ಕವಿ ಸಾಹಿತಿಗಳಿಂದ ಕನ್ನಡದ ಬೆಳವಣಿಗೆ

ಶಹಾಬಾದ್ :ನ.3:ಕನ್ನಡ ನುಡಿ, ಭಾಷೆ, ಸಾಹಿತ್ಯವನ್ನು ಬೆಳೆಸುವಲ್ಲಲಿ ಕವಿಗಳು ಹಾಗೂ ಸಾಹಿತಿಗಳ ಪಾತ್ರ ತುಂಬಾ ಮುಖ್ಯವಾಗಿದೆ ಎಂದು ಎಂದು ಜಿ.ಆರ್.ಗೊಳೇದ ಕಾಲೇಜಿನ ಪ್ರಾಚಾರ್ಯ ಚಂದ್ರಶೇಖರ ಹೇಳಿದರು.
ಅವರು ತಾಲೂಕ ಕನ್ನಡ ಸಾಹಿತ್ಯ ಪರಿಷತ್ತ್ ವತಿಯಿಂದ ಕನ್ನಡ ಭವನದಲ್ಲಿ ಆಯೋಜಿಸಿದ್ದ ಸುವರ್ಣ ರಾಜ್ಯೋತ್ಸವ ಕವಿ ಗೋಷ್ಠಿಯಲ್ಲಿ ಮಾತನಾಡುತ್ತ, ಕಾವ್ಯ ರಚನೆಗೆ ಅಧ್ಯಾಯನ ಅವಶ್ಯಕವಾಗಿದೆ, ಜಗತ್ತಿನ ಎಲ್ಲಾ ಭಾಷೆಗಳಲ್ಲಿ ಕನ್ನಡ ಭಾಷೆ ಸಮೃದ್ದವಾಗಿದ್ದು, ಸಾಹಿತ್ಯ ರಚನೆಗೆ ಸೂಕ್ತ ಭಾಷೆಯಾಗಿದೆ. ಜಗತ್ತಿನ ಸರ್ವಶ್ರೇಷ್ಠ ಸಾಹಿತ್ಯ ರಚನೆಯಾಗಿರುವದು ಕನ್ನಡದಲ್ಲಿ ಎಂಬ ಹೆಮ್ಮೆ ನಮಗೆ ಇದೆ ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಕೂಡಲ ಸಂಗಮ ಶಿಕ್ಷಣ ಸಂಸ್ಥೆ ಉಪನ್ಯಾಸ ಪೀರ ಪಾಶಾ ಅವರು ಮಾತನಾಡುತ್ತ, ಇಂದು ಇಂಗ್ಲೀಷ್ ಪ್ರೇಮದಿಂದ ಕನ್ನಡ ಶಾಲೆಗಳು, ವಿಶೇಷವಾಗಿ ಸರ್ಕಾರಿ ಕನ್ನಡ ಶಾಲೆಗಳು ವಿದ್ಯಾರ್ಥಿಗಳಿಲ್ಲದೆ ಸೊರಗುತ್ತಿವೆ. ಕನ್ನಡ ಮಾಧ್ಯಮ ಶಾಲೆಯಿಂದ ಮಾತ್ರ ಕನ್ನಡ ಭಾಷೆ ಉಳಿಸಲು ಸಾಧ್ಯ ಕಾವೇರಿಯಿಂದ ಗೋದಾವರಿಯವರೆಗೆ ಹಬ್ಬಿದ ಕನ್ನಡ ಭಾಷೆ, ಹಲವಾರ ಪ್ರಥಮಗಳಿಗೆ ಕನ್ನಡ ಭಾಷೆ ಸಾಕ್ಷಿಯಾಗಿದೆ. ಇಂತಹ ಭಾಷೆಯನ್ನು ಉಳಿಸುವ, ಬೆಳೆಸುವ ಕೆಲಸ ನಮ್ಮಿಂದಾಗಬೇಕು ಎಂದು ಹೇಳಿದರು. ಕವಿಗೋಷ್ಠಿಯಲ್ಲಿ ಕವಿಗಳಾದ ರಾಜಶೇಖರ ದೇವರಮನಿ, ವಾಸುದೇವ ಚವ್ಹಾಣ, ಪ್ರತಿಕ್ಷಾ ರಾಜಶೇಖರ, ಗಿರಿಮಲ್ಲಪ್ಪ ವಳಸಂಗ, ಕೆ.ರಮೇಶ ಭಟ್ಟ, ರಾಜಕುಮಾರ ಅವರು ತಮ್ಮ ಕವಿತೆಗಳನ್ನು ಓದಿದರು. ವೇದಿಕೆ ಮೇಲೆ ಉದ್ಯಮಿ ಭೀಮರಾವ ಮೇಟಿ, ಕಸಾಪ ತಾಲೂಕ ಅಧ್ಯಕ್ಷ ಶರಣಬಸಪ್ಪ ಕೋಬಾಳ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶರಣಗೌಡ ಪೊಲೀಸ್ ಪಾಟೀಲ (ಗೋಳಾ ಕೆ), ಕನಕಪ್ಪ ದಂಡಗುಲಕರ್, ಚಂದ್ರಕಾಂತ ಗೊಬ್ಬುರಕರ, ಗಂಗಾಧರ, ರತನರಾಜ ಕೋಬಾಳಕರ, ಗುರು ಪ್ರಸಾದ ಕೋಬಾಳ, ಬಸವರಾಜ ಕೊಳ್ಳೂರ, ರಾಜು ಕೋಬಾಳ ಇತರರು ಇದ್ದರು. ಶರಣು ವಸ್ತ್ರದ ನಿರೂಪಿಸಿದರು, ವಾಸುದೇವ ಚವ್ಹಾಣ ಸ್ವಾಗತಿಸಿದರು, ಬಾಬುರಾವ ಪಂಚಾಳ ವಂದಿಸಿದರು.