ಕಸಾಪ ಅಭ್ಯರ್ಥಿ ಬಿ.ವಾಮದೇವಪ್ಪ ಗೆಲುವು ನಿಶ್ಚಿತ

 ದಾವಣಗೆರೆ.ಏ.೨೫; ದಾವಣಗೆರೆಯಲ್ಲಿ ಕಳೆದ ನಾಲ್ಕು ದಶಕಗಳಿಂದ ಯಾವುದೇ ನಿರೀಕ್ಷೆ ಅಪೇಕ್ಷೆ ಇಲ್ಲದ ಪ್ರಾಮಾಣಿಕವಾಗಿ ಇಚ್ಛಾಶಕ್ತಿಯಿಂದ ಯಾವುದೇ ಜಾತಿ, ಮತ, ಲಿಂಗ, ಸಿರಿತನ, ಬಡತನಗಳ ಬೇಧವಿಲ್ಲದೇ ಕನ್ನಡ ಪರಿಚಾರಿಕೆ ಮಾಡುತ್ತಾ ಅಂತರಾಳದ ಕನ್ನಡ ಕಾಯಕದ ಹಿರಿಯ ಕನ್ನಡ ಭಾಷಾಭಿಮಾನಿ ಬಿ.ವಾಮದೇವಪ್ಪ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಸ್ಥಾನದ ಸೇವಾಕಾಂಕ್ಷಿಯಾಗಿ ಚುನಾವಣೆಯಲ್ಲಿ ಗೆಲವು ನಿಶ್ಚಿತ ಎಂದು ಕಲಾಕುಂಚ, ಯಕ್ಷರಂಗ, ಶ್ರೀಮತಿ ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನ ಸಂಸ್ಥೆಗಳ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.ದಾವಣಗೆರೆಯ ಕುವೆಂಪು ಕನ್ನಡ ಭವನ ನಿರ್ಮಾಣದಲ್ಲಿ ಅಂದಿನ ಕ.ಸಾ.ಪ.ದ ಹುರಿಯಾಳುಗಳ ಜತೆಯಲ್ಲಿ ವಾಮದೇವಪ್ಪನವರ ಹಗಲಿರುಗಳು ಪರಿಶ್ರಮದ ಸಂಕೇತವೇ ಇಡೀ ಕರ್ನಾಟಕದಲ್ಲಿ ಸ್ವತಂತ್ರ ಕನ್ನಡ ಭವನ ದಾವಣಗೆರೆಯಲ್ಲಿ ಮಾತ್ರ ಏಕೈಕವಾಗಿರುವುದು ಹೆಮ್ಮೆ ತರುವ ವಿಚಾರ. ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾಗಿ ಗೆದ್ದು ಬರುವ ಬಿ.ವಾಮದೇವಪ್ಪನವರ ನೇತೃತ್ವದಲ್ಲಿ ಈ ಕನ್ನಡ ಭವನ ಇನ್ನಷ್ಟು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೇ ಪ್ರಚಾರದಲ್ಲಿ ತೊಡಗಿಸಿಕೊಂಡ ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ರಾಘವೇಂದ್ರ ನಾಯರಿ, ಜಗದೀಶ್ ಕೂಲಂಬಿ, ಶ್ರೀಮತಿ ಸುಮತಿ ಜಯಪ್ಪ ನೇತೃತ್ವದಲ್ಲಿ ದಾವಣಗೆರೆಯ ನಿಟುವಳ್ಳಿಯ ಶ್ರೀ ಆಂಜನೇಯ ದೇವಸ್ಥಾನದಲ್ಲಿ ಸೇರಿದ ಚುನಾವಣೆ ಪ್ರಚಾರ ಸಭೆಯ ಅಧ್ಯಕ್ಷತೆ ವಹಿಸಿ ಶೆಣೈಯವರು ಮಾತನಾಡಿದರು, ವೇದಿಕೆಯಲ್ಲಿ ಶ್ರೀ ಸಿದ್ಧಗಂಗಾ ಮಕ್ಕಳ ಲೋಕದ ಸಂಸ್ಥಾಪಕರೂ, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ತಾಲ್ಲೂಕು ಅಧ್ಯಕ್ಷರಾದ ಕೆ.ಎನ್.ಸ್ವಾಮಿ, ಶ್ರೀಮತಿ ಪಂಕಜಾ ಬಕ್ಕೇಶ್, ಎಂ.ಎಸ್.ಬಕ್ಕೇಶ್, ಶಿವಕುಮಾರ ಆರ್., ಕೆ.ಎಸ್.ಜಯಪ್ಪ, ಸಣ್ಣಪ್ಪ, ತಿಪ್ಪೇಸ್ವಾಮಿ, ಶ್ರೀಮತಿ ಪರಿಮಳ ಜಗದೀಶ್, ಶ್ರೀಮತಿ ರುದ್ರಾಕ್ಷಿಬಾಯಿ ಪುಟ್ಟಾನಾಯ್ಕ,  ಬಿ.ಆನಂದಮೂರ್ತಿ,  ಆರ್.ಆಂಜನೇಯ,  ಹೆಚ್.ಎಸ್.ತಿಪ್ಪೇಸ್ವಾಮಿ ಉಪಸ್ಥಿತರಿದ್ದರು.