ಕಸಾಪ ಚುನಾವಣೆ:ಇಟಗಿ ನಾಮಪತ್ರ ಸಲ್ಲಿಕೆ

ರಾಯಚೂರು.ಮಾ.೩೧ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷರ ಚುನಾವಣೆಗೆ ಭೀಮನಗೌಡ ಇಟಗಿ ಅವರು ಇಂದು ತಸೀಲ್ದಾರ್ ಅವರಿಗೆ ನಾಮಪತ್ರ ಸಲ್ಲಿಸಿದರು.
ಮೇ.೯ ರಂದು ನಡೆಯಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಚುನಾವಣೆಗೆ ಭೀಮನಗೌಡ ಇಟಗಿ ಅವರು ಸ್ಪರ್ದಿಸಿದ್ದು ಇಂದು ನಗರದ ತಹಸೀಲ್ ಕಚೇರಿಯ ತಹಸೀಲ್ದಾರ್ ಅವರಿಗೆ ನಾಮಪತ್ರ ಸಲ್ಲಿಸಿದ್ದರು.
ಸೂಚಕವಾಗಿ ಜೆ.ತಿಮ್ಮಣ್ಣ,ಪರಿಷತ್ ಸದಸ್ಯರಾದ ಜೆ.ಎಲ್.ಈರಣ್ಣ ಅವರು ಸಹಿ ಮಾಡಿದರು.
ಈ ಸಂದರ್ಭದಲ್ಲಿ ದಸ್ತಗಿರಿ ಸಾಬ್ ದಿನ್ನಿ, ಬಸವರಾಜ ಪಾಟೀಲ್ ದರೂರ್,ಚಿನ್ನಪ್ಪ ಸಾಹುಕಾರ್ ದೇವದುರ್ಗ,
ಮಾದೇವಪ್ಪ ಉಪನ್ಯಾಸಕರು, ಜಿ ವಿರುಪಾಕ್ಷಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.