ಕಸವನಹಳ್ಳಿ ವಿದ್ಯಾರ್ಥಿನಿ ಚಿಕಿತ್ಸೆಗೆ ಧನ ಸಹಾಯ

ದಾವಣಗೆರೆ.ಏ.೨೭; ಕಾಲೇಜು ಮತ್ತು ವಿದ್ಯಾರ್ಥಿನಿಲಯದ ಶುಲ್ಕ ಭರಿಸಲು ಸಾಧ್ಯವಾಗದೆ ಮಹಡಿಯಿಂದ ಬಿದ್ದು ಆತ್ಮಹತ್ಯೆಗೆ ಯತ್ನಿಸಿ ಕೈ, ಕಾಲು, ಸೊಂಟ ಮುರಿದುಕೊಂಡಿದ್ದ ಜಗಳೂರು ತಾಲ್ಲೂಕಿನ ಕಸವನಹಳ್ಳಿಯ ಕೊರಚರಹಟ್ಟಿಯ ವಿದ್ಯಾರ್ಥಿನಿ ಪೂಜಾ ಅವರ ಚಿಕಿತ್ಸೆಗಾಗಿ ಹರಪನಹಳ್ಳಿ ತಾಲ್ಲೂಕಿನ ತೊಗರಿಕಟ್ಟೆ ಗ್ರಾಮ ಪಂಚಾಯಿತಿ ಸದಸ್ಯ ಪುರುಷೋತ್ತಮ 20 ಸಾವಿರ ರೂ., ಧನ ಸಹಾಯ ಮಾಡಿದ್ದಾರೆ.ಪೂಜಾ ಇಲ್ಲಿನ ಆರೈಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರಿಗೆ ಗ್ರಾಪಂನ ಮಾಜಿ ಉಪಾಧ್ಯಕ್ಷ, ಹಾಲಿ ಸದಸ್ಯ ಪುರುಷೋತ್ತಮ ಧನ ಸಹಾಯ ಮಾಡಿರುವುದಾಗಿ ರಾಜ್ಯ ಕೊರಚ ಸಂಘಟನೆಯ ಕಾರ್ಯದರ್ಶಿ ರಾಘವೇಂದ್ರ ತಿಳಿಸಿದ್ದಾರೆ.