ಕಸದ ಸ್ಥಳದಲ್ಲಿ ನಾಪತ್ತೆಯಾಗಿದ್ದ ಚಿನ್ನದಕರಡಿಗೆ ಪತ್ತೆ

ಹನೂರು:ಮಾ:26:ತಾಲ್ಲೂಕಿನ ಮಲೆಮಹದೇಶ್ವರ ಬೆಟ್ಟದೇವಾಲದ ಪಾರ್ವತಿಅಮ್ಮನವರಉತ್ಸವ ಮೂರ್ತಿಯ 30 ಗ್ರಾಂ. ತೂಕದಚಿನ್ನದಕರಡಿಗೆ ನಾಪತ್ತೆಯಾಗಿ ನಂತರ ಕಸ ಹಾಕುವ ಸ್ಥಳದಲ್ಲಿ ಪತ್ತೆಯಾಗಿದೆ.
ದೇವಾಲಯದಲ್ಲಿ ಪಾರ್ವತಿಅಮ್ಮನವರಿಗೆ ಧರಿಸಿದ್ದ ಕರಡಿಗೆ ಮಾರ್ಚ್ 18 ರಗುರುವಾರ ಮಹಾರುದ್ರಾಭಿಷೇಕ ಪೂಜಾ ಕೈಂಕರ್ಯಗಳ ನಂತರ ನಾಪತ್ತೆಯಾಗಿತ್ತು.ಬಳಿಕ ಎಲ್ಲಾಕಡೆ ಹುಡುಕಿದರು ಪತ್ತೆಯಾಗಿರಲಿಲ್ಲ. ಈ ವಿಚಾರಅಲ್ಲಿನಅರ್ಚಕರಿಗೆ ಮಾತ್ರ ತಿಳಿದಿದ್ದು ನಂತರ ಕಾರ್ಯದರ್ಶಿ ಜಯ ವಿಭವಸ್ವಾಮಿಅವರ ಗಮನಕ್ಕೆ ಬಂದು ಮಾ.24 ರಂದು ಪೊಲೀಸರಿಗೆದೂರು ನೀಡಿದ್ದರುಎನ್ನಲಾಗಿದ್ದು, ದೂರು ನೀಡಿದಒಂದು ದಿನದ ಕಳೆಯುವುದರೊಳಗೆ ಪತ್ತೆಯಾಗಿರುವುದು ಸಾಕಷ್ಟು ಅನುಮಾನಕ್ಕೂಎಡೆ ಮಾಡಿಕೊಟ್ಟಿದೆ.
ಇಂತಹ ಘಟನೆಗಳು ಮರುಕಳುಹಿಸದಂತೆ ಎಚ್ಚರ ವಹಿಸಬೇಕು: ಹತ್ತು ಹಲವು ಸಿ.ಸಿ.ಕ್ಯಾಮರಗಳ ಕಣ್ಗಾವಲುಇದ್ದರೂ ಕಳೆದು ಹೋದಕರಡಿಗೆಯನ್ನು ಪತ್ತೆ ಹಚ್ಚಲು ಒಂದು ವಾರಗಳ ಕಾಲ ಬೇಕಾಯಿತೇ ಎಂಬ ಅನುಮಾನವುಕೂಡಕಾಡುವಂತೆ ಮಾಡಿದೆ. ಕೋಟ್ಯಾಂತರ ರೂ.ಗಳ ಆದಾಯದ ಹೆಗ್ಗಳಿಕೆ ಒಂದಾದರೇ ನಾನಾ ಅಭಿವೃದ್ಧಿ ಕಾರ್ಯಗಳನ್ನು ನನ್ನಅವಧಿಯಲ್ಲಿ ನಡೆಯುತ್ತಿದೆಎಂದು ಶ್ರೀ ಕ್ಷೇತ್ರಕ್ಕೆ ಬಂದಜನಪ್ರತಿನಿಧಿಗಳು ಸರ್ಕಾರದ ಅಧಿಕಾರಿಗಳ ಹತ್ತಿರ ಹೇಳಿಕೊಳ್ಳುವ ಕಾರ್ಯದರ್ಶಿ ಜಯವಿಭವಸ್ವಾಮಿ ಆಡಳಿತ ಅವಧಿಯಲ್ಲಿಇಂತಹ ಘಟನೆಜರುಗಿರುವುದು ಮುಂದೇನೂ ಎಂಬ ಆತಂಕ ಶುರುವಾಗುವಂತೆ ಮಾಡಿದೆಎನ್ನಲಾಗುತ್ತಿದೆ. ಅದರಲ್ಲೂ ದೇವಾಲಯದ ಅರ್ಚಕರಲ್ಲೇ ಎರಡು ಮೂರು ಬಣ ಇದೇಎನ್ನುವ ಮಾತುಗಳು ಕೇಳಿ ಬರುತ್ತಿದ್ದು, ಮಾದಪ್ಪನ ಸುಕ್ಷೇತ್ರದಲ್ಲಿ ವೈಮ ನಸ್ಸುಗಳಿಂದ ಅನಾಹುತಗಳು ಸಂಭವಿಸುವ ಮುನ್ನವೇ ಕಾರ್ಯದರ್ಶಿಗಳು ಈ ಬಗ್ಗೆ ಸೂಕ್ತ ಕ್ರಮ ವಹಿಸುವ ಮೂಲಕ ಗಮನಹರಿಸಬೇಕಾಗಿದೆ.ಎರಡು ಬಣಗಳ ವೈ ಮನಸ್ಸಿನಿಂದ ಸುಳ್ವಾಡಿ ವಿಷ ಪ್ರಸಾದ ಪ್ರಕರಣಇನ್ನೂ ಹಸಿರಾಗಿದೆ.ಈ ಹಿನ್ನಲೆಯಲ್ಲಿ ವಸ್ತುಹಾನಿ ಮತ್ತು ಪ್ರಾಣಹಾನಿ ಆಗದಂತೆನೋಡಿಕೊಳ್ಳುವುದರ ಜೊತೆಗೆಮಾದಪ್ಪನ ಪಾರಂಪರೆಯಪಾವಿತ್ರತೆಗೆಧಕ್ಕೆಬಾರದಂತೆ ಕಾರ್ಯದರ್ಶಿ ಜಯವಿಭವಸ್ವಾಮಿ ಗಮನ ಹರಿಸಬೇಕಾಗಿದೆ.