ಕಸಾಪ ಅಭ್ಯರ್ಥಿ ಟಿ.ಎಂ.ಪಂಪಾಪತಿ ಮತಯಾಚನೆ

ಬಳ್ಳಾರಿ ಏ 21 : ಮುಂದಿನ ತಿಂಗಳು 9 ರಂದು ನಡೆಯುವ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿರುವ ಅಭ್ಯರ್ಥಿ ಪಂಪಾಪತಿ.ಟಿ.ಎಮ್. ಅವರು ತಂಡದ ಮುಖ್ಯಸ್ಥ ಸಿದ್ದರಾಮ ಕಲ್ಮಠ ಅವರೊಂದಿಗೆ ತೆರಳಿ ಸಿರುಗುಪ್ಪ ತಾಲೂಕಿನಲ್ಲಿ ಪ್ರಚಾರ ಕೈಗೊಂಡರು ಈ ಸಂದರ್ಭದಲ್ಲಿ ಸಿರುಗುಪ್ಪ ಶಾಸಕ ಎಮ್.ಎಸ್.ಸೋಮಲಿಂಗಪ್ಪ ಅವರನ್ನ ಭೇಟಿಯಾಗಿ ಮತ ಯಾಚಿಸಿದರು. ಜೆ.ಮಂಜುನಾಥ, ಚಾಂದ್‍ಭಾಷ, ರಜಾಕ್, ಸುಧೀರ್, ದಿವಾಕರ, ನಾರಾಯಣ ಮೊದಲಾದವರು ಈ ಸಂದರ್ಭದಲ್ಲಿ ಇದ್ದರು.