
ರಾಯಚೂರು,ಅ.೦೩- ಜಿಲ್ಲಾ ಮತ್ತು ತಾಲೂಕು ಕನ್ನಡ ಪರಿಷತ್ತು ರಾಯಚೂರು ವತಿಯಿಂದ ಇಂದು ಕನ್ನಡ ಭವನದಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ೧೫೪ನೇಯ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಜಿಯವರ ೧೧೯ನೇಯ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಮಹಾತ್ಮ ರ ಜಯಂತಿ ಅಂಗವಾಗಿ ಪರಿಷತ್ತಿನ ಪದಾಧಿಕಾರಿಗಳು ಸೇರಿಕೊಂಡು ಕನ್ನಡ ಭವನದ ಸುತ್ತಮುತ್ತ ಸಸಿನೆಟ್ಟು ಶ್ರಮದಾನವನ್ನು ಮಾಡಲಾಯಿತು. ನಂತರ ಮಹಾತ್ಮ ರ ಭಾವಚಿತ್ರ ಕ್ಕೆ ಪೂಜೆ ಸಲ್ಲಿಸಿ ಪುಷ್ಪ ನಮನ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಹಿರಿಯ ಸಾಹಿತಿಗಳಾದ ವೀರ ಹನುಮಾನ್ ಮಾತನಾಡಿ, ಯಾರು ಸತ್ಯದ ಹಾದಿಯಲ್ಲಿ ನಡೆಯುತ್ತಾರೋ ಅವರ ಹೆಜ್ಜೆಯ ಗುರುತುಗಳು ದೃಢವಾಗಿ ಇರುತ್ತವೆ.
ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ ಆದರ್ಶ ವ್ಯಕ್ತಿತ್ವ ಮತ್ತು ಅವರ ತತ್ವಗಳನ್ನು ಪಾಲಿಸಿದರೇ ನಮ್ಮ ದೇಶವು ಸದೃಢವಾಗಿರಿಸಲು ಸಾಧ್ಯವಾಗತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನ ಅಧ್ಯಕ್ಷ ರಾದ ರಂಗಣ್ಣ ಪಾಟೀಲ್ ಅಳ್ಳುಂಡಿ ಮಾತನಾಡಿ ಗಾಂಧೀಜಿಯವರ ಜೀವನ ಚರಿತ್ರೆ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಜಿಯವರ
ಕುರಿತು ಮಾತನಾಡುತ್ತಾ ಅವರ ತತ್ವ ಆದರ್ಶಗಳನ್ನು ಕುರಿತು ವಿವರವಾಗಿ ಹೇಳಿದರು.
ಗಾಂಧೀಜಿಯವರ ಸತ್ಯ ಅಹಿಂಸೆಯ ತತ್ವವನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಲು ಹೇಳಿದರು.
ಅವರು ಕುಟುಂಬಕ್ಕಿಂತ ದೇಶವೇ ಮುಖ್ಯವೆಂದು ಭಾವಿಸಿ ಸೇವೆ ಮಾಡಿದರು.
ಲಾಲ್ ಬಹದ್ದೂರ್ ಶಾಸ್ತ್ರಿಜಿಯವರ ಸರಳ ಸಜ್ಜನಿಕೆಯ ರಾಜಕಾರಣಿ ಯಾಗಿದ್ದರು ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಿರಿಯರಾದ ಲಕ್ಷ್ಮೀ ದೇವಿ ಶಾಸ್ತ್ರಿ, ವಿ. ಎನ್ ಅಕ್ಕಿ, ಆಂಜನೇಯ ಜಾಲಿಬೆಂಚಿ, ಹೆಚ್ ಹೆಚ್ ಮ್ಯಾದರ್, ಹನುಮಂತಪ್ಪ ಗವಾಯಿ, ಶಾಂತ ಕುಲಕರ್ಣಿ,
ಜಿ. ಸುರೇಶ್, ನಾಗಪ್ಪ ಹೊರಪೇಟೆ, ವೆಂಕಟೇಶ್ ಬೇವಿನಬೆಂಚಿ, ರಾವುತರಾವ್ ಬರೂರ್ , ಮಲ್ಲಿಕಾರ್ಜುನ ಸ್ವಾಮಿ, ದಂಡಪ್ಪ ಬಿರಾದಾರ, ದೇವೇಂದ್ರಮ್ಮ, ವಿಶ್ವನಾಥ್ ಶಾಸ್ತ್ರೀ,
ವೈಶಾಲಿ ಪಾಟೀಲ್, ಬಶೀರ್ ಅಹ್ಮದ್, ಚಂದ್ರವತಿ, ಸಾಯಿ ಸಾಗರ್ ಸೆರಿದಂತೆ ಪರಿಷತ್ತಿನ ಪದಾಧಿಕಾರಿಗಳು, ಸದಸ್ಯರು, ಸಾಹಿತಿಗಳು, ಕವಿಗಳು, ಕನ್ನಡಾಭಿಮಾನಿಗಳು ಸೇರಿದಂತೆ ಇತರರು ಭಾಗವಹಿಸಿದ್ದರು.