ಕಸದ ರಾಶಿಯಾದ ಅಕ್ಷರ ದಾಸೋಹ ಕಛೇರಿ : ಅಧಿಕಾರಿಗಳು ನಿರ್ಲಕ್ಷ್ಯ

ಲಿಂಗಸುಗೂರು,ಸೆ.೧೨- ಪಟ್ಟಣದ ಅಕ್ಷರ ದಾಸೋಹ ಕಛೇರಿಯಲ್ಲಿ ರಾಶಿ ರಾಶಿ ಕಸದ ರಾಶಿ ನಿರ್ಮಾಣವಾಗಿದೆ. ಇಲ್ಲಿನ ಅಧಿಕಾರಿಗಳು ಕಂಡು ಕಾಣದಂತೆ ವರ್ತಿಸುತ್ತಿದ್ದಾರೆ.
ಎರಡು ತಾಲೂಕಿಗೆ ಒಂದೆ ಕಚೇರಿ : ಮಸ್ಕಿ ಹಾಗೂ ಲಿಂಗಸುಗೂರು ತಾಲೂಕಿಗೆ ಒಂದೆ ಕಚೇರಿ ಯಾಗಿದ್ದರಿಂದ ಇಲ್ಲಿನ ಸಿಬ್ಬಂದಿ ಕೊರತೆ ಇಂದ ಕಛೇರಿ ಕಸದ ರಾಶಿ ಯಾಗಿ ಮಾರ್ಪಟಿದೆ.
ಒಟ್ಟು ೩೭೦ ಶಾಲೆಗಳೆಗೆ ಇದು ಒಂದು ಕಛೇರಿ ಆಗಿರುತ್ತದೆ. ಶಾಲೆಗಳಿಗೆ ಬಿಸಿಊಟ ಅಡುಗೆ ಸಿಬ್ಬಂದಿಗಳಿಗೆ ಇದು ಒಂದು ದೊಡ್ಡ ಕಛೇರಿ ಇರುತ್ತದೆ.
ಕಚೇರಿ ಎಲ್ಲಿದೆ ಎಂಬ ಸಾರ್ವಜನಿಕರಿಗೆ ಸಂಶಯ : ತಾಲ್ಲೂಕಿನ ಒಂದು ದೊಡ್ಡ ಕಛೇರಿ ಯಾದ ಇದು ಎಲ್ಲಿದೆ ಎಂಬುದು ಸಾರ್ವಜನಿಕರ ಗೊತ್ತಿಲ್ಲ ಎಂಬ ಮಾಹಿತಿ ಕೇಳಿಬರುತ್ತವೆ.
ಅನಧಿಕೃತ ಗೈರು ಹಾಜರಿ : ದಿನಾಂಕ ೯-೮-೨೩ರಿಂದ ೨೯-೮-೨೩ ರವರೆಗೆ ಅನಧಿಕೃತ ಗೈರು ಹಾಜರಿದ್ದರು ಇದಕ್ಕೆ ನೋಟಿಸ್ ನೀಡಲಾಗಿದೆ. ಇದಕ್ಕೆ ಇನ್ನೂ ಉತ್ತರ ನೀಡಲ್ಲ ಎಂದು ತಾಪಂ ಅಧಿಕಾರಿ ಅಮರೇಶ ಯಾದವ್ ಹೇಳಿದರು.
ಇಲ್ಲಿನ ಜವಾಬ್ದಾರಿ ಅಧಿಕಾರಿಯಾದ ಸಹಾಯಕ ನಿರ್ದೇಶಕ ನಾಗನಗೌಡ ಅವರು ಮಾತನಾಡಿ ನಮ್ಮ ಕಛೇರಿಯಲ್ಲಿ ಸಿಬ್ಬಂದಿ ಕೊರತೆ ಇದೆ ಅದರಿಂದ ನಮಗೆ ತೊಂದರೆಯಾಗುತ್ತದೆ ಆದಷ್ಟು ಬೇಗನೆ ಮೇಲಾಧಿಕಾರಿಗೆ ಮಾತನಾಡಿ ಸಮಸ್ಯೆಯನ್ನ ಬಗೆಹರಿಸಲಾಗುವುದು ಎಂದು ಹೇಳಿದರು.