ಕಸಾಪ ಚುನಾವಣೆ ಆರೋಗ್ಯಕರವಾಗಿ ನಡೆಯಲಿ: ಡಾ. ಗೋಗೇರಿ

ಶಿರಹಟ್ಟಿ, ನ12: ಕನ್ನಡ ಸಾಹಿತ್ಯ ಪರಿಷತ್ ಕನ್ನಡ ಸ್ವಾಭಿಮಾನ ಮತ್ತು ಬುದ್ದಿವಂತರ, ಪ್ರಜ್ಞಾವಂತರ ಮತದಾರರನ್ನು ಹೊಂದಿದ್ದು, ಯಾವುದೇ ಜಾತಿ ಮತ ಪಂಥ ಹಾಗೂ ಆಶೆ ಆಮಿಸೆಗಳಿಗೆ ಒಳಗಾಗದೇ ಮತ್ತು ಒಳಪಡಿಸದೇ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ಜರುಗುವ ಚುನಾವಣೆಯು ಆರೋಗ್ಯಕರವಾಗಿ ಜರುಗಲಿ ಎಂದು ನಿಕಟ ಪೂರ್ವ ಅಧ್ಯಕ್ಷ ಶರಣು ಗೋಗೇರಿ ಹೇಳಿದರು.
ಅವರು ಪಟ್ಟಣದ ನಿರೀಕ್ಷಣಾ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ ಮೂಲಕ ಕನ್ನಡದ ತೇರನ್ನು ಎಳೆಯುವ ಮತ್ತು ಕನ್ನಡ ಸಾಹಿತ್ಯದ ಅಭಿವೃದ್ಧಿಗೆ ಸಾಹಿತ್ಯಾಸಕ್ತರ ಬೇಡಿಕೆಗಳನ್ನು ಈಡೇರಿಸುವುದರ ಜೊತೆಗೆ ಕನ್ನಡ ಸಾಹಿತ್ಯ ರಚಿಸುವ ಮನಸುಗಳನ್ನು ಪ್ರೋತ್ಸಾಹಕವಾಗಿ ಅಭಿವೃದ್ಧಿಪಡಿಸುವ ಉದ್ದೇಶವನ್ನು ಹೊಂದಲಾಗಿದೆ. ಜೊತೆಗೆ ಈ ಚುನಾವಣೆಯಲ್ಲಿ ಒಳ್ಳೆಯ ಪ್ರಗತಿ ಪರ ಕೆಲಸಗಾರರನ್ನು ಆಯ್ಕೆಮಾಡುವುದು ಮುಖ್ಯವಾಗಿದೆ. ಇದೇ ತಿಂಗಳು 21 ರಂದು ಜರುಗುವ ಚುನಾವಣೆಯಲ್ಲಿ ಈ ಬಾರಿಯೂ ಕೂಡಾ ಹೆಚ್ಚು ಅಂತರಗಳ ಮತಗಳಿಂದ ಆಯ್ಕೆ ಮಾಡಲಿದ್ದಾರೆ ಎಂಬ ವಿಶ್ವಾಸವನ್ನು ಹೊಂದಲಾಗಿದೆ. ಜೊತೆಗೆ ಕಳೆದ ವರ್ಷದಲ್ಲಿ ನಾವು ಸಾಧಿಸಿದ ಕಾರ್ಯಗಳನ್ನು ಗುರುತಿಸಿ ನನ್ನನ್ನು ಬೆಂಬಲಿಸಲಿದ್ದಾರೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಾಹಿತಿ ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ರವಿ ಗುಂಜೀಕರ ಮತ್ತು ಸಾಹಿತಿ ರವೀಂದ್ರ ಕೊಪ್ಪರ ಮಾತನಾಡಿ, ಜಿಲ್ಲೆಯ 70 ಗ್ರಾಮಗಳಿಗೆ ಸಂಬಂಧಪಟ್ಟಂತೆ ಸಂಸ್ಕøತಿಕ ಭವನ, ಪ್ರವಾಸೋದ್ಯಮ ಇಲಾಖೆಗಳೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದು, ಇನ್ನು ಹಲವಾರುಕಡೆಗಳಲ್ಲಿ ಯಾತ್ರಿನಿವಾಸ ನಿರ್ಮಿಸುವ ಉದ್ದೇಶವನ್ನು ಹೊಂದಲಾಗಿದೆ. ಜಿಲ್ಲೆಯ ಎಲ್ಲ ನೌಕರರು ಶರಣ ಗೋಗೇರಿಯವರನ್ನು ಆಯ್ಕೆ ಮಾಡುವ ಉತ್ಸುಕದಲ್ಲಿದ್ದು, ಅಭೂತಪೂರ್ವ ಬೆಂಬಲ ದೊಯಲಿದೆ ಎಂದು ಹೇಳಿದರು.
ಎಮ್.ಕೆ.ಲಮಾಣಿ, ಅಂದಾನೆಪ್ಪ ವಿಭೂತಿ, ವಿ.ಎಂ ಹಿರೇಮಠ, ಬಸವರಾಜ ಬಳ್ಳಾರಿ, ಗುರುರಾಜ ಸರ್ಜಾಪೂರ, ಮೋಹನ ಮಾಂಡ್ರೆ, ಎಮ್.ಎ. ಬುಕಿಟಗಾರ, ಎಸ್.ಎಚ್.ಪೂಜಾರ, ಮುಂತಾದವರು ಉಪಸ್ಥಿತರಿದ್ದರು.