ಕಸಾಪ ಆಧ್ಯಕ್ಷರಿಂದ ಹಿಟ್ಲರ್ ಧೋರಣೆ-ಆರೋಪ

ಕೋಲಾರ, ಏ. ೮:ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷರು ಐದು ವರ್ಷಗಳ ಕಾಲ ಹಿಟ್ಲರ್ ಧೋರಣೆಯನ್ನು ಅನುಸರಿಸುತ್ತಾ, ಸಾಹಿತ್ಯ ವರ್ಗದಲ್ಲಿರುವವರು ಯಾರೂ ಸಹ ಸಾಹಿತ್ಯ ಪರಿಷತ್ತಿನೊಳಗೆ ಬರದಂತೆ ದಿಗ್ಭಂದನ ಹೇರುತ್ತಾ ಬಂದಿದ್ದಾರೆ ಎಂದು ಕಸಾಪ ಜಿಲ್ಲಾಧ್ಯಕ್ಷ ಸ್ಥಾನದ ಆಕಾಂಕ್ಷಿ ಜೆ.ಜಿ ನಾಗರಾಜ್ ಬೇಸರ ವ್ಯಕ್ತಪಡಿಸಿದರು.
ಕೋಲಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿ ಮಾತನಾಡಿದ ಅವರು, ಹಿಂದಿನ ಅಧ್ಯಕ್ಷರ ಸುಳ್ಳು ಹೇಳಿಕೆಗಳು ಸಾಹಿತ್ಯದ ನಡೆಯಾಗದಿರಲಿ ಎಂದರಲ್ಲದೆ ಇನ್ನಾದರೂ ತಮ್ಮ ಉಪನ್ಯಾಸಕ ವೃತ್ತಿಯಲ್ಲಿ ಮುಂದುವರೆಯುವ ಮೂಲಕ ಸಾಹಿತ್ಯ ಕಡೆಯಿಂದ ದೂರವಾಗುವುದು ಉತ್ತಮ ಬೆಳವಣಿಗೆ ಎಂದರು.
ಸಾವಿರಾರು, ಲಕ್ಷಾಂತರ ಜನ ಇರುವ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕೋಲಾರ ಜಿಲ್ಲೆಯಲ್ಲಿ ೧೦೦೦೦ ಪರಿಷತ್ತಿನ ಸದಸ್ಯರ ಜೊತೆಗೆ ಲಕ್ಷಾಂತರ ಜನ ಸಾಹಿತ್ಯ ಮನಸ್ಸುಗಳಿವೆ. ಸಾಹಿತ್ಯ ಮನಸ್ಸುಗಳು ದೂರವಾಗಿದ್ದು, ಅವರನ್ನು ಮತ್ತೆ ಪರಿಷತ್ತಿನೊಳಗೆ ತರಬೇಕು. ಪರಿಷತ್ತಿನ ಪ್ರಾಮಾಣಿಕತೆಯನ್ನು ಕಾಪಾಡಿಕೊಳ್ಳಲು ಚುನಾವಣೆಗೆ ಸ್ಪರ್ಧಿಸಿರುವುದಾಗಿ ತಿಳಿಸಿದರು.
ನಾಲ್ವಡಿ ಕೃಷ್ಟರಾಜ ಒಡೆಯರ್, ವಿಶ್ವೇಶ್ವರಯ್ಯ ರವರು ಸ್ಥಾಪಿಸಿದ ಕನ್ನಡ ಸಾಹಿತ್ಯ ಪರಿಷತ್ತು. ಅವರ ಆಶಯಗಳ ಮೂಲ ರೂಪವನ್ನು ಮತ್ತೆ ತರಬೇಕಾಗಿದೆ. ಯಾವುದೇ ಕಳಂಕವನ್ನು ತರದೆ ಸಾಹಿತ್ಯ ಪರಿಷತ್ತು ಹೇಗಿದೆಯೋ ಹಾಗೆಯೇ ಅದರ ನಡೆಯನ್ನು ರೂಪಿಸಿಲು ನಾನು ಬಂದಿರುವೆ
ಈ ಐದು ವರ್ಷಗಳ ಸಾಹಿತ್ಯ ಪರಿಷತ್ತಿನ ನಡೆ ಕಳಂಕ ನಡೆ, ಭ್ರಷ್ಟ ನಡೆ, ಹಿಟ್ಲರ್ ಆಡಳಿತದ ನಡೆಯಾಗಿದೆ. ಇತಿಹಾಸ ಉಪನ್ಯಾಸಕರಾಗಿ ಅರ್ಥ ಮಾಡಿಕೊಂಡಿರುವ ಅವರು, ಹಿಟ್ಲರ್ ರೀತಿ ನಡೆದುಕೊಳ್ಳುತ್ತಿದ್ದಾರೆ. ನಾವು ಕನ್ನಡ ಮೇಸ್ಟ್ರಾಗಿ ಒಂದು ಕಡೆ ಗಾಂಧಿಜೀ, ಮೊತ್ತೊಂದು ಕಡೆ ಡಾ.ಬಿ.ಆರ್ ಅಂಬೇಡ್ಕರ್, ಗಾಂಧಿಜೀ ಯವರು ಶಾಂತಿಯ ಸಂಕೇತ, ಅಂಬೇಡ್ಕರ್ ಅವರು ಜ್ಞಾನದ ಸಂಕೇತ. ನಮಗೆ ಬೇಕಿರುವುದು ಶಾಂತಿ ಮತ್ತು ಜ್ಞಾನ. ಕನ್ನಡದ ಜ್ಞಾನ ಕೇಂದ್ರವಾಗಿ ಕನ್ನಡದ ಜ್ಞಾನವನ್ನು ವಿಕೇಂದ್ರಿಕರಣ ಮಾಡುವುದರ ಮೂಲಕ ೧೧ ಸಾಹಿತ್ಯ ಸಮ್ಮೇಳನಗಳನ್ನು ನಗರದ ಟಿ ಚನ್ನಯ್ಯ ರಂಗಮಂದಿರದಲ್ಲಿ ಮುಗಿಸಿರುವ ಇಂತಹ ಅಧ್ಯಕ್ಷರನ್ನು ನಾವು ನೋಡಿಯೇ ಇಲ್ಲ. ಎಲ್ಲಾ ಸಾಹಿತ್ಯ ಸಮ್ಮೇಳನಗಳನ್ನು ವಿಕೆಂದ್ರಿಕರಣಗೊಳಿಸುತ್ತೇನೆ. ಅಂಚೆ ಮೂಲಕ ಆಹ್ವಾನ ಪತ್ರಿಕೆಯನ್ನು ಸದಸ್ಯರಿಗೆ ತಲುಪಿಸುವ ಕೆಲಸ ಮಾಡುತ್ತೇನೆ. ಸಾಹಿತ್ಯ ಪರಿಷತ್ತಿಗೆ ಹಣ ಬರುತ್ತದೆ. ಆ ಹಣವನ್ನು ಸಾಹಿತ್ಯ ಪರಿಷತ್ ಸದಸ್ಯರಿಗೆ ಅಂಚೆ ಮೂಲಕ ಆಹ್ವಾನ ಪತ್ರಿಕೆ ಹಂಚುವ ಮೂಲಕ ಸಾಹಿತ್ಯ ಪರಿಷತ್ತಿನಿಂದ ದೂರವಾಗಿರುವ ಎಲ್ಲರನ್ನೂ ಹತ್ತಿರ ಕರೆಸಿಕೊಳ್ಳುವ ಕೆಲಸ ಮಾಡುತ್ತೇನೆ ಎಂದರು.
ನಾಮಪತ್ರ ಸಲಲಿಸು ಕನ್ನಡ ಸಿರಿ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷ ಕೆ. ನರಸಿಂಹಮೂರ್ತಿ, ಜಿಲ್ಲಾಧ್ಯಕ್ಷ ಸುಬ್ಬರಾಮಯ್ಯ, ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷ ಪಿ.ನಾರಾಯಣಪ್ಪ, ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷ ಕೆ.ಎನ್ ಪರಮೇಶ್ವರ, ಸಮುದಾಯ ರಾಜ್ಯಾಧ್ಯಕ್ಷ ಅಚ್ಯುತ, ಜಗದೀಶ್‌ನಾಯ್ಕ, ವಿಶ್ವಮಾನವ ವೇದಿಕೆ ಸಂಸ್ಥಾಪಕ ಲಕ್ಕೂರು ನಾಗಾರಾಜ್, ಸಾಹಿತಿ ವೆಂಕಟಾಪು ಸತ್ಯಂ, ನಂಗಲಿ ಪ್ರಭಾಕರ ಗುಪ್ತಾ, ಕಂಗಾನಲ್ಲೂರು ನಾರಾಯಣಸ್ವಾಮಿ, ಬಂಗಾರಪೇಟೆ ತಾಲೂಕು ಕಸಾಪ ಕೋಶಾಧ್ಯಲ್ಷ ವಿಜಯಕುಮಾರ್, ಡೆಕೋರೇಶನ್ ಕೃಷ್ಣ, ಯುವ ಸಾಹಿತ್ಯ ಪರಿಷತ್ತಿನ ಸದಸ್ಯರು ಉಪಸ್ಥಿತರಿದ್ದರು.