ಕಷ್ಟದಲ್ಲೂ ಮಾನವೀಯತೆ ಮೆರೆದ ರೈತ ಬಸವರಾಜ ಕಾತ್ರಾಳ: ರೈತನ ಸಂಕಷ್ಟಕ್ಕೆ ಸ್ಪಂಧಿಸಿದ ಶಾಸಕ ಎಂ.ಬಿ.ಪಾಟೀಲ್

ಬಬಲೇಶ್ವರ, ಜೂ.1-ತಾಲೂಕಿನ ಸಂಗಾಪುರ ಎಸ್.ಎಚ್ ಗ್ರಾಮದ ರೈತ ಬಸವರಾಜ ಕಾತ್ರಾಳ ತಮ್ಮ 3ಎಕರೆ ಜಮೀನಿನಲ್ಲಿ 5ಸಾವಿರ ಬಾಳೆ ಸಸಿಗಳನ್ನು ನೆಟ್ಟು, ಪೋಷಿಸಿ, ಲಾಕ್‍ಡೌನ್ ನಿಮಿತ್ತ ಮಾರುಕಟ್ಟೆಗೆ ಬಾಳೆಹಣ್ಣುಗಳು ತಲುಪಿಸದೇ ಹತಾಶಯಕ್ಕೊಳಗಾಗಿದ್ದ, ಇದೀಗ ಹತಾಶಯ ನಡುವೆಯೂ ಮಾನವೀಯತೆಗೆ ಮುಂದಾಗಿ, ಇತರ ರೈತರಿಗೆ ಮಾದರಿಯಾಗಿದ್ದಾರೆ.
ಮಾರುಕಟ್ಟೆ ಇಲ್ಲದೆ ಹಾಳಾಗುತ್ತಿದ್ದ ಅವರ ಬಾಳೆ ಬೆಳೆಯನ್ನು ಸುತ್ತಲಿನ ಹಳ್ಳಿಗಳ ರೈತರಿಗೆ ನೀಡವುದರ ಜೊತೆಗೆ ಮಾಸ್ಕ ಹಾಗೂ ಸೈನಿಟೈಸರ್ ನೀಡುತ್ತಿರುವುದು ಕೊರೊನಾ ಜಾಗೃತಿಗೆ ಮುಂದಾಗಿದ್ದಾರೆ. ಈ ಕೊರೊನಾ ಕಾಯಿಲೆ ಮನುಷ್ಯರಿಗೆ ಶರೀರದಲ್ಲಿ ಎಲ್ಲ ತೊಂದರೆಗಳನ್ನು ಮಾಡಿದೆ. ರೈತರಾಗಿರುವ ನಾವು ನಮ್ಮ ತೋಟದಲ್ಲಿ ಪ್ರತ್ಯೇಕವಾಗಿ ಇದ್ದು, ಉತ್ತಮ ಬೇಸಾಯ ಮಾಡಿದರ ಫಲ ಕೈಗೆ ಬಂಡ ತುತ್ತು ಲಾಕ್‍ಡೌನ್ ಹಿನ್ನೆಲೆಯಲ್ಲಿ ಬಾಯಿಗೆ ಬರಲಿಲ್ಲ. ಏನೆ ಆಗಲಿ ನಮ್ಮ ಭಾಗದಲ್ಲಿ ಎಂ.ಬಿ.ಪಾಟೀಲರಿಂದ ಉತ್ತಮ ನೀರಾವರಿ ಆಗಿದೆ. ಈ ಬಾರಿ ಹಾನಿ ಅನುಭವಿಸದರೂ, ಮುಂದಿನ ಬಾರಿ ಮತ್ತೆ ನಾನು ಉತ್ತಮ ಬೆಳೆ ಬೆಳೆಯುತ್ತೇನೆ ಎಂದು ಆತ್ಮವಿಶ್ವಾಸದಿಂದ ರೈತ ಬಸವರಾಜ ಕಾತ್ರಾಳ ತಿಳಿಸಿದ್ದಾರೆ.
ವಿಷಯ ಅರಿತ ಬಬಲೇಶ್ವರ ಶಾಸಕ, ಮಾಜಿ ಸಚಿವ ಎಂ.ಬಿ.ಪಾಟೀಲ್‍ರವರು ದೂರವಾಣಿಯಲ್ಲಿ ರೈತನಿಗೆ ಅಗತ್ಯ ಪರಿಹಾರ ಒದಗಿಸಲು ಕ್ರಮ ಜರುಗಿಸುವಂತೆ ಬಬಲೇಶ್ವರ ತಹಶೀಲ್ದಾರ ಹಾಗೂ ತಾಲೂಕಾ ತೋಟಗಾರಿಕೆ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಮತ್ತು ರೈತ ಬಸವರಾಜನೊಂದಿಗೆ ಮಾತನಾಡಿ, ಧೈರ್ಯ ತುಂಬಿದ್ದಾರೆ.
ಈಗಾಗಲೇ ಬಸವರಾಜ ಅವರು ಶೇಗುಣಿಸಿ, ಹಲಗಣಿ, ಬಬಲೇಶ್ವರ, ನಿಡೋಣಿ, ನಾಗರಾಳ, ಯಕ್ಕುಂಡಿ, ಹೊಕ್ಕುಂಡಿ ಹಾಗೂ ಅರ್ಜುನಗಿ ಗ್ರಾಮಗಳಲ್ಲಿ ಬಾಳೇಹಣ್ಣು, ಮಾಸ್ಕ ಹಾಗೂ ಸೈನಿಟೈಸರ್‍ಗಳನ್ನು ಮುಂದೆ ಕೂಡ ವಿವಿಧ ಹಳ್ಳಿಗಳಲ್ಲಿ ವಿತರಿಸಲಿದ್ದಾರೆ.
ಕಷ್ಟದಲ್ಲೂ ಮಾನವೀಯತೆ ಮೆರೆದ ರೈತ: ರೈತನ ಸಂಕಷ್ಟಕ್ಕೆ ಸ್ಪಂಧಿಸಿದ ಎಂ.ಬಿ.ಪಾಟೀಲರು ಬಬಲೇಶ್ವರ ತಾಲೂಕಿನ ಸಂಗಾಪುರ ಎಸ್.ಎಚ್ ಗ್ರಾಮದ ರೈತ ಬಸವರಾಜ ಕಾತ್ರಾಳ ತಮ್ಮ 3ಎಕರೆ ಜಮೀನಿನಲ್ಲಿ 5ಸಾವಿರ ಬಾಳೆ ಸಸಿಗಳನ್ನು ನೆಟ್ಟು, ಪೋಷಿಸಿ, ಲಾಕ್‍ಡೌನ್ ನಿಮಿತ್ತ ಮಾರುಕಟ್ಟೆಗೆ ಬಾಳೆಹಣ್ಣುಗಳು ತಲುಪಿಸದೇ ಹತಾಶಯಕ್ಕೊಳಗಾಗಿದ್ದ, ಇದೀಗ ಹತಾಶಯ ನಡುವೆಯೂ ಮಾನವೀಯತೆಗೆ ಮುಂದಾಗಿ, ಇತರ ರೈತರಿಗೆ ಮಾದರಿಯಾಗಿದ್ದಾರೆ.