ಕಷ್ಟಗಳಿಗೆ ಸ್ಪಂದಿಸುವ ಅಭ್ಯರ್ಥಿಗೆ ಮತ ನೀಡಿ ಗೆಲ್ಲಿಸಲು ಕರೆ

ಜಗಳೂರು.ಡಿ.೪: ಎರಡು ಬಾರಿ ಸೋತರು ಕ್ಷೇತ್ರದ ಮತದಾರರೊಂದಿಗೆ ಸದಾ ಕಷ್ಟಗಳಿಗೆ ಸ್ಪಂದಿಸುವ ಸ್ಥಳೀಯ ಅಭ್ಯರ್ಥಿ ಚಿತ್ರದುರ್ಗ-ದಾವಣಗೆರೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಎಸ್.ನವೀನ್‌ರವರಿಗೆ ಅಧಿಕ ಮತ ನೀಡಿ ಗೆಲ್ಲಿಸುವಂತೆ ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ ಸದಸ್ಯರುಗಳಿಗೆ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾದ ಬೈರತಿ ಬಸವರಾಜ ಮನವಿ ಮಾಡಿದರು.ತಾಲ್ಲೂಕಿನ ಪಲ್ಲಾಗಟ್ಟೆ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಭಾರತೀಯ ಜನತಾ ಪಾರ್ಟಿ ವತಿಯಿಂದ ಹಮ್ಮಿಕೊಂಡಿಂದ ಚಿತ್ರದುರ್ಗ -ದಾವಣಗೆರೆ ವಿಧಾನಪರಿಷತ್ ಕ್ಷೇತ್ರದ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಬಿಜೆಪಿ ಪಕ್ಷದ ಪ್ರಧಾನಮಂತ್ರಿಯವರ ನರೇಂದ್ರ ಮೋದಿ ಯಾವಾಗಲೂ ರೈತ ಪರ ಕೆಲಸ ಮಾಡಲು ಸಿದ್ಧರಿದ್ದಾರೆ. ರಾಜ್ಯದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಯಾವಾಗಲೂ ರೈತರ ಪರವಾಗಿ ಗ್ರಾಮಗಳ ಅಭಿವೃದ್ಧಿಗೆ ಸಾಕಷ್ಟು ಅನುಧಾನ ನೀಡಿದ್ದಾರೆ. ಈ ಹಿಂದೆ ಎರಡು ಬಾರಿ ವಿಧಾನ ಪರಿಷತ್‌ಸಭೆ ಆಯ್ಕೆಯಾಗಿ ಕ್ಷೇತ್ರಗಳಿಗೆ ತಿರಿಗಿಯೂ ನೋಡದೇ ನಿರ್ಲಕ್ಷಿಸಿದ್ದರು. ಈಗ ಮತ್ತೆ ಹೊರಗಡೆ ಅಭ್ಯರ್ಥಿಯಾಗಿ ನಿಂತಿರುವ ಸೋಮಶೇಖರ ಅವರನ್ನು ಸೋಲಿಸುವ ಮೂಲಕ ಕಾಂಗ್ರೇಸ್ ಸರಿಯಾದ ಪಾಠ ಕಲಿಸುವಂತೆ ಮನವಿ ಮಾಡಿದರು.ಗೆದ್ದು ತಿರುಗಿ ನೋಡದವರಿಗೆ ಪಾಠ ಕಲಿಸಿ:ಶಾಸಕ ಎಸ್.ವಿ.ರಾಮಚಂದ್ರ ಮಾತನಾಡಿ ಕಳೆದ ಬಾರಿ ಚಿತ್ರದುರ್ಗ-ದಾವಣಗೆರೆ ಕ್ಷೇತ್ರದಿಂದ ಗೆದ್ದ ಅಭ್ಯರ್ಥಿ ಇದುವರೆಗೂ ತಾಲೂಕಿನ ಕಡೆಗೆ ತಿರುಗಿ ನೋಡಿಲ್ಲ. ಅಂತವರಿಗೆ ಮತ ನೀಡಬೇಡಿ. ನನ್ನ ಕ್ಷೇತ್ರದಲ್ಲಿ ಗ್ರಾಮ ಪಂಚಾಯಿತಿಯಿಂದ ಹಿಡಿದು ಸಂಸತ್ ಚುನಾವಣೆವರೆಗೂ ನಮ್ಮ ಬಿಜೆಪಿ ಪಕ್ಷಕ್ಕೆ ಜನರು ಅತಿ ಹೆಚ್ಚು ಮತ ನೀಡಿದ್ದಾರೆ. ಈ ಬಾರಿಯು ಬಿಜೆಪಿ ಅಭ್ಯರ್ಥಿ ಕೆ.ಎಸ್.ನವೀನ್ ಅಧಿಕ ಮತ ನೀಡಿ ಗೆಲ್ಲಿಸಬೇಕು ಎಂದರು.ಚಿತ್ರದುರ್ಗ -ದಾವಣಗೆರೆ ವಿಧಾನಪರಿಷತ್ ಕ್ಷೇತ್ರದ ಅಭ್ಯರ್ಥಿ ಕೆ.ಎಸ್ ನವೀನ್ ಮಾತನಾಡಿ ಕಳೆದ ಚುನಾವಣೆಯಲ್ಲಿ ಪ್ರತಿ ಗ್ರಾಮ ಪಂಚಾಯಿತಿಗಳಿಗೂ ,ಮನೆ ಮನೆಗೆ ಬೇಟಿ ನೀಡಿ ಗ್ರಾಮ ಪಂಚಾಯಿತಿಗಳ ಸ್ಥಿಗತಿಗಳ ಬಗ್ಗೆ ಅವಲೋಕನ ಮಾಡಿದ್ದೇ. ನನಗೆ ಅಧಿಕ ಮತ ನೀಡಿದ್ದರೂ, 222 ಮತಗಳ ಕಡಿಮೆ ಮತಗಳ ಅಂತರದಲ್ಲಿ ಸೋಲಾಯಿತು. ಎರಡು ಬಾರಿ ಸೋತರು ಆದರೂ ಜನರೊಂದಿಗೆ ಕಷ್ಟಗಳಿಗೆ ಸ್ಪಂಧಿಸಿದ್ದೇನೆ. ಈ ಬಾರಿ ನನಗೆ ಹೆಚ್ಚಿನ ಮತಗಳನ್ನು ನೀಡಿ ಗೆಲ್ಲಿಸುವಂತೆ ಮನವಿ ಮಾಡಿದರು.ಹಣದ ಆಮಿಶಗಳಿಗೆ ಒಳಗಾಗಬೇಡಿ:ಸಂಸದ ಜಿ.ಎಂ ಸಿದ್ದೇಶ್ವರ ಮಾತನಾಡಿ ನಮ್ಮ ಬಿಜೆಪಿ ಪಕ್ಷದ ಅಭ್ಯರ್ಥಿ ನವೀನ್ ಕೆ. ಎಸ್ ಅವರಿಗೆ ಮೊದಲ ಪ್ರಾಶಸ್ತö್ಯದ ಮತ ನೀಡಿ ಗೆಲ್ಲಿಸಿ. ಹಣದ ಆಮಿಶಗಳಿಗೆ ಒಳಗಾಗಬೇಡಿ. ಹಣ ಹಂಚಿ ಗೆಲ್ಲಲು ಪ್ರಯತ್ನಿಸುವವರಿಗೆ ಸರಿಯಾದ ಪಾಠ ಕಲಿಸುವಂತೆ ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ ಸದಸ್ಯರುಗಳಿಗೆ ಮನವಿ ಮಾಡಿದರು. ಮುಂದಿನ ಸಲವು ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿ, ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ, ಶಾಸಕರಾಗಿ ಎಸ್.ವಿ.ರಾಮಚಂದ್ರ ಗೆಲವು ಖಚಿವಾಗಿದೆ ಎಂದು ಸಂಸದರು ವಿಶ್ವಾಸ ವ್ಯಕ್ತ ಪಡಿಸಿದರು.ಗುರುಸಿದ್ದಾಪುರ, ಜಗಳೂರು ಟೌನ್, ಬಿದರಕೆರೆ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಬಿಜೆಪಿ ಅಭ್ಯರ್ಥಿಕೆ.ಎಸ್.ನವೀನ್ ಪರ ಚುನಾವಣಾ ಮತ ಯಾಚನೆ ಮಾಡಲಾಯಿತು.ಈ ಸಂದರ್ಭದಲ್ಲಿ ಎಂ.ಎಲ್.ಸಿ.ರವಿಕುಮಾರ್, ಬಿ.ಜೆ.ಪಿ ಜಿಲ್ಲಾ ಅಧ್ಯಕ್ಷ ಹನಗವಾಡಿವೀರೇಶ್, ಮಂಡಲ ಅಧ್ಯಕ್ಷ ಪಲ್ಲಾಗಟ್ಟೆ ಹೆಚ್.ಸಿ ಮಹೇಶ್, ವೇಣುಗೋಪಾಲ ರೆಡ್ಡಿ, ಜಗದೀಶ್, ಹೆಚ್. ನಾಗರಾಜ್. ಎಸ್.ಕೆ ಮಂಜುನಾಥ್, ಶ್ರೀನಿವಾಸ್ ದಾಸ್ ಕರಿಯಪ್ಪ ಭಾಗವಹಿಸಿದ್ದರು. 
Attachments area