ಕಷ್ಟ ಕಾಲದಲ್ಲಿ ನೆರವಾಗುವುದು ಮಾನವ ಧರ್ಮ

ಮೈಸೂರು: ಜೂ.01: ದೇಶ ರಾಜ್ಯ ದಲ್ಲಿ ಕರೂನಾ ರುದ್ರ ತಾಂಡವ ಮುಂದುವರಿದಿದ್ದು, ನಗರ ಮತ್ತು ಜಿಲ್ಲೆ ಜನ ತೀರಾ ಸಂಕಷ್ಟಕ್ಕೊಳಗಾಗಿದ್ದು, ನಾಡಿನ ಜನ ಕರೂನಾ ಹಿಮ್ಮೆಟ್ಟಿಸಲು ಪಕ್ಷಭೇದ ಮರೆತು ಒಟ್ಟಾಗಿ ಹೊರಡುವಂತೆ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ.ಟಿ ಪ್ರಕಾಶ್ ಕರೆ ನೀಡಿದರು.
ಲಾಕ್ ಡೌನ್ ನಿಂದ ಸಂಕಷ್ಟದಲ್ಲಿರುವ ಅರ್ಚಕರ ಪುರೋಹಿತರ ಕುಟುಂಬ ವರ್ಗಕ್ಕೆ ಅಪೂರ್ವ ಸ್ನೇಹ ಬಳಗ ಮತ್ತು ಸುಮುಖ ಕನ್ಸಟ್ರಕ್ಷನ್ ವತಿಯಿಂದ ಚಾಮುಂಡಿಪುರಂ ಅಪೂರ್ವ ಹೊಟೆಲ್ ಸಭಂಗಣದಲ್ಲಿ ಆಹಾರ ದಿನಸಿ ಕಿಟ್ ವಿತರಿಸಲಾಯಿತು.
ನಂತರ ಮಾತನಾಡಿದ ಮೈಸೂರು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ ಟಿ ಪ್ರಕಾಶ್ ಕಷ್ಟಕಾಲದಲ್ಲಿ ಒಬ್ಬರಿಗೊಬ್ಬರು ನೆರವಾಗುವುದು ಮಾನವ ಧರ್ಮ, ಉಳ್ಳವರು ಮನಸು ಬಿಚ್ಚಿ ಕೂರೂನಾ ರೋಗಿಗಳಿಗೆ ಬೇರೆ ಬೇರೆ ರೀತಿಯಿಂದ ಸಹಕಾರ ನೀಡುವಂತೆ ಮನವಿ ಮಾಡಿದರು .
ಇದೇ ಸಂಧರ್ಭದಲ್ಲಿ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿಟಿ. ಪ್ರಕಾಶ್, ಬ್ರಾಹ್ಮಣ ಸಂಘದ ಕಾರ್ಯದರ್ಶಿ ಅಪೂರ್ವ ಸುರೇಶ್, ಸುಮುಖ ಕನ್ ಸ್ಟ್ರಕ್ಷನ್ ಮಾಲೀಕರಾದ ಅರುಣ್, ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕರಾದ ಗಿರೀಶ್, ಸಂಘಟನಾ ಕಾರ್ಯದರ್ಶಿ ಅಜಯ್ ಶಾಸ್ತ್ರಿ, ಚಕ್ರಪಾಣಿ, ನವೀನ್, ಚೇತನ್ ಕಾಂತರಾಜು ಹಾಗೂ ಇನ್ನಿತರರು ಹಾಜರಿದ್ದರು.