ಕಸಾಪ ಗ್ರಾಮೀಣ
ಹೆಚ್ಚುವರಿ ಪದಾಧಿಕಾರಿಗಳ‌ ನೇಮಕ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಸೆ.22: ಕಸಾಪ ಹೊಸ ಬೈಲಾದಂತೆ ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರ ಘಟಕದ ಹೆಚ್ಚುವರಿ ಪದಾಧಿಕಾರಿಗಳ ಸೇರ್ಪಡೆ ಕಾರ್ಯಕ್ರಮವನ್ನು ನಗರದ ಕನ್ನಡ ಭವನದಲ್ಲಿ ಹಮ್ಮಿಕೊಂಡು ಆದೇಶ ಪತ್ರಗಳನ್ನು ನೀಡಲಾಯಿತು.
ಜೊತೆಗೆ ಸದಸ್ಯತ್ವ ಅಭಿಯಾನ, ಹೋಬಳಿ ಘಟಕಗಳ ಉದ್ಘಾಟನೆ ಹಾಗೂ ತಾಲೂಕು ಸಮ್ಮೇಳನ ಕುರಿತು ಚರ್ಚಿಸಲಾಯಿತು.
ಗ್ರಾಮೀಣ ಘಟಕದ ಅಧ್ಯಕ್ಷ ಎ.ಎರ್ರಿಸ್ವಾಮಿ ಈ ಸಂದರ್ಭದಲ್ಲಿ ಮಾತನಾಡಿ ಕನ್ನಡ ಕಂಪನ್ನು ಹಳ್ಳಿಗಳಲ್ಲಿ ಮೂಡಿಸಿ,ಕಲಾವಿದರನ್ನು ಉಳಿಸಿ, ಬೆಳಸೋಣ ಎಂದರು. ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳಾದ ಬಸವರಾಜ ಬಿಸಲಹಳ್ಳಿ,ರವಿಚೇಳ್ಳಗುರ್ಕಿ, ಕಾರ್ಯದರ್ಶಿಗಳಾದ ಹುಸೇನ್ ಸಾಬ್,ಚಂದ್ರಶೇಖರ್ ಆಚಾರಿ,ಮಲ್ಲಿಕಾರ್ಜುನ ರೂಪನಗುಡಿ, ತೇಜಪ್ಪನವರ ಪ್ರಕಾಶ, ಕಲಾವಿದ ಜಡೇಶ ಎಮ್ಮಿಗನೂರು,ವೀರಭದ್ರಾಚಾರಿ, ನಾಗರಾಜ, ಶಿವರಾಮ ಹೊಸಪೇಟೆ, ಮೋಕ ಹೋಬಳಿ ಅಧ್ಯಕ್ಷ ಆರ್. ಎಂ.ಚಂದ್ರಶೇಖರ್, ಡಿ.ಎಸ್.ಮಹೇಶ,ಕಟ್ಟೆ ಬಸವನ ಗೌಡ,ಸುಂಕಣ್ಣ ಯರಿಗುಡಿ ಮುಂತಾದವರು ಉಪಸ್ಥಿತರಿದ್ದರು.