ಕವಿವ ಸಂಘದ ಸಂಸ್ಥಾಪನಾ ದಿನಾಚರಣೆ

ಧಾರವಾಡ,ಜು25: ಉತ್ತರ ಕರ್ನಾಟಕ ಜನರಿಗೆ ಏಕೀಕರಣ ಆಗುವುದು ಬಿಟ್ಟರೆ ಉಳಿದ ಯಾವುದೇ ಭಾಗದ ಜನರಿಗೆ ಏಕೀಕರಣ ಆಗುವುದು ಬೇಕಾಗಿದ್ದಿಲ್ಲ ಎನ್ನುವುದನ್ನು ಇತಿಹಾಸ ಹೇಳುತ್ತದೆ. ದಕ್ಷಿಣ ಭಾಗದಲ್ಲಿ ಈ ಸಂಘದ ಬಗ್ಗೆ ಸ್ಪಷ್ಟ ತಿಳುವಳಿಕೆಯನ್ನು ಇಂದಿಗೂ ಹೊಂದಿರುವುದಿಲ್ಲ. ಮಠಮಾನ್ಯಗಳು, ಮತ್ತಿತರ ಸಂಸ್ಥೆಗಳು ತಮ್ಮ ಮೂಲ ಧ್ಯೇಯವನ್ನು ಬಿಟ್ಟು ಶೈಕ್ಷಣಿಕವಾಗಿ ಶಾಲೆ ಕಾಲೇಜುಗಳನ್ನು ತೆರೆದು ಶಿಕ್ಷಣವನ್ನು ಒಂದು ವ್ಯಾಪಾರವನ್ನಾಗಿ ಮಾಡಿಕೊಂಡು ಬಿಟ್ಟಿವೆ. ಕರ್ನಾಟಕ ವಿದ್ಯಾವರ್ಧಕ ಸಂಘ ಹಾಗೆ ಮಾಡದೇ ಇರುವುದರಿಂದ ಇಂದಿಗೂ ಕನ್ನಡದ ಬಗ್ಗೆ ಹೋರಾಡುತ್ತಿದೆ ಎಂದು ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭೆ ಶಾಸಕರಾದ ಅರವಿಂದ ಚಂದ್ರಕಾಂತ ಬೆಲ್ಲದ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘದ 133 ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ 5 ನೇ ದಿನದ ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವ ನಿಮಿತ್ತ ಏರ್ಪಡಿಸಿದ್ದ ಹಿರಿಯ ಚೇತನಗಳ ನೆನೆ ನೆನೆ ಆ ದಿನ - ಶ್ರೀಮತಿ ಭಾಗೀರಥಿಬಾಯಿ ಪುರಾಣಿಕ ಕುರಿತು ಸ್ಮರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು. ಇನ್ನೋರ್ವ ಮುಖ್ಯ ಅತಿಥಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಳಗಾವಿ ವಿಭಾಗದ ಜಂಟಿ ನಿರ್ದೇಶಕರಾದ ಬಸವರಾಜ ಹೂಗಾರ ಮಾತನಾಡಿದರು. ಕಾರ್ಯಕ್ರಮದಅಧ್ಯಕ್ಷತೆ ವಹಿಸಿ ಲೋಹಿತ ನಾಯ್ಕರ ಮಾತನಾಡಿದರು. ಸಂಘದ ಹಿರಿಯಆಜೀವ ಸದಸ್ಯರಾದ ಹಂಗರಕಿಯ ಎ. ಬಿ.ದೇಸಾಯಿ ಮತ್ತು ಮೈಸೂರಿನಡಾ.ಎಚ್.ಎ. ಪಾಶ್ರ್ವನಾಥಅವರನ್ನುಗೌರವಿಸಲಾಯಿತು.ಧಾರವಾಡಡಯಟ್‍ನ ವಿಶ್ರಾಂತಉಪನ್ಯಾಸಕಕೆ.ಜಿ. ದೇವರಮನಿ ಹಿರಿಯಆಜೀವ ಸದಸ್ಯರನ್ನು ಗೌರವಿಸಿದರು.ಗೌರವ ಸ್ವೀಕರಿಸಿಇರ್ವರು ಹಿರಿಯ ಸದಸ್ಯರು ಅನಿಸಿಕೆ ಹಂಚಿಕೊಂಡು ಸಂಘಕ್ಕೆ ಕೃತಜ್ಞತೆ ಸಲ್ಲಿಸಿದರು.ಇದೇ ಸಂದರ್ಭದಲ್ಲಿ ವನಿತಾ ಸೇವಾ ಸಮಾಜದಅಧ್ಯಕ್ಷ, ಹುಬ್ಬಳ್ಳಿ-ಧಾರವಾಡ ಮಹಾನಗರ ಸಭೆ ಮಾಜಿ ಸದಸ್ಯಟಿ.ಎಸ್. ಪಾಟೀಲ ಅವರನ್ನು ಸಂಘದಅಧ್ಯಕ್ಷಚಂದ್ರಕಾಂತ ಬೆಲ್ಲದ ಸನ್ಮಾನಿಸಿದರು. ಪ್ರಾರಂಭದಲ್ಲಿ ಶ್ರೀಮತಿ ದೀಪಾ ದೇಶಪಾಂಡೆ ಹಾಗೂ ತಂಡದವರಿಂದ ಸುಗಮ ಸಂಗೀತಜರುಗಿತು.ಕೊನೆಯಲ್ಲಿಜರುಗಿದ ಸಾಂಸ್ಕøತಿಕಕಾರ್ಯಕ್ರಮದಲ್ಲಿ ಹುಬ್ಬಳ್ಳಿಯ ಶ್ರೀಮತಿ ಶಶಿಕಲಾ ಅರುಣದಾನಿ ಅವರಿಂದಜಲತರಂಗ ಹಾಗೂ ವಿದ್ವಾನ್ ಸುಜಯ ಶಾನಭಾಗ ಕಲಾ ಸುಜಯ, ಹುಬ್ಬಳ್ಳಿ ತಂಡದಿಂದ ಬನ್ನಂಜೆಗೋವಿಂದಾಚಾರ್ಯರ ಪ್ರವಚನ ಆಧಾರಿತಚಿಂತನರಾಮಾಯಣ’ ನೃತ್ಯರೂಪಕ ಸೊಗಸಾಗಿ ಮೂಡಿ ಬಂದಿತು.
ಸಂಘದಕೋಶಾಧ್ಯಕ್ಷ ಶಿವಾನಂದ ಭಾವಿಕಟ್ಟಿ ವೇದಿಕೆ ಮೇಲೆ ಉಪಸ್ಥಿತರಿದ್ದರು.ಶ್ರೀಮತಿ ವಿಶ್ವೇಶ್ವರಿ ಬ. ಹಿರೇಮಠ ಸ್ವಾಗತಿಸಿದರು.ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಡಾ. ಜಿನದತ್ತ ಅ. ಹಡಗಲಿ ನಿರೂಪಿಸಿದರು. ಡಾ. ಧನವಂತ ಹಾಜವಗೋಳ ವಂದಿಸಿದರು.
ಕಾರ್ಯಕ್ರಮದಲ್ಲಿ ಡಾ.ಸಂಜೀವಕುಲಕರ್ಣಿ, ಡಾ. ಶೈಲಜಾಅಮರಶೆಟ್ಟಿ,ಗುರು ಹಿರೇಮಠ, ಡಾ. ಶ್ರೀಶೈಲ ಹುದ್ದಾರ, ಶಿವಣ್ಣ ಬೆಲ್ಲದ, ನಿಂಗಣ್ಣಕುಂಟಿ, ಜಿ.ಬಿ. ಹೊಂಬಳ, ಬಿ.ಎಸ್. ಶಿರೋಳ, ಎಂ.ಎಂ. ಚಿಕ್ಕಮಠ, ರಾಮಚಂದ್ರಧೋಂಗಡೆ,ಡಾ.ಆನಂದ ಪಾಟೀಲ, ಜ್ಯೋತಿ ಭಾವಿಕಟ್ಟಿ, ಶ್ರೀನಿವಾಸ ವಾಡಪ್ಪಿ, ಮಂಜುನಾಥಯಾದವಾಡ, ಬಿ.ಮಾರುತಿ, ಎನ್.ಆರ್.ಬಾಳಿಕಾಯಿ, ಎಸ್.ಕೆ.ಪತ್ತಾರ, ಚನಬಸಪ್ಪಅವರಾಧಿ, ಡಾ.ಬಾಳಪ್ಪಾ ಚಿನಗುಡಿ, ಕೆ.ಎಸ್.ಕೋರಿಶೆಟ್ಟರ, ಬಿ.ಜಿ. ಬಾರ್ಕಿ, ಸದಾಶಿವ ಜನಗೌಡರ, ಮನೋಜ ಪಾಟೀಲ, ಶಂಕರಲಿಂಗ ಶಿವಳ್ಳಿ, ಎಸ್.ಕೆ.ಕುಂದರಗಿ, ಜಯಶೀಲಾ ಬೆಳಲದವರ, ಚಂದ್ರಶೇಖರಅಮೀನಗಡ, ಮಾರ್ಕಂಡೇಯದೊಡಮನಿ ವಿದ್ಯಾರ್ಥಿಗಳು ಸೇರಿದಂತೆಅನೇಕರು ಉಪಸ್ಥಿತರಿದ್ದರು.