ಕಷ್ಟ ಬಂದಾಗ ದೇವರ ನೆನಪಾಗುವುದು 

ಚನ್ನಗಿರಿ. ಏ.೧; ಬದುಕಿನಲ್ಲಿ ಕಷ್ಟವೇ ಬರಲಿ ಸುಖವೆ ಬರಲಿ ಅದಕ್ಕೆ ಭಗವಂತನೇ ಕಾರಣ. ಕಷ್ಟದ ಸೂತ್ರಧಾರಿ ಮತ್ತು ಪರಿಹಾರದ ಸೂತ್ರಧಾರಿ ದೇವರೇ ಆಗಿದ್ದಾನೆ. ಕಷ್ಟ ಬಂದಾಗ ಮೊದಲು ನೆನಪಾಗುವುದು ದೇವರೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.ಅವರು  ತಾಲೂಕಿನ ಕತ್ತಲಗೆರೆ ಗ್ರಾಮದಲ್ಲಿ ಶ್ರೀ ಉಚ್ಚಂಗೆಮ್ಮ ದೇವಸ್ಥಾನ ಉದ್ಘಾಟನಾ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು. ಬಹು ಜನ್ಮದ ಪುಣ್ಯದ ಫಲವಾಗಿ ಪಡೆದ ಮಾನವ ಜೀವನದಲ್ಲಿ ಧರ್ಮ ದೇವರು ಮತ್ತು ಗುರುವನ್ನು ಮರೆಯಬಾರದು. ಬದುಕಿ ಬಾಳುವ ಮನುಷ್ಯನಿಗೆ ದೇವರು ಕೊಟ್ಟ ಸಂಪನ್ಮೂಲ ಅಪಾರ. ಬದುಕಿನಲ್ಲಿ ದೇವರ ಧ್ಯಾನ ಸ್ಮರಣೆ ಮತ್ತು ಪೂಜೆ ಪ್ರಮುಖ ಪಾತ್ರ ವಹಿಸುತ್ತವೆ. ಮನುಷ್ಯನ ಬುದ್ಧಿ ಶಕ್ತಿ ಮತ್ತು ವಿಜ್ಞಾನಕ್ಕೂ ನಿಲುಕದೇ ಇರುವ ಅವ್ಯಕ್ತವಾದ ಅದ್ಭುತ ಶಕ್ತಿಯಿದೆ. ಅದನ್ನೇ ದೇವರು ಎಂದು ನಂಬಿ ಪೂಜಿಸುತ್ತಾ ಬಂದಿದ್ದೇವೆ. ಶಿವಶಕ್ತಿಯಿಂದ ಈ ಜಗತ್ತು ನಿರ್ಮಾಣಗೊಂಡಿದೆ. ಶಕ್ತಿ ಬಿಟ್ಟು ಶಿವ ಶಿವನ ಬಿಟ್ಟು ಶಕ್ತಿ ಇಲ್ಲ. ಅವೆರಡೂ ಅವಿನಾಭಾವ ಸಂಬAಧದಿAದ ಇವೆ ಎಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಸಿದ್ಧಾಂತ ಶಿಖಾಮಣಿಯಲ್ಲಿ ಬೋಧಿಸಿದ್ದಾರೆ. ಸತ್ಯ ಶುದ್ಧವಾದ ಧರ್ಮಾಚರಣೆಯಲ್ಲಿ ಬಾಳಿ ಜೀವನದಲ್ಲಿ ಸುಖ ಶಾಂತಿ ಪಡೆಯಬೇಕೆಂದರು.ಕಣ್ವಕುಪ್ಪಿಯ ಡಾ.ನಾಲ್ವಡಿ ಶಾಂತಲಿಂಗ ಶಿವಾಚಾರ್ಯರು, ರಾಂಪುರದ ರೇವಣಸಿದ್ಧ ಶಿವಾಚಾರ್ಯರು ಮತ್ತು ಕತ್ತಲಗೆರೆ ಬೃಹನ್ಮಠದ ಶಿವಕುಮಾರ ಉಮಾಪತಿ ಹಾಲಸ್ವಾಮಿಗಳು ಪಾಲ್ಗೊಂಡು ಉಪದೇಶಾಮೃತವನ್ನಿತ್ತರು. ಶ್ರೀಮತಿ ಅನುಸೂಯಮ್ಮ ಮೊದಲ್ಗೊಂಡು ಹಲವಾರು ಗಣ್ಯರಿಗೆ ಮತ್ತು ದಾನಿಗಳಿಗೆ ರಕ್ಷಾ ಕವಚವಿತ್ತು ಜಗದ್ಗುರುಗಳು ಆಶೀರ್ವದಿಸಿದರು. ಮಹಾರುದ್ರಯ್ಯ ಇವರಿಂದ ಸ್ವಾಗತ, ತೆಲಗುಂದದ ಗುರುಸ್ವಾಮಿಯವರಿಂದ ನಿರೂಪಣೆ ನಡೆದವು.ಸಮಾರಂಭಕ್ಕೂ ಮುನ್ನ ಗ್ರಾಮದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳವರ ಅಡ್ಡಪಲ್ಲಕ್ಕಿ ಮಹೋತ್ಸವ ಸಂಭ್ರಮದಿAದ ಜರುಗಿತು. ಸಹಸ್ರಾರು ಭಕ್ತರು ಪಾಲ್ಗೊಂಡು ಜಗದ್ಗುರುಗಳವರ ದರ್ಶನಾಶೀರ್ವಾದ ಪಡೆದರು.