ಕವಿ ಹೃದಯ ಸಾಕಾರವಾಗಬೇಕು

ದಾವಣಗೆರೆ. ಏ.೪: ಕಾವ್ಯ ಕನ್ನಿಕೆ ಮೂಡಬೇಕೆಂದರೆ, ಕವಿಹೃದಯ, ಮನಸ್ಸು ಶುದ್ಧಗೊಂಡಿದ್ದರೆ, ಗಟ್ಟಿ ಕಾವ್ಯ ಮೂಡುತ್ತವೆ ಎಂದು ದಾವಣಗೆರೆ, ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕರಾದ ಡಾ. ಸಿದ್ಧಪ್ಪ ಬಿ. ಕಕ್ಕರಮೇಲಿ ಹೇಳಿದರು.
ಸುಕೃತಿ ಪ್ರಕಾಶನ, ದಾವಣಗೆರೆ, ಡಿ.ಜಿ. ಪುಟ್ಟರಾಜು ಗೆಳೆಯರ ಬಳಗ ಇವರು ರೋಟರಿ ಬಾಲ ಭವನದಲ್ಲಿ ಆಯೋಜಿಸಿದ್ದ “ಬೆಳದಿಂಗಳ ಬೆಳಕಿನಲಿ” ಕವನ ಸಂಕಲನ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ಕವನಗಳು ಸಹೃದಯ ಓದುಗರನ್ನು ತನ್ನತ್ತ ಸೆಳೆಯುತ್ತವೆ. ಎಲ್ಲ ವಿಭಾಗಗಳ ಮೇಲೆ ಕವಿಗಳಾದ ವಿವೇಕಾನಂದ ಸ್ವಾಮಿಯವರು ಕಣ್ಣಾಡಿಸಿ, ವಸ್ತು ನಿಷ್ಠತೆಯಿಂದ ಕೂಡಿ ಕವನ ರಚಿಸಿದ್ದಾರೆ. ಹೈಸ್ಕೂಲು ಮಟ್ಟದಿಂದ ಆರಂಭಗೊಂಡು ಇಲ್ಲಿವರೆಗೆ ಸಾಗಿ ಕವನ ಬೆಳಕಿಗೆ ತಂದು ಆದರ್ಶ ಪ್ರಿಯರಾಗಿದ್ದಾರೆ ಎಂದರು.
ಕವನ ಸಂಕಲನ ಬಿಡುಗಡೆ ಮಾಡಿ, ಮಾತನಾಡಿದ ಧಾರವಾಡ ಡಾ.ಲಿಂಗರಾಜ ರಾಮಪುರ್   ಕಾವ್ಯ ಸಂಕಲನ ಪ್ರಥಮ, ಕವಿಯ ಇತಿ-ಮಿತಿ ಸಹಜ ಕಾವ್ಯಗಳು ಸುಂದರ ಸದೃಢ ಇವೆ. ಅದಾಗ್ಯೂ ಕುಣಿತ, ತಣಿತ ಮರೆಯಾಗಬೇಕಿದೆ. ಇಲ್ಲಿವರೆಗೆ ನಡೆದ ಕಾವ್ಯದ ಹಾದಿ ಆಶ್ಚರ್ಯ. ತಣ್ಣಗೆ ಬರೆವ ಪುಸ್ತಕ ರೂಪಕ್ಕೆ ತರುವ ಕಾರ್ಯ ಸುಲಭವಲ್ಲ. ಗೆಳೆಯರ ಪ್ರೋತ್ಸಾಹ ಇನ್ನಷ್ಟು ದೊರೆತು ಅವರ ಬೇರೆ ಕಾವ್ಯ ಪ್ರಕಾಶನಗೊಳ್ಳಲಿ ಎಂದರು.ಮುಖ್ಯ ಅತಿಥಿಗಳಲ್ಲಿ ಓರ್ವರಾದ ಕಲಿವೀರ ಕಳ್ಳಿಮನಿ ಗುರುವಾಗಿ, ಹಿರಿಯರಾಗಿರುವ ವಿವೇಕಾನಂದಸ್ವಾಮಿ ಅವರ ಕಾವ್ಯ ಜೀವನ ಇತರರಿಗೆ ಆದರ್ಶಪ್ರಾಯ. ಅವರ ಧರ್ಮಪತ್ನಿಯಾದ ಶ್ರೀಮತಿ ವನಜಾಕ್ಷಮ್ಮ ಅವರನ್ನು ಸಹ ಓದಿಸಿ, ಅವರ ಸಹಕಾರ ಪಡೆದು ಕಾವ್ಯಗುಚ್ಛ ಹೆಣೆದು ಸಹೃದಯ ಓದುಗರ ಕೈಗೆತ್ತಿದ್ದಾರೆ. ಶ್ರಮ ಅನನ್ಯ ಇವರ ಮಾದರಿ ಇತರರಿಗೆ ಅನುಕರಣೆ ಆಗಲಿ ಎಂದು ಆಶಿಸಿದರು.ಹೆಚ್.ಚಂದ್ರಪ್ಪ, ಪ್ರತಿಭಾ ಪಿ. ದೊಗ್ಗಳ್ಳಿ,  ಕೆ.ಎಂ.ವನಜಾಕ್ಷಿ,  ಓಂಕಾರಯ್ಯ ತವನಿಧಿ, ದಾದಾಪೀರ್ ನವಿಲೇಹಾಳ್ ಇದ್ದರು.