ಕಸಬಾ ವ್ಯಾಪ್ತಿ ಮತಗಟ್ಟೆಗಳಿಗೆ ಉಪ ವಿಭಾಗಾಧಿಕಾರಿ ಭೇಟಿ ಪರಿಶೀಲನೆ

ಹರಿಹರ ಜ 20 ; ವ್ಯಾಪ್ತಿಯ ಮತದಾನ ಕೇಂದ್ರಗಳಲ್ಲಿ ಇರುವ ಕೊರತೆ ಹಾಗೂ ಬೇಕಾದ ಸೌಕರ್ಯಗಳ ಕುರಿತಂತೆ ದಾವಣಗೆರೆ ಉಪ ವಿಭಾಗಾಧಿಕಾರಿ ದುರ್ಗಾಶ್ರೀ ಕಂದಾಯ ಇಲಾಖೆಯ  ತಂಡದೊಂದಿಗೆ ತಾಲೂಕಿನ ಕಸಬಾ ವ್ಯಾಪ್ತಿಯ ಮತಗಟ್ಟೆಗಳಿಗೆ ತೆರಳಿ ಪರಿಶೀಲನೆ ನಡೆಸಿದರು.ಮತದಾನ ಕೇಂದ್ರದ ಸೌಕರ್ಯಗಳು ಹಾಗೂ ಕೊರತೆಗಳ ಬಗ್ಗೆ ಗ್ರಾ.ಪಂ.ಪಿಡಿಒ  ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷಕರು  ಗ್ರಾಮ ಲೆಕ್ಕಾಧಿಕಾರಿಗಳು ಮತಗಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು, ಚುನಾವಣೆ ದಿನ ಮತದಾರರಿಗೆ ಹಾಗೂ ಚುನಾವಣೆ ಸಿಬ್ಬಂದಿಗೆ ಯಾವುದೇ ಕೊರತೆಯಾಗದಂತೆ ಮುನ್ನೆಚ್ಚರಿಕೆ ವಹಿಸಲು ಸೂಚಿಸಿದರು.ಮೆಟ್ಲಕಟ್ಟೆ. ಭಾನುವಳ್ಳಿ.ಎಕ್ಕೆಗುಂದಿ. ಹನಗವಾಡಿ ಬೆಳ್ಳೂಡಿ. ಸೇರಿದಂತೆ ಕಸಬಾ ವ್ಯಾಪ್ತಿಯ ಮತಗಟ್ಟೆ ಕೇಂದ್ರಗಳಿಗೆ ತೆರಳಿ  ಸೌಲಭ್ಯಗಳ ಬಗ್ಗೆ ಪರಿಶೀಲನೆ ನಡೆಸಿದರು ರಾಜಸ್ವ ನಿರೀಕ್ಷಕರು  ಎಂ ಮಂಜುನಾಥ್. ಗ್ರಾಮ ಲೆಕ್ಕಾಧಿಕಾರಿ ಪುಷ್ಪ ದೊಡ್ಡಮನಿ. ಪಿ ಡಿ ಓ. ಬಿ ಎಲ್ ಓ. ಗ್ರಾಮ ಲೆಕ್ಕ ಅಧಿಕಾರಿಗಳು ಇದ್ದರು.