ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಗುಣ ಬೆಳೆಯಲಿ: ಡಾ ರವಿ ಚವ್ಹಾಣ

ಕಲಬುರಗಿ:ಜೂ.4: ಕರೋನಾ ಸಂಕಷ್ಟದ ಸಂದರ್ಭದಲ್ಲಿ ಬಡವರು ಅಸಾಹಯಕರು, ಅನಾಥರು ಅನ್ನ ನೀರಿಲ್ಲದೆ ಪರದಾಡುವಂತಾಗಿದೆ ಇಂತಹ ಸಂದರ್ಭದಲ್ಲಿ ಅವರಿಗೆ ಕೈಲಾದಷ್ಟು ಸೇವೆ ಮಾಡುವ ಮೂಲಕ ಅವರ ಕಷ್ಟದಲ್ಲಿ ಭಾಗಿಯಾಗಿ ಅತ್ಮತೃಪ್ತಿ ಪಡೆದುಕೋಳ್ಳುವ ಗುಣ ಬೆಳೆಸಿಕೊಳ್ಳೊಣ ಎಂದು ಕಾಂಗ್ರೆಸ್ ಯುವ ಮುಖಂಡ ಡಾ. ರವಿ ಚವ್ಹಾಣ ಹೇಳಿದರು.

ಕಲಬುರಗಿ ಜಿಲ್ಲೇಯ ಕಮಲಾಪೂರ, ಕಲಬೆನ್ನೂರ ಗ್ರಾಮದಲ್ಲಿ ಆಹಾರ ಪದಾರ್ಥದ ಕಿಟ್ ವಿತರಿಸಿ ಮಾತನಾಡಿ ಕರೋನ 2 ನೇ ಅಲೆಯಿಂದ ರೈತರು ತಾವು ಬೆಳೆದ ಹಣ್ಣು ಹಂಪಲು ತರಕಾರಿಗಳು ಮಾರುಕಟ್ಟೆಗೆ ಹಾಕಲಾಗದೆ ಅವರು ಬೆಳೆದಿರುವ ಹಣ್ಣು ತರಕಾರಿ ಹಾಳಾಗಿಹೋಗುತಿದೆ ರೈತರು ತುಂಬಾ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ ಕೂಡಲೆ ಸರ್ಕಾರ ರೈತನ ಪ್ರತಿ ಎಕರೆಗೆ 10 ಸಾವಿರ ಪರಿಹಾರ ನೀಡಬೇಕು. ರೈತರ ಹೊಲಗಳಲ್ಲಿ ಕೂಡಲೆ ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ತಹಸಿಲ್ದಾರರು ಸಮಿಕ್ಷೆ ಮಾಡಿ ರೈತರಿಗೆ ಪರಿಹಾರ ನೀಡಬೇಕು ಎಂದು ಡಾ ರವಿ ಚವ್ಹಾಣ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಹಣಮಂತ ಹರಸೂರ, ತೈಯಬ್ ಚೌದರಿ,ಶಂಕರ ಗೌಡ, ಗ್ರಾ.ಪಂ ಸದಸ್ಯ ರಾಜು, ಶರಣು ಕುಂಬಾರ,ಸುಭಾನ ಪಟೇಲ್,ರಾಜು ಪೂಜಾರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು ಉಪಸ್ಥಿತರಿದ್ದರು.