ಕಸಾಪ ಅಧ್ಯಕ್ಷ ಸ್ಥಾನಕ್ಕೆ ಬಿ.ವಾಮದೇವಪ್ಪ ನಾಮಪತ್ರ ಸಲ್ಲಿಕೆ

ದಾವಣಗೆರೆ.ಮಾ.೩೦; ಬರುವ ಮೇ 09 ರಂದು ನಡೆಯಲಿರುವ ದಾವಣಗೆರೆ ಜಿಲ್ಲಾ ಕಸಾಪ ಚುನಾವಣೆಯ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಕನ್ನಡದ ಕಟ್ಟಾಳು, ಕನ್ನಡ ಪರಿಚಾರಕರಾದ ಬಿ.ವಾಮದೇವಪ್ಪ ನವರು ನಾಮಪತ್ರವನ್ನು ದಾವಣಗೆರೆ ಜಿಲ್ಲಾ ಚುನಾವಣಾಧಿಕಾರಿಗಳಾದ ದಾವಣಗೆರೆ ತಹಶೀಲ್ದಾರ್ ಅವರ ಕಛೇರಿಯಲ್ಲಿ ಸಲ್ಲಿಸಿದರು.

ಬಿ.ವಾಮದೇವಪ್ಪನವರು ಕಳೆದ ಮೂರು ದಶಕಗಳಿಂದಲೂ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸಕ್ರಿಯ ಸದಸ್ಯರಾಗಿ, ತಾಲ್ಲೂಕು ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ. ಈ ಅವಧಿಯಲ್ಲಿ ತಾಯಿ ಕನ್ನಡ ಭುವನೇಶ್ವರಿ ರಥವನ್ನು ಕೇವಲ ನಗರ ಪ್ರದೇಶಕ್ಕಷ್ಟೇ ಸೀಮಿತಗೊಳಿಸದೇ ದಾವಣಗೆರೆಯ ಗ್ರಾಮೀಣ ಪ್ರದೇಶದ ಹಳ್ಳಿ ಹಳ್ಳಿಗೂ ಎಳೆದೊಯ್ದ ಕೀರ್ತಿ ಇವರದ್ದಾಗಿದೆ.ಕನ್ನಡ ಭವನ ನಿರ್ಮಾಣದಲ್ಲಿ ಅವಿರತವಾಗಿ ಶ್ರಮಿಸಿರುವ  ಇವರು ಕನ್ನಡ ನಾಡು ನುಡಿ ಕಟ್ಟುವಲ್ಲಿ ಅತ್ಯಂತ ಬದ್ಧತೆ ಮೆರೆದಿದ್ದಾರೆ.ಇಂತಹವರು ದಾವಣಗೆರೆ ಜಿಲ್ಲಾ ಕಸಾಪ ದ ಅಧ್ಯಕ್ಷ ಸ್ಥಾನ ಅಲಂಕರಿಸಿ ಜಿಲ್ಲೆಯದ್ಯಾಂತ ಕನ್ನಡ ಕಟ್ಟುವ ಕೆಲಸಕ್ಕೆ ಮುಂದಾಗಬೇಕೆಂಬ ಹಲವಾರು ಹಿತೈಷಿಗಳು, ಸ್ನೇಹಿತರು, ಬಂಧುಗಳು ಹಾಗೂ ಕನ್ನಡಾಭಿಮಾನಿಗಳ ಒತ್ತಾಸೆಯಿಂದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸ ಬಯಸಿ  ತಮ್ಮ ಗುರು ಹಿರಿಯರು ಹಾಗೂ ನೂರಾರು ಬೆಂಬಲಿಗ ಕನ್ನಡಾಭಿಮಾನಿಗಳ ಸಮ್ಮಖದಲ್ಲಿ ನಾಮಪತ್ರ ಸಲ್ಲಿಸಿದರು.