ಕಸಾಪ : ಅಧ್ಯಕ್ಷರ ಚುನಾವಣೆ ಶಿಖರಮಠ ನಾಮಪತ್ರ

ರಾಯಚೂರು.ಏ.೦೩- ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಮಲ್ಲಿಕಾರ್ಜುನ ಸ್ವಾಮಿ ಶಿಖರಮಠ ಅವರು ನಾಮಪತ್ರ ಸಲ್ಲಿಸಿದರು.
ನಗರದ ತಹಶೀಲ್ ಕಚೇರಿಯ ಚುನಾವಣಾಧಿಕಾರಿ ವಿಭಾಗದಲ್ಲಿ ಇಂದು ನಾಮಪತ್ರ ಸಲ್ಲಿಸಿದರು. ಮೇ.೯ ರಂದು ಜರುಗಲಿರುವ ಅಧ್ಯಕ್ಷ ಸ್ಥಾನದ ಚುನಾವಣೆ ನಿಗದಿಯಾಗಿದೆ. ಈ ಸಂದರ್ಭದಲ್ಲಿ ಸಾಹಿತಿಗಳಾದ ಬಂಡುರಾವ್ ಚಾಗಿ, ಅಯ್ಯಪ್ಪಯ್ಯ ಹುಡಾ, ಚಿದಾನಂದ ಸಾಲಿ, ರಾಮಣ್ಣ ಭೋಯೇರ್, ಹಿರಿಯರಾದ ರಾಘವೇಂದ್ರ ಕುಷ್ಟಗಿ, ಜಯಣ್ಣ, ಅಜೀಜ್ ದೇವದುರ್ಗ, ರುದ್ರಪ್ಪ ಅಂಗಡಿ, ತಿಮ್ಮಪ್ಪ ಪಿರಂಗಿ, ಡಾ.ಶಿವಪ್ಪ ಮಾಲಿಪಾಟೀಲ, ಡಾ.ನಾಗರಾಜ ಬಾಲ್ಕಿ, ಸೈಯದ್ ಹಫೀಜುಲ್ಲಾ, ಸಿದ್ರಾಮ ಶಾಸ್ತ್ರಿ ಶಿಖರ ಮಠ, ಮಲ್ಲಿನಾಥ ಹಿರೇಮಠ ವಕೀಲ, ಬಿ.ವೆಂಕಟಸಿಂಗ್, ಕೆ.ಸತ್ಯನಾರಾಯಣ, ದತ್ತು ಸರ್ಕಿಲ್, ಆರ್.ಗುರುನಾಥ, ವಿಜಯ ಜಾಗಟಗಲ್, ಮಲ್ಲಿಕಾರ್ಜುನ, ಪ್ರಭುದೇವ, ಬಸವರಾಜ ಭೋಗಾವತಿ ಮಾನ್ವಿ, ಮಲ್ಲಿಕಾರ್ಜುನ ಹಳ್ಳೂರು, ಡಾ.ರಜಾಕ್ ಉಸ್ತಾದ್, ಈರಣ್ಣ ಎಂ., ಶರಣಪ್ಪ ಅಚ್ಚೊಳ್ಳಿ, ಶಿವಶರಣ ಅರಕೇರಿ, ಶಿವನಗೌಡ, ಬಸವರಾಜ, ಅನಿಲಕುಮಾರ ಗಣೇಕಲ್, ಚಂದ್ರಶೇಖರ ಪಾಟೀಲ ಚಾಗಬಾವಿ, ಶ್ಯಾಮಸುಂದರ ಅಸ್ಕಿಹಾಳ, ವಿನಯಕುಮಾರ್ ಬುಳ್ಳಾಪುರ, ತರುಣ್, ಸುಭಾಷ ದೇವದುರ್ಗ ಸೇರಿದಂತೆ ಇತರರಿದ್ದರು.