ಕಸಾಪ ಅಭ್ಯರ್ಥಿ ಅಳ್ಳುಂಡಿ ಮನೆಮನೆ ಭೇಟಿ

ದೇವದುರ್ಗ.ನ.೧೮-ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ರಂಗಣ್ಣ ಪಾಟೀಲ್ ಅಳ್ಳುಂಡಿ ಬೆಂಬಲಿಗರೊಂದಿಗೆ ಸೋಮವಾರ ಪಟ್ಟಣದ ಅಜೀವ ಸದಸ್ಯರ ಮನೆ ಮನೆಗೆ ತೆರಳಿ ಮತಯಾಚಿಸಿದರು.
ಕಸಾಪ ಕಚೇರಿಯಿಂದ ಹೊರಟು ಪಟ್ಟಣದಲ್ಲಿರುವ ಎಲ್ಲ ಮತದಾರರ ಮನೆಮನೆಗೆ ತೆರಳಿ ತಾಲೂಕಿಗೆ ಈವರೆಗೂ ಜಿಲ್ಲಾಧ್ಯಕ್ಷ ಸ್ಥಾನ ಒಲಿದು ಬಂದಿಲ್ಲ. ಆದ್ದರಿಂದ ತಾಲೂಕಿನ ಸಾಹಿತಿಗಳು, ಸಾಹಿತ್ಯಾಸಕ್ತರು, ಅಜೀವ ಸದಸ್ಯರು, ಪದಾಧಿಕಾರಿಗಳು ರಂಗಣ್ಣ ಪಾಟೀಲ್‌ಗೆ ಬೆಂಬಿಸಬೇಕು.
ರಂಗಣ್ಣ ಪಾಟೀಲ್ ಅಳ್ಳುಂಡಿ ೩೦ ವರ್ಷಗಳಿಂದ ಕಸಾಪದಲ್ಲಿ ಸಕ್ರಿಯವಾಗಿ ಪಾಲ್ಲೊಂಡು, ಹಲವು ಅತ್ಯುತ್ತಮ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಉದಯೋನ್ಮುಖ ಕವಿಗಳು, ಸಾಹಿತಿಗಳ ಬೆಳವಣಿಗೆಗೂ ಸಹಕಾರ ನೀಡಿದ್ದಾರೆ. ಜಿಲ್ಲಾಧ್ಯಕ್ಷರಾದರೆ ಜಿಲ್ಲೆಯಾದ್ಯಾಂತ ಇದರ ವಿಸ್ತರಣೆಯಾಗಿ ಉದ್ಯಯನ್ಮೂಖರ ಕವಿ, ಸಾಹಿತಿಗಳ ಬೆಳವಣಿಗೆ ಅವಕಾಶ ಸಿಗುತ್ತದೆ, ನಾಡು, ನುಡಿಯ ಕಾರ್ಯಕ್ರಮಗಳು ಹೆಚ್ಚಿನ ರೀತಿಯಲ್ಲಿ ನಡೆಯಲು ಅವಕಾಶ ನೀಡಿ ಎಂದು ಪ್ರಚಾರ ಕೈಗೊಂಡರು.
ಮುಖಂಡರಾದ ಭಾನುಪ್ರಕಾಶ ಖೇಣೇದ್, ಮೈನುದ್ದಿನ್ ಕಾಟಮಳ್ಳಿ, ಎಚ್.ಶಿವರಾಜ, ನರಸಿಂಗರಾವ್ ಸರ್ಕಿಲ್, ಬಸವರಾಜ ಕೊತ್ತದೊಡ್ಡಿ, ನಾಗರಾಜ ಅಕ್ಕರಕಿ, ಬಸವರಾಜ ಕೊಪ್ಪರ, ಬಸವರಾಜ ಮಡಿವಾಳ, ಚಂದ್ರಶೇಖರ ಛಲವಾದಿ, ಬಸನಗೌಡ ವೆಂಕಟಾಪುರ, ಶಿವನಗೌಡ ಕುಪ್ಪಿ, ಮರಿಯಪ್ಪ ರಾಯಚೂರಕರ್ ಇತರರಿದ್ದರು.