ಕಸದ ವಿಲೆವಾರಿಗೆ ಪೌರಾಯುಕ್ತರ ಅಸಹಕಾರ ನಗರಸಭೆ ಸದಸ್ಯರಿಂದಲೇ ಕಸವಿಲೆವಾರಿಗೆ ಚಾಲನೆ

ಕೋಲಾರ,ನ,೧೮-ನಗರ ಸಭೆಯ ಪೌರಾಯುಕ್ತರು ಕಸ ವಿಲೇವಾರಿ ವಾಹನಗಳ ಡಿಸೇಲ್‌ಗೆ ಹಣ ಬಿಡುಗಡೆ ಮಾಡದ ಹಿನ್ನಲೆಯಲ್ಲಿ ನಗರಸಭೆ ಸದಸ್ಯರಿಂದಲೇ ನಗರದ ಶಾಹಿದ್ ಷಾ ನಗರದಿಂದ ಕಸವಿಲೆವಾರಿಗೆ ಚಾಲನೆ ನೀಡಿದ ಘಟನೆ ನಡೆದಿದೆ.
ಜಿಲ್ಲಾಡಳಿತ ಹಾಗೂ ನಗರಸಭೆ ಅಧಿಕಾರಿಗಳು ನಗರದ ಕಸವಿಲೇವಾರಿ ಮಾಡುವ ಮನವಿಗೆ ಸ್ಪಂದಿಸದ ಹಿನ್ನಲೆ ನಗರಸಭೆ ಸದಸ್ಯರು ಸ್ವಯಂ ಪ್ರೇರಿತವಾಗಿ ನಗರದಲ್ಲಿ ಕಸವಿಲೇವಾರಿ ಮಾಡುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಯಾ ನಗರ ಸಭೆ ಸದಸ್ಯರ ವಾರ್ಡ್ ಗಳಲ್ಲಿ ಕಲಸವಿಲೇವಾರಿ ಕಾರ್ಯ ಕೈಗೊಂಡಿರುವ ನಗರಸಭಾ ಸದಸ್ಯರು ಮೊದಲ ದಿನವಾದ ಬುಧವಾರದಂದು ಶಾಹಿದ್ ಷಾ ನಗರದಿಂದ ಕನವಿಲೇವಾರಿಗೆ ಪ್ರಾರಂಭಿಸಿರುವ ನಗರಸಭೆ ಸದಸ್ಯರು ತಾವೇ ಕಸ ಬಾಚಿ ಟ್ರಾಕ್ಟರ್‌ಗೆ ತುಂಬುವ ಮೂಲಕ ನಗರದಲ್ಲಿರುವ ರಾಶಿಗಟ್ಟಲೇ ಕಸವಿಲೇವಾರಿ ಮಾಡಿದರು.
ನಗರಸಭಾ ಸದಸ್ಯ ಅಂಬರೀಶ್ ಸುದ್ಧಿಗಾರರೊಂದಿಗೆ ಮಾತನಾಡಿ, ನಗರಸಭೆಯ ವ್ಯಾಪ್ತಿಗೆ ಬರುವ ಅನೇಕ ವಾರ್ಡುಗಳಲ್ಲಿ ಕಸವಿಲೇವಾರಿ ಹಾಗೂ ಕಸ ತೆಗೆಯುವ ಕುರಿತು ಪೌರಾಯುಕ್ತೆ ಸುಮಾರಿಗೆ ಕಳೆದ ಸಾಮಾನ್ಯ ಸಭೆಯಲ್ಲಿ ಕಸವಿಲೇವಾರಿ ಮಾಡುವ ಕುರಿತು ಸದಸ್ಯರು ಮನವಿ ಮಾಡಲಾಗಿತ್ತು, ಪೌರಾಯುಕ್ತರು ನಮ್ಮ ಸಮಸ್ಯೆಗೆ ಸ್ಪಂಧಿಸದ ಕಾರಣ ನಗರಪ್ರಾಧಿಕಾರದ ಯೋಜನಾ ನಿರ್ದೇಶಕರಿಗೆ ಹಾಗೂ ಜಿಲ್ಲಾಧಿಕಾರಿ ವೆಂಕಟರಾಜಾ ಬಳಿ ಸದಸ್ಯರ ನಿಯೋಗವು ಕಸದವಿಲೇವಾರಿಯಾಗದೆ ವಾರ್ಡಿನ ಸಾರ್ವಜನಿಕರು ನಗರಸಭೆಯ ಸದಸ್ಯರನ್ನು ಬಾಯಿಬಂದಂತೆ ಬೈಯುತ್ತಿದ್ದಾರೆ ಕೊಡಲೇ ಸಮಸ್ಯೆ ಬಗೆಹರಿಸಬೇಕೆಂದು ಮನವಿ ಮಾಡಿದ್ದರೂ ನಮ್ಮ ಸಮಸ್ಯೆಗೆ ಸ್ಪಂಧಿಸಲಿಲ್ಲವೆಂದು ಆರೋಪಿಸಿದರು.
ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ಬಳಿ ನಗರಸಭಾ ಸದಸ್ಯರ ನಿಯೋಗ ತೆರಳಿ ಕಸದ ವಿಲೇವಾರಿ ಹಾಗೂ ನಗರದಲ್ಲಿರುವ ಸಮಸ್ಯೆಗಳ ಕುರಿತು ಸಚಿವರ ಗಮನಕ್ಕೆ ತಂದಾಗ ಸಚಿವರು ಆಯುಕ್ತರಿಗೆ ದೂರವಾಣಿ ಕರೆ ಮಾಡಿ ನಗರಸಭಾ ಸದಸ್ಯರ ಸಮಸ್ಯೆಗಳಿಗೆ ಸ್ಪಂಧಿಸಬೇಕೆಂದು ಆಯುಕ್ತರಿಗೆ ಸೂಚನೆ ನೀಡಿದರೂ ಸಹ ಪೌರಾಯುಕ್ತರು ಕಸ ವಿಲೇವಾರಿ ಮಾಡುವ ವಾಹನಗಳಿಗೆ ಡೀಸೆಲ್ ಹಾಕಿಸದ ಕಾರಣ ಇಡೀ ನಗರದಲ್ಲಿ ಕಸವಿಲೇವಾರಿಯಾಗದೆ ದುರ್ವಾಸನೆಯಿಂದ ಕೊಡಿದೆ. ಇವೆಲ್ಲವನ್ನೂ ಮನಗಂಡು ಸದಸ್ಯರು ೨ನೇ ಬಾರಿ ಸಚಿವರ ಬಳಿ ಹೋಗಿ ಗಲಾಟೆ ಮಾಡಿದಾಗ ನಂತರ ಪೌರಾಯುಕ್ತರು ಕಸದ ವಿಲೇವಾರಿ ಮಾಡುವ ಕಸದ ವಾಹನಗಳಿಗೆ ಡೀಸೆಲ್ ಹಾಕಿಸಿದರು.
ವಾಹನಗಳಿಗೆ ಡೀಸೆಲ್ ಹಾಕಿಸಿ ೧೦ ದಿನ ಕಳೆದರೂ ನಗರದ ಬಹುತೇಕ ಭಾಗಗಳಲ್ಲಿ ಕಸ ವಿಲೇವಾರಿಯಾಗಿಲ್ಲ. ಕೆಲವು ವಾರ್ಡುಗಳಲ್ಲಿ ಕಸ ತೆಗೆದು ೩ ತಿಂಗಳಾಗಿದೆ, ಈ ಕುರಿತು ಪೌರಾಯುಕ್ತರನ್ನು ಪ್ರಶ್ನಿಸಿದರೆ ನಾನು ಹೊಸದಾಗಿ ಅಧಿಕಾರ ವಹಿಸಿಕೊಂಡಿದ್ದೇನೆಂದು ರೆಡಿ ಮೇಡ್ ಉತ್ತರ ನೀಡುತ್ತಾರೆ, ಆದರೆ ಅವರ ಕೈಕೆಳಗೆ ಕೆಲಸ ಮಾಡುವ ಅಧಿಕಾರಿಗಳೇನು ಹೊಸಬರಲ್ಲ, ಪೌರಾಯುಕ್ತರಿಗೆ ಗೊಂದಲ ಮಾಡಿಕೊಳ್ಳುವುದೇ ಬೇಕಾಗಿರುವುದು ಪೌರಾಯುಕ್ತರಿಗೆ ಸ್ವಇಚ್ಚೆಯಿಂದ ಕೆಲಸ ಮಾಡುವ ಮನೋಭಾವನೆ ಇಲ್ಲ, ಅಧಿಕಾರ ವಹಿಸಿಕೊಂಡಾಗಿನಿಂದ ನಗರದಲ್ಲಿ ಯಾವ್ಯಾವ ಸಮಸ್ಯೆಗಳಿವೆ ? ಎಂಬುದನ್ನು ನಗರಸಭಾ ಸದಸ್ಯರೊಂದಿಗೆ
ನಗರ ಸಂಚಾರ ಇದವರೆಗೂ ಮಾಡಿಲ್ಲ, ಆಯುಕ್ತರಿಗೆ ಕೆಲಸ ಮಾಡಲು ಇಚ್ಚಾಶಕ್ತಿ ಇಲ್ಲದಿದ್ದರೆ ಇಲ್ಲಿಂದ ವರ್ಗಾವಣೆ ಮಾಡಿ ಕೊಳ್ಳಬಹುದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಮುಂದೆ ನಗರಸಭೆ ಸದಸ್ಯರಿಂದಲೇ ಪ್ರತಿಯೊಂದು ವಾರ್ಡುಗಳಲ್ಲಿ ಸ್ವಚ್ಚತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು, ಸಾರ್ವಜನಿಕರು ಬಲಿಪಶುಗಳಾಗಬಾರದೆಂದು ನಗರಸಭಾ ಸದಸ್ಯರು ಬೀದಿಗಿಳಿದು ಕೆಲಸ ಮಾಡಲು ನಿರ್ಧರಿಸಿದ್ದಾರೆ, ಪ್ರಜಾತಂತ್ರ ವ್ಯವಸ್ಥೆಯಡಿ ಜನಪ್ರತಿನಿಧಿಗಳಾದ ನಾವುಗಳು ಆಯುಕ್ತರ ಬಳಿಗೆ ಹೋಗಿ ವಾರ್ಡುಗಳಲ್ಲಿ ಕಸವಿಲೇವಾರಿ ಮಾಡುವಂತೆ, ನೀರಿನ ಸಮಸ್ಯೆ ಬಗೆಹರಿಸುವಂತೆಹಾಗೂ ಸಾರ್ವಜನಿಕರಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವಂತೆ ಆಯುಕ್ತರನ್ನು ಕೇಳುತ್ತಿರುವುದು ಬಿಟ್ಟರೆ ಬೇರ್‍ಯಾವುದನ್ನು ಕೇಳುತ್ತಿಲ್ಲ, ನಗರಸಭಾ ಸದಸ್ಯರಿಗೆ ಆಯುಕ್ತರು ಕನಿಷ್ಟ ಪಕ್ಷ ಗೌರವ ನೀಡುವುದಿಲ್ಲ ಎಂದು ಆರೋಪಿಸಿದರು.
ನಗರಸಭಾ ಸದಸ್ಯರಾದ ಪ್ರಸಾದ್‌ಬಾಬು, ನಾರಾಯಣಮ್ಮ, ಅಪೂರ್ವ, ನೂರಿ, ಲಕ್ಷ್ಮೀ, ನಾಜೀಯಾ ಬಾಬಾಜಾನ್, ಮುಖಂಡರಾದ ಬಾಬಾಜಾನ್, ಲೋಕೇಶ್ ಇದ್ದರು.