ಕವಿವ ಸಂಘದ ವೈವಿಧ್ಯಮಯ ಕಾರ್ಯಕ್ರಮ ಶ್ಲಾಘನೀಯ

ಧಾರವಾಡ,ನ19 : ಕರ್ನಾಟಕ ವಿದ್ಯಾವರ್ಧಕ ಸಂಘವು ರಾಜ್ಯೋತ್ಸವ ನಿಮಿತ್ತ ನವಂಬರ ತಿಂಗಳು ಹಮ್ಮಿಕೊಂಡಿರುವ ವೈವಿಧ್ಯಮಯ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಪ್ರಾರಂಭಿಸಿ, ಯಶಸ್ವಿಯಾಗಿ ಮುಕ್ತಾಯಗೊಳಿಸುತ್ತಿರುವುದು ಶ್ಲಾಘನೀಯ ಎಂದು ಡಾ. ಸೋಮಶೇಖರ ಜಾಡರ ಅಭಿಪ್ರಾಯಪಟ್ಟರು.
ಕರ್ನಾಟಕ ವಿದ್ಯಾವರ್ಧಕ ಸಂಘವು 67 ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ನವಂಬರ ತಿಂಗಳು ಆಯೋಜಿಸಿದ ಕಾರ್ಯಕ್ರಮದ ನಿಮಿತ್ತ 9 ದಿನಗಳ ನಾಟಕೋತ್ಸವದಲ್ಲಿ 5 ನೇ ದಿನ `ಗುಡ್ಡದ ಹಾಡು’ ನಾಟಕಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಅತಿಥಿಗಳಾಗಿ ಆಗಮಿಸಿದ್ದ ಹುಬ್ಬಳ್ಳಿಯ ವೃತ್ತಿರಂಗಭೂಮಿ ಕಲಾವಿದೆ ಪರಿಮಳಾ ಕಲಾವಂತ ಮಾತನಾಡಿ, ನಾಟಕದ ಧೇಯೋಧ್ಯೇಶ, ಸಮಾಜದ ಓರೆಕೋರೆಗಳನ್ನು, ನೈಜವಾಗಿ ಕಟ್ಟಿಕೊಟ್ಟು ವಾಸ್ತವಿಕ ಸತ್ಯದ ಮಾರ್ಗವನ್ನುತೋರುವುದಾಗಿದೆ. ಕ.ವಿ.ವ. ಸಂಘವು ನಮ್ಮಂತಕಲಾವಿದರನ್ನು ಗುರುತಿಸಿ ವೇದಿಕೆ ಒದಗಿಸುತ್ತಿರುವುದು ಸಂತೊಷದ ಸಂಗತಿಎಂದರು.
ಅಧ್ಯಕ್ಷತೆ ವಹಿಸಿದ್ದ ಕ.ವಿ.ವ. ಸಂಘದ ಸಹಕಾರ್ಯದರ್ಶಿ ಶಂಕರ ಕುಂಬಿ ಮಾತನಾಡಿ, ಜಾನಪದ, ಸಾಹಿತ್ಯ, ಸಂಗೀತ, ಮುಂತಾದಎಲ್ಲ ಕಲೆಗಳ ಬೆಳವಣಿಗೆಗೆ ಸಂಘವು ನಿರಂತರ ಪ್ರೋತ್ಸಾಹಕೊಡುತ್ತ ಬರುತ್ತಿದೆ. ಎಲ್ಲಾಕ್ಷೇತ್ರದ ವಿಷಯತಜ್ಞರು ಸಂಘದ ವೇದಿಕೆಗಳನ್ನು ಬಳಸಿಕೊಂಡು ಕನ್ನಡ ನಾಡು, ನುಡಿ ಉಳಿಸಿ, ಬೆಳೆಸಬೇಕೆಂದರು.
ಕಾರ್ಯಕ್ರಮದಲ್ಲಿ ಕಲಾವಿದ ಸುಲ್ತಾನಪುರದ ಚಂದ್ರಶೇಖರ ಕಾಳೆ ಅವರಿಗೆ ರಂಗಕಲಾ ಸನ್ಮಾನ ಮಾಡಿಗೌರವಿಸಲಾಯಿತು.
ಶಂಕರ ಹಲಗತ್ತಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.ಗುರು ಹಿರೇಮಠ ನಿರೂಪಿಸಿದರು.ಡಾ. ಜಿನದತ್ತ ಹಡಗಲಿ ವಂದಿಸಿದರು. ಶಿವಾನಂದ ಭಾವಿಕಟ್ಟಿ ಪರಿಚಯಿಸಿದರು.