತು ಸಂಸ್ಕೃತಿಗೆ ಹೆಚ್ಚಿನ ಸೇವೆ ಮಾಡಲು ದಕ್ಷ, ಪ್ರಾಮಾಣಿಕ, ಸರಳತೆಯ ಮತ್ತು ಸರ್ವ ಜನರಲ್ಲಿ ಕಲೆತು, ಬೆರೆತು ನಿರಂತರ ಕನ್ನಡದ ಕೆಲಸ ಮಾಡುವ ನಾಗಾನಂದ ಕೆಂಪರಾಜ್ ರವರನ್ನು ಜಿಲ್ಲಾಧ್ಯಕ್ಷರಾಗಿ ಗೆಲ್ಲಿಸಲು ಮತದಾರರಲ್ಲಿ ಮನವಿ ಮಾಡಿದ್ದಾರೆ.