ಕಸದ ರಾಶಿ : ಕುಂಭಕರ್ಣ ನಿದ್ರೆಯಲ್ಲಿ ಬಿ.ಗಣೇಕಲ್ ಗ್ರಾ.ಪಂ. – ಆರೋಪ

ಅರಕೇರಾ.ಮಾ.೨೫- ದೇವದುರ್ಗ ತಾಲೂಕಿನ ಬಿ.ಗಣೇಕಲ್ ಗ್ರಾಮದಲ್ಲಿನ ಗ್ರಾಮ ಪಂಚಾಯತಿ ಆಡಳಿತವು ಸ್ವಚ್ಛತೆ, ನೈರ್ಮಲ್ಯ, ಕಸ ವಿಲೇವಾರಿ, ಚರಂಡಿ ಸ್ವಚ್ಛತೆ ಕಾರ್ಯದ ಕಡೆ ಕಿಂಚಿತ್ತು ಗಮನ ಹರಿಸದೇ ಕುಂಭಕರ್ಣ ನಿದ್ರೆಗೆ ಜಾರಿದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗ್ರಾಮ ಘಟಕದ ಅಧ್ಯಕ್ಷ ಹಾಗೂ ತಾಲೂಕು ಕಾರ್ಯದರ್ಶಿ ಹಾಜಿಮಸ್ತಾನ್ ಆರೋಪಿಸಿದ್ದಾರೆ.
ನೂತನ ಗ್ರಾಮ ಪಂಚಾಯತಿ ಆಡಳಿತ ಅಸ್ತಿತ್ವಕ್ಕೆ ಬಂದು ಎರಡು ತಿಂಗಳು ಆಗುತ್ತಿದೆ. ಅಲ್ಲದೆ ಪ್ರಥಮ ಸಾಮಾನ್ಯ ಸಭೆ ಕೂಡ ನಡೆದಿದೆ. ಎಲ್ಲ ಸದಸ್ಯರುಗಳು ವಿವಿಧ ಯೋಜನೆಗಳಡಿ ಒಟ್ಟು ಲಭ್ಯವಿರುವ ಅನುದಾನದಲ್ಲಿ ತಮಗೆ ಸಿಗುವ ಅನುದಾನಕ್ಕನುಗುಣವಾಗಿ ಬೇಡಿಕೆ ಪಟ್ಟಿಯನ್ನು ಕೂಡ ಸಲ್ಲಿಸಿದ್ದಾರೆ.
ವಿಪರ್ಯಾಸವೆಂದರೆ ಗ್ರಾಮದಲ್ಲಿ ಸ್ವಚ್ಛತೆ, ಕಸ ವಿಲೇವಾರಿ, ನೈರ್ಮಲ್ಯದಂತಹ ವಿಷಯಗಳ ಕುರಿತು ಚರ್ಚೆಯಾಗಿಲ್ಲ. ಅಲ್ಲದೆ ಗ್ರಾಮ ಪಂಚಾಯತಿಯು ಸಹ ಇಂತಹ ಮೂಲಭೂತ ಸಮಸ್ಯೆಗಳ ಪರಿಹಾರಕ್ಕೆ ಯಾವುದೇ ಕ್ರಮ ಕೈಗೊಳ್ಳದೆ ದಿವ್ಯ ನಿರ್ಲಕ್ಷ್ಯ ವಹಿಸಿದೆ. ಇದರಿಂದಾಗಿ ಗ್ರಾಮದಲ್ಲಿ ಪ್ರಮುಖ ರಸ್ತೆ. ಹಾಗೂ ಒಳ ರಸ್ತೆಗಳಲ್ಲಿ ಕಸ ಶೇಖರಣೆಯಾಗಿ ಜನರು ಮುಗು ಮುಚ್ಚಿಕೊಂಡು ಓಡಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಗ್ರಾಮದ ಜಹೀರ್ ಗ್ಯಾರೇಜ್ ನಿಂದ ಕೊತ್ತಡೊಡ್ಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಹಾಗೂ ದುರುಗಮ್ಮ ದೇವಸ್ಥಾನದ ವರೆಗೆ ಚರಂಡಿಯಲ್ಲಿ ಕಸ ಹೂಳು ತುಂಬಿಕೊಂಡಿದೆ. ಕಸ ಹಾಕಲು ಸೂಕ್ತ ಸ್ಥಳದ ಅಭಾವದ ಕಾರಣ ಸಾರ್ವಜನಿಕರು ತಮ್ಮ ಮನೆಗಳಲ್ಲಿ ಸಂಗ್ರಹವಾದ ಕಸವನ್ನು ಇಲ್ಲಿನ ರಸ್ತೆ, ಚರಂಡಿಗೆ ಸುರಿಯುತ್ತಿದ್ದಾರೆ. ಇದರಿಂದಾಗಿ ರಸ್ತೆಗಳು ಕಸಮಯವಾಗಿವೆ. ಚರಂಡಿಗಳಲ್ಲಿ ವರ್ಷಗಳಿಂದ ಸಂಗ್ರಹವಾದ ಹೂಳು ತೆಗೆಯುಂತೆ ಸ್ಥಳೀಯರು ಅನೇಕ ಬಾರಿ ಗ್ರಾ.ಪಂ. ಗೆ ಮನವಿ ಮಾಡಿದರು ಸಹ ಪ್ರಯೋಜನವಾಗಿಲ್ಲ.
ಕಸ ಸಂಗ್ರಹ ವಾಹನಅನಾತವಾಗಿ ನಿಂತಿರುವದು.
ಗ್ರಾಮಪಂಚಾಯತಗಳಲ್ಲಿಯೂ ಮನೆ ಮನಗೆ ಸಂಗ್ರಹಿಸುವ ಘನತ್ಯಾಜ್ಯ ವಿಲೇವಾರಿ ವಾಹನಗಳ ವಿತರಣಾ ವಾಹನವು ಕೂಡಾ ಗ್ರಾಮ ಪಂಚಾಯತಿಗೆ ಬಂದು ಸುಮಾರು ೧೦ ತಿಂಗಳು ಗತಿಸಿದೆ, ಘನತ್ಯಾಜ್ಯ ವಾಹನವು ಮನೆ ಮನೆಗೆ ತೆರಳಿ ಕಸ ಸಂಗ್ರಹಿಸಿ ಅದನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲಿಕ್ಕೆ ಜನರಿಗೆ ಹಸಿ ಮತ್ತು ಒಣ ಕಸ ವಿಂಗಡಿಸಿ ವಾಹನಕ್ಕೆ ಹಾಕುವುದಕ್ಕಾಗಿ ಸ್ವಚ್ಚ ಭಾರತ ವಿಶನ್ ಮುಖಾಂತರವೇ ಎರಡು ಬಕೇಟುಗಳನ್ನು ನೀಡಲಾಗುತ್ತಿದೆ. ಅದರೆ ಗ್ರಾಮ ಪಂಚಾಯತ ಪಕ್ಷದಲ್ಲಿ ಸುಮಾರು ೧೦ ತಿಂಗಳಿಂದ ವಾಹನವೂ ನಿಂತಲ್ಲೆ ನಿಂತುಬಿಟ್ಟಿದೆ ವಿನಹ ಒಂದು ಹೆಜ್ಜೆ ಕೂಡ ಚಲಿಸಿಲ್ಲ.
ಗ್ರಾಮ ಪಂಚಾಯತಿಗೆ ಹೊಸ ಆಡಳಿತ ತಕ್ಕ ಮಟ್ಟಿಗೆ ಕೆಲಸ ಮಾಡಿ ಜನರ ವಿಶ್ವಾಸಗಳಿಸಿ ಸಮಸ್ಯೆಗಳನ್ನು ಪರಿಹರಿಸುವಲ್ಲಿ ವಿಫಲವಾಗುತ್ತಿದೆ ಉತ್ತಮ ಆಡಳಿತ ನಿರೀಕ್ಷೆ ಹೊಂದಿದ್ದ ಜನರಿಗೆ ನಿರಾಸೆ ಮೂಡಿಸುತ್ತಿದೆ ಇನ್ನೂ ಮುಂದೆಯಾದರೂ ಗ್ರಾಮದಲ್ಲಿ ವಾರ್ಡುಗಳಲ್ಲಿನ ಸ್ವಚ್ಛತೆ, ನೈರ್ಮಲ್ಯ, ಕಸ ವಿಲೇವಾರಿ, ಚರಂಡಿ ಸ್ವಚ್ಛತೆ ಕಾರ್ಯದ ಕಡೆ ಗ್ರಾಮ ಪಂಚಾಯತ ಆಡಳಿತ ಮಂಡಳಿಯವರು ಗಮನಹರಿಸಿ ಸ್ಚಚ್ಚತೆಮಾಡುವವರೇ ಕಾದುನೋಡಬೇಕಾಗಿದೆ ? ಎಂದು ರೈತ ಮುಖಂಡ ಹಾಜೀಮುಸ್ತಾನ್ ಹೇಳಿದರು.