ಕಸದ ರಾಶಿಯಿಂದ ಗಬ್ಬು ನಾರುತ್ತಿರುವ ತರಕಾರಿ ಮಾರುಕಟ್ಟೆ

ನಂಜನಗೂಡು: ನ.09:- ಜಾನುವಾರು ಮತ್ತು ತರಕಾರಿ ಮಾರುಕಟ್ಟೆಯಲ್ಲಿ ವರ್ಷಗಳಿಂದ ಕಸದ ರಾಶಿ ಕೊಳತ ತರಕಾರಿ ಪ್ಲಾಸ್ಟಿಕ್ ನಿಂದ ಹಾಗೂ ಸ್ವಚ್ಛತೆ ಇಲ್ಲದೆ ಕೊಳೆತು ಗಬ್ಬು ನಾರುತಿದೆ ಇದರಿಂದ ಮಾರುಕಟ್ಟೆಗೆ ಬರುವ ಗ್ರಾಹಕರು ಸಂಬಂಧಪಟ್ಟ ಅಧಿಕಾರಿಗಳಿಗೆ ಪ್ರತಿದಿನ ಬೆಳ್ಳಂ ಬೆಳಿಗ್ಗೆ ಶಾಪ ಹಾಕುತ್ತಿರುವುದು ಕಂಡು ಬರುತ್ತಿದೆ.
ಈ ಮಾರುಕಟ್ಟೆಗೆ ಪ್ರತಿದಿನ ನಂಜನಗೂಡು ತಾಲೂಕಿನ ಸಾವಿರಾರು ರೈತರು ತಾವು ಬೆಳೆದ ತರಕಾರಿಗಳನ್ನು ತಂದು ವ್ಯಾಪಾರ ಮಾಡುತ್ತಾರೆ ಇದರ ಜೊತೆಗೆ ಜಾನುವಾರುಗಳ ಸಂತೆಯು ಕೂಡ ಇಲ್ಲೇ ನಡೆಯುತ್ತದೆ ಆದ್ದರಿಂದ ಈ ಮಾರುಕಟ್ಟೆಗೆ ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಪಾರಸ್ಥರು ಬರುವುದರಿಂದ ಪ್ರತಿದಿನ ಸಂತೆ ಮಧ್ಯಭಾಗದಲ್ಲಿ ಕೊಳೆತು ನಾರುತ್ತಿರುವ ಈ ಕಸದ ರಾಶಿ ಗಬ್ಬು ನಾರುತಿದ್ದು ಪ್ರತಿಯೊಬ್ಬರು ಮೂಗು ಮುಚ್ಚಿಕೊಂಡು ವ್ಯಾಪಾರ ಮಾಡುವ ಪರಿಸ್ಥಿತಿ ಉಂಟಾಗಿದ್ದರು ಕೂಡ ಸಂಬಂಧ ಪಟ್ಟ ಅಧಿಕಾರಿಗಳು ಕಂಡು ಕಾಣದಂತೆ ಪ್ರತಿದಿನ ಶುಂಕ ವಸೂಲಿ ಮಾಡುತ್ತಿದ್ದಾರೆ ಎನ್ನುತ್ತಾರೆ.
ಇದರ ಜೊತೆಗೆ ಪ್ರತಿದಿನ ಬೆಳಗಿನ ಜಾವ 4:00ಗೆ ತರಕಾರಿ ವ್ಯಾಪಾರ ಆರಂಭವಾಗುತ್ತದೆ ತಾಲೂಕಿನಿಂದ ಪಟ್ಟಣದಿಂದ ಹಲವಾರು ಗ್ರಾಹಕರು ವ್ಯಾಪಾರಕ್ಕೆ ಬರುತ್ತಾರೆ.
ಪ್ರತಿದಿನ ಸ್ವಚ್ಛತೆ ಮಾಡುವವರು ಇಲ್ಲ ತುಂಬಿದ ಕಸವನ್ನು ಸಾಗಿಸುವುದು ಇಲ್ಲ ಇವರಿಂದ ಮಾರುಕಟ್ಟೆಗೆ ಬರುವವರಿಗೆ ಸಾಂಕ್ರಾಮಿಕ ರೋಗ ಉಂಟಾಗುವ ಪರಿಸ್ಥಿತಿ ಎದುರಾಗಿದೆ ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕೊಳೆತು ಗಬ್ಬು ನಾರುತ್ತಿರುವ ಕಸದ ರಾಶಿಯನ್ನು ತೆರವುಗೊಳಿಸಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ.
ಈ ಮಾರುಕಟ್ಟೆಯಲ್ಲಿ ಮೂಲಭೂತ ಸೌಕರ್ಯವಿಲ್ಲದೆ ಇರುವುದರಿಂದ ಮೂಲಭೂತ ಸೌಕರ್ಯ ಒಳಗೊಂಡಂತೆ ಹೊಸ ಮಾರುಕಟ್ಟೆ ನಿರ್ಮಾಣ ಮಾಡಿದ್ದಾರೆ ಶಾಸಕರು ಕೂಡ ಈ ಮಾರುಕಟ್ಟೆಯನ್ನು ಉದ್ಘಾಟಿಸಿದ್ದಾರೆ ಆದರು ಹಳೆಯ ಮಾರುಕಟ್ಟೆಯಿಂದ ಹೊಸ ಮಾರುಕಟ್ಟೆಗೆ ಬದಲಾವಣೆ ಮಾಡಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ ಇದಕ್ಕೆ ಸಂಬಂಧಿಸಿದ ಯಾವ ಅಧಿಕಾರಿಗಳು ಸೂಕ್ಷ್ಮವಾಗಿ ಉತ್ತರ ನೀಡುತ್ತಿಲ್ಲ.
ಒಟ್ಟಾರೆ ತರಕಾರಿ ಮತ್ತು ಜಾನುವಾರು ಮಾರುಕಟ್ಟೆಯಲ್ಲಿ ಮೂಲಭೂತ ಸೌಕರ್ಯವಿಲ್ಲದೆ ಪ್ರತಿನಿತ್ಯ ಗಬ್ಬು ನಾರುತಿದೆ ಮುಂದಾದರು ಹಳೆಯ ಮಾರುಕಟ್ಟೆಯನ್ನು ತೆರವುಗೊಳಿಸಿ ನೂತನ ಮಾರುಕಟ್ಟೆಯಲ್ಲಿ ವ್ಯಾಪಾರ ಆರಂಭಿಸಬೇಕೆಂದು ವ್ಯಾಪಾರಸ್ಥರು ಒತ್ತಾಯಿಸಿದ್ದಾರೆ.