ಕಸಬ ಹೋಬಳಿ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ

ಸಂಜೆವಾಣಿ ವಾರ್ತೆ
ನಂಜನಗೂಡು: ಸೆ.09:- 2023 24ನೇ ಸಾಲಿನ 14 ವರ್ಷ ಒಳಪಟ್ಟ ಹಿರಿಯ ಪ್ರಾಥಮಿಕ ಶಾಲೆಗಳ ಕಸಬಾ ಹೋಬಳಿ ಮಟ್ಟದ ಕ್ರೀಡಾಕೂಟವನ್ನು ಶ್ರೀಕಂಠೇಶ್ವರ ಆಂಗ್ಲ ಮಾಧ್ಯಮ ಶಾಲೆ ಸಯೋಗದೊಂದಿಗೆ ಹಮ್ಮಿಕೊಳ್ಳಲಾಗಿತ್ತು
ಕ್ರೀಡಾಕೂಟವನ್ನು ನಗರದ ಸರ್ಕಾರಿ ಜೂನಿಯರ್ ಕಾಲೇಜ್ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು ಖಾಸಗಿ ಮತ್ತು ಸರ್ಕಾರಿ ಶಾಲೆಗಳು ಒಳಗೊಂಡಂತೆ 25 ಶಾಲೆಗಳು ಭಾಗವಹಿಸಿದ್ದರು ಒಟ್ಟು 500 ಕ್ರೀಡಾಪಟುಗಳು ಹಲವಾರು ಕ್ರೀಡೆಯಲ್ಲಿ ಭಾಗವಹಿಸಿದರು
ಶಿಕ್ಷಣಾಧಿಕಾರಿ ಶಿವಲಿಂಗಯ್ಯ ಮತ್ತು ರೋಟರಿ ಅಧ್ಯಕ್ಷ ರಮೇಶ್ ಪಾರಿವಾಳ ಬಿಡುವ ಮೂಲಕ ಉದ್ಘಾಟಿಸಿದರು
ಶಿಕ್ಷಣಧಿಕಾರಿ ಶಿವಲಿಂಗಯ್ಯ ಮಾತನಾಡಿ ವಿದ್ಯಾರ್ಥಿಗಳ ಜೀವನದಲ್ಲಿ ಕ್ರೀಡೆಯು ಪಾಠದಷ್ಟೇ ಮುಖ್ಯ ಕ್ರೀಡೆ ಮತ್ತು ವಿದ್ಯೆ ಇದ್ದರೆ ಪ್ರತಿಯೊಬ್ಬ ವಿದ್ಯಾರ್ಥಿಯು ಗುರಿ ಮುಟ್ಟಲು ಸಾಧ್ಯ ಪ್ರತಿಯೊಬ್ಬರು ಆರೋಗ್ಯ ದೃಷ್ಟಿಯಿಂದ ಪ್ರತಿದಿನ ಯಾವುದಾದರೂ ಕ್ರೀಡೆಯನ್ನು ದಿನನಿತ್ಯ ಅಳವಡಿಸಿಕೊಂಡರೆ ರೋಗದಿಂದ ದೂರವಿರಬಹುದು ಎಂದರು
ರೋಟರಿ ಅಧ್ಯಕ್ಷ ರಮೇಶ್ ಮಾತನಾಡಿ ಪ್ರತಿಯೊಬ್ಬ ವಿದ್ಯಾರ್ಥಿಯ ಕ್ರೀಡೆಯಲ್ಲಿ ಸೋಲು ಗೆಲುವು ಸಮನಾಗಿ ಸ್ವೀಕರಿಸಬೇಕು ಗೆದ್ದವರು ಹಿಗ್ಗಬೇಡಿ ಸೋತವರು ಕುಗ್ಗಬೇಡಿ ಇದನ್ನೇ ಸವಾಲಾಗಿ ಸ್ವೀಕರಿಸಿ ಗೆಲುವಿನತ್ತ ಮುಖ ಮಾಡಿ ಎಂದರು
ಕಾರ್ಯಕ್ರಮದಲ್ಲಿ ಶಿಕ್ಷಕರ ಸಂಘದ ಅಧ್ಯಕ್ಷ ಧರ್ಮ ರತ್ನಾಕರ ನೀಲಕಂಠೇಶ್ವರ ಶಾಲೆಯ ವಿದ್ಯಾ ಸಂಸ್ಥೆ ಕಾರ್ಯದರ್ಶಿ ಕುಮಾರಸ್ವಾಮಿ
ಪತ್ರ ಕರ್ತರ ಸಂಘದ ಅಧ್ಯಕ್ಷ ಗಂಗಾಧರ್ ಖಾಸಗಿ ಶಾಲೆಗಳ ಅಧ್ಯಕ್ಷ ನಟರಾಜ್ ದೈಹಿಕ ಶಿಕ್ಷಕರಾದ ನಂದೀಶ ಸೋಮೇಶ್ ಶಿವಕುಮಾರ್ ಕೃಷ್ಣ ಗಿರೀಶ್ ರಾಜೇಂದ್ರ ಶಕೀಲ್ ರಂಗನಾಥ್ ಶ್ರೀಪತಿ ರವಿ ರಾಜೇಶ್ವರಿ ಮಮತಾ ನಿಲ್ಲಿಸಿದ್ದು ಸೇರಿದಂತೆ ಶಿಕ್ಷಕರು ಮತ್ತು ದೈಹಿಕ ಶಿಕ್ಷಕರು ಭಾಗವಹಿಸಿದ್ದರು.