ಕಷ್ಟದಲ್ಲರುವವರಿಗೆ ನೆರವಾಗುತ್ತಿರುವ ಮಹಾಂತೇಶ್ ಒಣರೊಟ್ಟಿ; ಶ್ಲಾಘನೆ

ದಾವಣಗೆರೆ. ಜೂ.೧; ಉತ್ತರ ಕರ್ನಾಟಕದಿಂದತುತ್ತು ಕೂಳಿಗೆ ಉದ್ಯೋಗ ಹರಸಿ ಚಾಲಕನಾಗಿ ದಾವಣಗೆರೆಗೆ ಬಂದು ಇಂದು ದಾವಣಗೆರೆಯ ಬಸವೇಶ್ವರ ಟ್ರಾನ್ಸಪೋರ್ಟ್ ನ ಮಾಲಿಕರಾಗಿ ಎರಡು ದಶಕಗಳಿಂದ ನೂರಾರು ಯುವಕರಿಗೆ ಉದ್ಯೋಗ ನೀಡಿ.ಸಾವಿರಾರು ಜನತೆಗೆ ಅನ್ನದಾತರಾಗಿರುವ ಯಾವುದೇ ರಾಜಕೀಯ ಪಕ್ಷಕ್ಕೆ ಅನೂಯಾಯಿಯಾಗದೇ ಅಧಿಕಾರಕ್ಕೆ ಆಸೆಪಡದೇ ಇರುವ ವ್ಯಕ್ತಿ ಒಣರೊಟ್ಟಿ ಮಹಂತೇಶ್ ಎಂದು  ಶೋಷಿತ ವರ್ಗಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಬಾಡದ ಆನಂದರಾಜ್ ಬಣ್ಣಿಸಿದ್ದಾರೆ. ದಾವಣಗೆರೆಯಲ್ಲಿ ಸಂಕಷ್ಟದ ದಿನಗಳಲ್ಲಿ *ಹಸಿದವರಿಗೆ ಅನ್ನ ನೀಡುವ ಮಹಾ ಕಾಯಕ. ಬರಗಾಲದಲ್ಲಿ ಮತ್ತು ಕೋರೋನಾದಿಂದ ಲಾಕ್ ಡೌನ್ ಸಮಯದಲ್ಲಿ  ದಾವಣಗೆರೆ ಜನತೆಗೆ ಆಹಾರ ಕಿಟ್ ಗಳೊಂದಿಗೆ ಮೊದಲು ಧಾವಿಸುವುದು  *ಒಣರೊಟ್ಟಿ ಮಹಂತೇಶ್* ಎಂದರೆ ತಪ್ಪಾಗಲಾರದು. ಕೊರೊನಾ ಮೊದಲ ಅಲೆ ಹಾಗೂ ಇಂದಿಗೂ ನೊಂದವರಿಗೆ ನೆರವು ನೀಡುತ್ತಿದ್ದಾರೆ.ತನ್ನ ದುಡಿಮೆಯಲ್ಲಿ ಅರ್ಧದಷ್ಟು ಬಾಗ ದಾನ-ಧರ್ಮಗಳಿಗೆ ನೀಡುತ್ತಿರುವುದು ಹೆಮ್ಮೆಯ ವಿಚಾರ.ಕಾಯಕವೇ ಕೈಲಾಸ* ಮತ್ತು *ಅರಿವೇ ಗುರು* ಎನ್ನುವಂತೆ ವಿಶ್ವಗುರು ಬಸವಣ್ಣನವರ ಅಪ್ಪಟ ಅನೂಯಾಯಿ ಒಣರೊಟ್ಟಿ ಮಹಂತೇಶ್ .ಯಾವುದೇ ಶುಭ ಕಾರ್ಯಗಳಿಗೆ ಬಸವಣ್ಣನವರ ಭಾವಚಿತ್ರ ನೀಡುವ ಮಹನ್ *ಕಾಯಕಯೋಗಿ*.ಉತ್ತರ ಕರ್ನಾಟಕದಿಂದ ಜೀರೋ ಆಗಿ ದಾವಣಗೆರೆಗೆ ಬಂದು ಹೀರೋ ಆಗಿರುವ ನಮ್ಮೆಲ್ಲರ ಶೋಷಿತರ ಧ್ವನಿಯಾಗಿರುವ *ಕೊಟ್ಟಿದ್ದು ತನಗೆ ಬಚ್ಚಟ್ಟಿದ್ದು ಪರರಿಗೆ*ಎಂಬಂತೆ ನಡೆದುಕೊಳ್ಳುತ್ತಿದ್ದಾರೆ.