ಕಷ್ಟದಲ್ಲಿ ಕೈ ಹಿಡಿದು ಮೇಲೆ ಎತ್ತುವ ಗೆಳತನವೇ ಶ್ರೇಷ್ಠ

ಕಲಬುರಗಿ,ಜು.20:ಹಣ ನೋಡಿ ಹೆಗಲ ಮೇಲೆ ಕೈ ಹಾಕುವ ಗೆಳೆತನಕ್ಕಿಂತ ಕಷ್ಟದಲ್ಲಿ ಕೈ ಹಿಡಿದು ಮೇಲೆ ಎತ್ತುವ ಗೆಳತನವೇ ಶ್ರೇಷ್ಠ ಇಂತಹ ಗೆಳೆಯರ ಕೂಟವೇ ಸ್ನೇಹ ಸಂಗಮ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರಾದ ಪ್ರೊ. ವಾಸುದೇವ ಸೇಡಂ ಹೇಳಿದರು.
ನಗರದ ಆಳಂದ ರಸ್ತೆಯಲ್ಲಿರುವ ಸಕ್ಸೆಸ್ ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ ಸ್ನೇಹ ಸಂಗಮ ವಿವಿಧೋದ್ದೇಶ ಸೇವಾ ಸಂಘ ಹಾಗೂ ಕಂಪ್ಯೂಟರ್ ತರಬೇತಿ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಸಮಾಜ ಸೇವಕ, ನ್ಯಾಯವಾದಿ ಹಣಮಂತರಾಯ ಅಟ್ಟೂರ ಅವರ 26 ವರ್ಷದ ಸಮಾಜ ಸೇವೆಯ ನಿಮಿತ್ಯವಾಗಿ “ಕಲೆಗಳ ಸಂಗಮ, ಕಲಾವಿದರ ಸಂಭ್ರಮ” ಹಾಗೂ ನೇತ್ರಧಾನಿಗಳಿಗೆ ಗೌರವ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡುತ್ತಾ ಇಂದಿನ ಸಂದರ್ಭದಲ್ಲಿ ಸಮಾಜ ಸೇವೆ ಮಾಡಿದರೆ ನಮಗೇನು ಸಿಗುತ್ತದೆ ಎನ್ನುವ ಸಂದರ್ಭದಲ್ಲಿ ಅಟ್ಟೂರ ತಮ್ಮ ಗೆಳೆಯರ ಜೊತೆಗೂಡಿ ನಿಸ್ವಾರ್ಥವಾಗಿ ಪ್ರಾಮಾಣಿಕ ಸೇವೆ ಮಾಡುತ್ತಿರುವುದು ಹೆಮ್ಮೆಯ ವಿಷಯ. ಅವರು ಮಾಡುವ ಕಾರ್ಯದಿಂದಲೇ ಹೋದ ವರ್ಷ “ದಣಿವರಿಯದ ಹೋರಾಟಗಾರ” ಹಣಮಂತರಾಯ ಅಟ್ಟೂರ ಎಂದು ನಾನೇ ಪುಸ್ತಕ ಬರೆದು ಪುಸ್ತಕ ಬಿಡುಗಡೆ ಮಾಡಿದೆನೆ.. ಅವರನ್ನು ನಾನು ಬಹಳ ಸಮೀಪದಿಂದಲೇ ನೋಡಿರುವ ವ್ಯಕ್ತಿ ಅವರೊಬ್ಬ ಅಪರೂಪದ ಸಮಾಜಸೇವಕ ಎಂದು ಹೇಳಿದರೆ ತಪ್ಪಾಗಲಾರದು ಎಂದು ಮಾರ್ಮಿಕವಾಗಿ ನುಡಿದರು. ಮುಖ್ಯ ಅತಿಥಿಗಳಾದ ರಂಗಭೂಮಿ ಕಲಾವಿದರಾದ ರಮೇಶ ಕೋರಿಶೆಟ್ಟಿ ಮಾತನಾಡುತ್ತಾ ಕಲೆ ಮೈಗಳ್ಳರ ಸ್ವತ್ತಲ್ಲ ಅದು ಶ್ರಮ ಜೀವಿಗಳ ಸ್ವತ್ತಾಗಿದೆ.ಅಟ್ಟೂರರು ಇಂತಹ ಕಲಾವಿದರನ್ನು ಗುರುತಿಸಿ ಸಮಾಜಕ್ಕೆ ಪರಿಚಯಿಸುವ ಕಾರ್ಯ ನಿರಂತರವಾಗಿ ಮಾಡುತ್ತಿದ್ದಾರೆ. ಶ್ರೀಯುತರು ಆರ್ಥಿಕದಿಂದ ಶ್ರೀಮಂತಿಕೆ ಇರದಿದ್ದರೂ ಹೃದಯವಂತಿಕೆಯಿಂದ ಶ್ರೀಮಂತಿಕೆ ಯಿಂದ ಕೂಡಿದ ಮಹಾನ ವ್ಯಕ್ತಿಯಾಗಿದ್ದಾರೆ ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಉಪನ್ಯಾಸಕರಾದ ಎಚ್ ಬಿ ಪಾಟೀಲ, ಬಸವರಾಜ ಜೋಗುರ ಆಗಮಿಸಿದ್ದರು. ಸಕ್ಸೆಸ್ ಕಂಪ್ಯೂಟರ್ ತರಬೇತಿ ಕೇಂದ್ರದ ಮುಖ್ಯಸ್ಥರಾದ ಅಸ್ಲಾಮ ಶೇಖ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಇದೇ ಸಂದರ್ಭದಲ್ಲಿ ಅಟ್ಟೂರ ಹುಟ್ಟು ಹಬ್ಬದ ನಿಮಿತ್ಯ ನೇತ್ರದಾನ ಮಾಡಿದ ದಿಲೀಪಕುಮಾರ ಭಕ್ರೆ, ಮಲಕಾರಿ ಪೂಜಾರಿ, ಚಿತ್ರಕಲಾ ಅಡಕಿ, ರಾಜು ಹೆಬ್ಬಾಳ, ಬಸವರಾಜ ಹೆಳವರ ಯಾಳಗಿ, ಶ್ರೀದೇವಿ ಅಟ್ಟೂರ ಇವರಿಗೆ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ರಘುನಂದನ ಕುಲಕರ್ಣಿ, ಸಾಯಬಣ್ಣ ಬೆಳಾಮ,ರಾಜಶೇಖರ ಪಾಟೀಲ, ಸಂಗಮೇಶ ಶಾಸ್ತ್ರಿ ಮಾಶಾಳ, ವಿನೋದಕುಮಾರ ದಸ್ತಪೂರ, ಶ್ರವಣಕುಮಾರ ಮಠ, ಶಿವಯೋಗೆಪ್ಪ ಬಿರಾದಾರ, ಕಲ್ಯಾಣರಾವ ಮುರುಡ, ಸಂಗಮೇಶ ನಾಗೂರ, ತಾರಾ ಬಿರಬಿಟ್ಟೆ ಅಟ್ಟೂರ, ಸೇರಿದಂತೆ ತರಬೇತಿ ಕೇಂದ್ರದ ಸಿಬ್ಬಂದಿಗಳು, ತರಬೇತಿದಾರರು, ಸಂಘದ ಸದಸ್ಯರು ಹಾಗೂ ಇತರರು ಉಪಸ್ಥಿತರಿದ್ದರು. ಇದೇ ಸಮಯದಲ್ಲಿ ಹಲವಾರು ಕಲಾವಿದರು ಕೂಡಿ ತಮ್ಮ ಅದ್ಭುತ ಕಲೆಯಿಂದ ಸಂಭ್ರಮಿಸಿ ಸರ್ವರರಿಂದ ಚಪ್ಪಾಳೆ ತಟ್ಟಿಸಿಕೊಂಡರು.