ಕಸಾಪದ 109ನೇ ಸಂಸ್ಥಾಪನಾ ದಿನಾಚರಣೆ


ಸಂಜೆವಾಣಿ ವಾರ್ತೆ
ಬಳ್ಳಾರಿ, ಮೇ,6- ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಬಳ್ಳಾರಿ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ತಿನ 109ನೇ ಸಂಸ್ಥಾಪನ ದಿನಾಚರಣೆಯನ್ನು ಬಳ್ಳಾರಿ ನಗರದ ಕನ್ನಡ ಭವನದಲ್ಲಿ ಆಚರಣೆ ಮಾಡಲಾಯಿತು
ಕಾರ್ಯಕ್ರಮದ ಮೊದಲಿಗೆ ಪ್ರಾರ್ಥನೆ ಮತ್ತು ನಾಡಗೀತೆಯನ್ನು ಖ್ಯಾತ ಜಾನಪದ ಗಾಯಕರಾದ ಜಡೇಶಎಮ್ಮಿಗನೂರ್ ನಡೆಸಿಕೊಟ್ಟರು, ಪ್ರಾಸ್ತಾವಿಕ ನುಡಿಯನ್ನು ಗ್ರಾಮೀಣ ಘಟಕದ ಕಾಸಪ್ಪ ಅಧ್ಯಕ್ಷರಾದ ಎರಿಸ್ವಾಮಿ ರವರು ನೀಡಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಸರ್ಕಾರಿ ಮಾಜಿ ಪುರಸಭೆ ಪದವಿ ಪೂರ್ವ ಕಾಲೇಜಿನ ಆಂಗ್ಲ ಉಪನ್ಯಾಸಕರಾದ ಕೆಪಿ ಮಂಜುನಾಥ ರೆಡ್ಡಿ ರವರು ಉದ್ಘಾಟಿಸಿ ಉದ್ಘಾಟನಾ ನುಡಿ ನುಡಿದರು. ಇವರು ತಮ್ಮ ಉದ್ಘಾಟನಾ ನುಡಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ನೀಡಿದ ಕೊಡುಗೆ ಮತ್ತು ಸಾಧನೆಯ ಬಗ್ಗೆ ತಿಳಿಸಿದರು.
ವಿಶೇಷ ಉಪನ್ಯಾಸ ನೀಡಿದ ಮೇಡಂ ಕ್ಯೂರಿ ಅಕಾಡೆಮಿಯ ಅಧ್ಯಕ್ಷರಾದ ಡಾ. ಎಸ್ ಮಂಜುನಾಥ್ ರವರು ಕನ್ನಡ ಸಾಹಿತ್ಯ ಪರಿಷತ್ತಿನ ಒಂದು ಅವಲೋಕನ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು. ಪರಿಷತ್ತು ಕನ್ನಡ ಪರ ಕಾರ್ಯಕ್ರಮಗಳನ್ನು ಮಾಡುವುದರ ಜೊತೆಗೆ ಯುವ ಕವಿಗಳನ್ನು, ಸಾಹಿತಿಗಳನ್ನು ಬೆಳೆಸುವುದರ ಜೊತೆಗೆ ಯುವಕರಿಗೆ ಸಾಹಿತ್ಯದ ಅಭಿರುಚಿ ಬೆಳೆಸುವ ಕಾರ್ಯವನ್ನು ಪರಿಷತ್ತು ನಿರಂತರವಾಗಿ ಮಾಡುತ್ತಾ ಬಂದಿದೆ ಎಂದು ಅವರ ಉಪನ್ಯಾಸದಲ್ಲಿ ತಿಳಿಸಿದರು.
ಮುಖ್ಯ ಅತಿಥಿಗಳಾಗಿ ವಿ ಎಸ್ ಮರಿದೇವಯ್ಯ, ಎ ಎರ್ರಿಸ್ವಾಮಿ, ಹುಸೇನ್ ಬಾಷಾ, ಅಜಯ್ ಬಣಕಾರ್, ಹನುಮಂತ್ ರಾವ  ಬಿ,ಜಿಲ್ಲಾ ಕಾರ್ಯದರ್ಶಿಗಳಾದ ಡಾ. ಶಿವಲಿಂಗಪ್ಪ ಹಂದಿಹಾಳ್ ರಾಮಚಂದ್ರ ,ಚೆನ್ನತೀರ , ಚಾಂದ್ ಪಾಷಾ, ಸಂಗಮೇಶ್ ಕಾರ್ತಿಕ್ ಮರಿಸ್ವಾಮಿ ಮಠ ,ಉಪಸ್ಥಿತರಿದ್ದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಅಜಯ್ ಬಣಕಾರ್ ಪರಿಷತ್ತು ಯುವ ಸಾಹಿತಿಗಳನ್ನು ಬೆಳೆಸುವ ಕಾರ್ಯವನ್ನು ಮಾಡಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕನ್ನಡ ನಾಡು ನುಡಿಗೆ ಸೇವೆ ಸಲ್ಲಿಸಿದ ನಾಲ್ಕು ವ್ಯಕ್ತಿಗಳನ್ನು ಗೌರವಿಸಿ ಸತ್ಕರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಸಪ ತಾಲೂಕು ಘಟಕದ ಅಧ್ಯಕ್ಷರಾದ ನಾಗರೆಡ್ಡಿ ಕೆ ವಿ ರವರು ಸಾಹಿತ್ಯ ಪರಿಷತ್ತು ವರ್ಷದಲ್ಲಿ ನಿರಂತರವಾಗಿ ದತ್ತಿ ಕಾರ್ಯಕ್ರಮಗಳು, ತಾಲೂಕು ಸಮ್ಮೇಳನ, ಜಿಲ್ಲಾ ಸಮ್ಮೇಳನ, ಅಖಿಲ ಭಾರತ ಸಮ್ಮೇಳನ, ಪರಿಷತ್ತಿನ ನಡೆ ಶಾಲಾ-ಕಾಲೇಜಿ ನಡೆ ,ಪ್ರಬಂಧ ಸ್ಪರ್ಧೆ ,ಭಾಷಣ ಸ್ಪರ್ಧೆ ,ರಂಗೋಲಿ ಸ್ಪರ್ಧೆ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ ಇದರ ಜೊತೆಗೆ ಸಾಧಕರನ್ನು ಗುರುತಿಸಿ ಗೌರವಿಸುವ ಕಾರ್ಯವನ್ನು ನಮ್ಮ ಪರಿಷತ್ತು ಮಾಡುತ್ತದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಮೋಕಾದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾದ ಡಾ. ಬಿ.ಜಿ ಕಲಾವತಿ ಮೇಡಂ ಮತ್ತು ಆ ಕಾಲೇಜಿನ ಐಚ್ಚಿಕ ಕನ್ನಡ ದ 30 ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಿದ್ಯಾರ್ಥಿಗಳಿಗೆ ಸಾಹಿತ್ಯದ ಅರಿವು ಮೂಡಿಸುವುದಕೋಸ್ಕರ ರಜಾ ದಿನಗಳಲ್ಲಿ ಪ್ರಾಧ್ಯಾಪಕರಾದ ಶ್ರೀಮತಿ ಕಲಾವತಿ ಮೇಡಂ ರವರು ಮಕ್ಕಳಿಗೆ ಸಾಹಿತ್ಯದ ಜ್ಞಾನವನ್ನು ಕೊಡುವ ಸಲುವಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರಗನ್ನು ತಂದು ಕೊಟ್ಟಿದ್ದಾರೆ.
ಈ ಕಾರ್ಯಕ್ರಮವನ್ನು ಕಸಪ ಗ್ರಾಮೀಣ ಘಟಕದ ಕಾರ್ಯದರ್ಶಿಗಳಾದ ಸತ್ಯನಾರಾಯಣ ರವರು ನಿರೂಪಿಸಿದರು ಬಳ್ಳಾರಿ ತಾಲೂಕು ಘಟಕದ ಕೋಶಾಧ್ಯಕ್ಷರಾದ ಶರಣಬಸವ ರವರು ಗಣ್ಯ ಮಾನ್ಯರಿಗೆ ಕೊನೆಯಲ್ಲಿ ವಂದಿಸಿದರು.