ಕಷ್ಟದಲ್ಲಿರುವ ಜನರಿಗೆ ಸ್ಪಂದನೆ ಅಗತ್ಯ: ತೇಲ್ಕೂರ

ಕಲಬುರಗಿ:ಜೂ.11: ದಿನಾಲು ಮಳೆ, ಚಳಿ, ಬಿಸಿಲು ಲೆಕ್ಕಿಸದೇ ಮನೆ- ಮನೆಗಳಿಗೆ ಪತ್ರಿಕೆಗಳನ್ನು ತಲುಪಿಸು ( ಹಂಚು) ವ ಪತ್ರಿಕಾ ವಿತರಕರಿಗೆ ಇಲ್ಲಿನ ಕಲಬುರಗಿ ಜಿಲ್ಲಾ ಸಹಕಾರಿ ಕೇಂದ್ರ (ಡಿಸಿಸಿ) ಬ್ಯಾಂಕ್ ನ ವತಿಯಿಂದ ಪಡಿತರ ಕಿಟ್ ಗಳನ್ನು ವಿತರಿಸಲಾಯಿತು.

ಮಹಾನಗರದಲ್ಲಿ ಪತ್ರಿಕೆಗಳನ್ನು ಹಂಚುವವರಿಗೆ ಬ್ಯಾಂಕ್ ನ ಆವರಣದಲ್ಲಿ ಬ್ಯಾಂಕ್ ಸರ್ವ ಆಡಳಿತ ಮಂಡಳಿಯೊಂದಿಗೆ ಕಿಟ್ ಗಳನ್ನು ಹಂಚಲಾಯಿತು.
ನಂತರ ಮಾತನಾಡಿದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಾಗಿರುವ ಶಾಸಕ ತೇಲ್ಕೂರ, ಕಷ್ಟದಲ್ಲಿರುವ ಜನರಿಗೆ ಸ್ಪಂದಿಸುವುದು ಅಗತ್ಯ ವಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೊರೊನಾದಿಂದ ಸಂಕಷ್ಡಕ್ಕೆ ಒಳಗಾದವರಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಜನ ಸೇವಾ ಕಾರ್ಯ ಮುಂದುವರೆದಿದೆ ಎಂದು ವಿವರಿಸಿದರು.
ಬ್ಯಾಂಕ್ ನ ಉಪಾಧ್ಯಕ್ಷ ಸುರೇಶ ಸಜ್ಜನ, ನಿರ್ದೆಶಕರಾದ ಶರಣ ಬಸಪ್ಪ ಪಾಟೀಲ್ ಅಷ್ಠಗಾ, ಅಶೋಕ ಸಾವಳೇಶ್ವರ, ಬಾಪುಗೌಡ ಪಾಟೀಲ್, ಬಸವರಾಜ ಪಾಟೀಲ್, ನಿಂಗಣ್ಣ ದೊಡ್ಮನಿ, ಸಿದ್ರಾಮರಡ್ಡಿ ಕೌಳೂರ, ವ್ಯವಸ್ಥಾಪಕ ನಿರ್ದೇಶಕ ಚಿದಾನಂದ ನಿಂಬಾಳ ಸೇರಿದಂತೆ ಮುಂತಾದವರಿದ್ದರು.