ಕವಿ-ಕಾವ್ಯ-ಕೃತಿಗಳ ಅನುಸಂಧಾನ : ಸರಣಿ ಮಾತುಕತೆ

ಕಲಬುರಗಿ:ಜ.3:ಕನ್ನಡ ಅಧ್ಯಯನ ಸಂಸ್ಥೆಯ ಕಲ್ಯಾಣ ಕರ್ನಾಟಕ ಲೇಖಕರ ಗ್ರಂಥಾಲಯ ಮತ್ತು ಭಾವಚಿತ್ರ ಸಂಗ್ರಹಾಲಯ ಭವನದಲ್ಲಿ ಕವಿ-ಕಾವ್ಯ-ಕೃತಿಗಳ ಅನುಸಂಧಾನ : ಸರಣಿ ಮಾತುಕತೆ ಮಾಲಿಕ ಸಮಾರಂಭವನ್ನು ಡಾ. ಬಸವರಾಜ ಡೋಣೂರ ಉದ್ಘಾಟಸಿ ಮಾತನಾಡುತ್ತ ಕನ್ನಡ ಸಾಹಿತ್ಯ ಶ್ರೀಮಂತಿಕೆಯಿಂದ ಕೂಡಿದೆ ಲೇಖಕಕರ ಜವಾಬ್ದಾರಿಯಿಂದ ಬರೆಯಬೇಕು. ಆವಾಗ ಉತ್ತಮ ಕೃತಿ ಹೊರಬರುತ್ತದೆ. ಮನಸ್ಸಿನ ಕಂದಕಗಳು ದೂರವಾಗಬೇಕು ಅದೇ ನಿಜವಾದ ಪ್ರಜಾ ಪ್ರಭುತ್ವ ಎಂದರು. ಪೆÇ್ರ. ವಿಕ್ರಮ ವಿಸಾಜಿ ಅವರ ಬಿಸಿಲು ಕಾಡಿನ ಹಣ್ಣು ಕೃತಿಯನ್ನು ಅನುಸಂಧಾನಕ್ಕೊಳಪಡಿಸಿದ ಡಾ. ಶ್ರೀಶೈಲ ನಾಗರಾಳ ಅವರು ಆ ಕೃತಿಯ ಸಮಗ್ರ ವಿಷಯವನ್ನು ವಿಮರ್ಶಾತ್ಮಕವಾಗಿ ಪರಿಶೀಲಿಸಿದರು. ಒಟ್ಟು 43 ಕವನಗಳ ವೈಶಿಷ್ಟ್ಯ, ವಸ್ತು, ವಿನ್ಯಾಸ ಅದರ ಸಂದೇಶ ಕುರಿತು ಬೆಳಕು ಚಲ್ಲಿದರು. ಕಮ್ಮಾರ ಕುಲುಮೆ, ಪಣೀಕರ ಹೆಂಡತಿ ಪ್ರಮುಖವಾದ ಕವನಗಳು.

ಡಾ. ಶ್ರೀನಿವಾಸ ಸಿರನೂರಕರ್ ಅವರ ಪುರಂದರ ಬಂಡಾಯ ಕೃತಿಯ ಸಮಗ್ರ ವಿಷಯವನ್ನು ಡಾ. ದಸ್ತಗಿರಿಸಾಬ್ ದಿನ್ನಿ ವಿಮರ್ಶಾತ್ಮಕವಾಗಿ ಕಟ್ಟಿಕೊಟ್ಟರು. ಪುರಂದರ ದಾಸರ ಸಮಾಜ ಮುಖಿ ಚಿಂತನೆ ದಾಸ ಸಾಹಿತ್ಯ-ಶರಣ ಸಾಹಿತ್ಯದ ತೌಲನಿಕ ಅವಲೋಕನ ಮತ್ತು ಬಂಡಾಯ ಪರಂಪರೆಗೆ ಪುರಂದರ ದಾಸರು ದಾರಿ ತೊರಿಸಿದರು ಎಂದು ಹೇಳಿದರು.

ಅಧ್ಯಕ್ಷೀಯ ಮಾತುಗಳನ್ನಾಡಿದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರು ಹಾಗೂ ಕಲಾನಿಕಯದ ಡೀನರು ಆದ ಪೆÇ್ರ. ಎಚ್.ಟಿ. ಪೆÇೀತೆ ಅವರು ಶಿಕ್ಷಣಕ್ಕಿಂತ ಸತ್ಯ ಶ್ರೇಷ್ಠವಾದುದು ಸತ್ಯ ಶೋಧನೆಯಿಂದಲೇ ಹೊಸ ಸಮಾಜ ನಿರ್ಮಾಣ ಸಾಧ್ಯ. ಒಂದು ವ್ಯಕ್ತಿತ್ವ ಕೃತಿಯನ್ನು ರೂಪಿಸಿತ್ತದೆ, ಒಂದು ಕೃತಿ ವ್ಯಕ್ತಿತ್ವವನ್ನು ಪರಿಚಯಿಸುತ್ತದೆ. ಒಳೆ ಬದುಕನ್ನು ಬಾಳುವುದು ಕೃತಿಗಳ ಉದ್ದೇಶ ಸಮುದಾಯದ ಬದುಕನ್ನು ರೂಪಿಸಿವುದು ಲೇಖಕನ ಜವಾಬ್ದಾರಿ. ಇಂತಹ ಸಾಧ್ಯತೆಯನ್ನು ಕ್ರಾಂತಿ ಜ್ಯೋತಿ, ಅಕ್ಷರವ್ವ, ಮಹಾಮಾತೆ ಭಾರತದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರು ಇಂದಿಗೂ ನಮಗೆ ಮಾದರಿಯಾಗಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ವೇದಿಕೆ ಮೇಲಿನ ಗಣ್ಯರಿಂದ ಮಹಾಮಾತೆ ಸಾವಿತ್ರಿ ಬಾಯಿ ಫುಲೆ ಅವರ 190ನೇ ಜನ್ಮ ದಿನದ ನಿಮಿತ್ಯವಾಗಿ ಪುತ್ಥಳಿಗೆ ಪುಷ್ಪನಮನ ಮಾಡಿ ಗೌರವ ಸಲ್ಲಿಸಿದರು. ಡಾ. ಎಂ.ಬಿ. ಕಟ್ಟಿ ಸರ್ವರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಮತಿ ಅಂಬಿಕಾ ವಚನ ಗಾಯನ ಮಾಡಿದರು. ಡಾ. ಸುವರ್ಣ ಹಿರೇಮಠ ನಿರೂಪಿಸಿದರು. ಡಾ. ಹಣಮಂತ ಮೇಲ್ಕೇರಿ ವಂದಿಸಿದರು. ಸಂಶೋಧ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಉಪಸ್ಥಿರಿದರು.