ಕವಿವ ಸಂಘಕ್ಕೆ ಸದಾ ಚಿರರುಣಿ : ಡಾ ಮರ್ಜಿ

ಧಾರವಾಡ,ನ.5- ನನ್ನ ವೃತ್ತಿ ಯಶೋಗಾಥೆಯ ಪ್ರಥಮ ಹೆಜ್ಜೆ ಕರ್ನಾಟಕ ವಿದ್ಯಾವರ್ಧಕ ಸಂಘ. ನನ್ನ ಮೊಟ್ಟಮೊದಲ ವೇದಿಕೆ ಸಂಘದ್ದು, ಸಂಘವು ನನಗೆ, ನನ್ನಂಥ ಅನೇಕ ಕಲಾವಿದರಿಗೆ, ಸಾಹಿತಿಗಳಿಗೆ, ಲೇಖಕರಿಗೆ ಅರಿವು, ಅವಕಾಶ, ವೇದಿಕೆ ಒದಗಿಸುತ್ತಾ ಬದಕು ಕಟ್ಟಿಕೊಳ್ಳಲು, ವ್ಯಕ್ತಿತ್ವ ರೂಪಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ವಿದ್ಯಾರ್ಥಿ ದೆಸೆಯಿಂದಲೇ ಸಂಘದ ಒಡನಾಟ ಹೊಂದಿದ ನನಗೆ ಸಂಘದಲ್ಲಿ ಜರುಗಿದ ಮೌಲಿಕ ಕಾರ್ಯಕ್ರಮಗಳ ಮೂಲಕ ಅನೇಕ ದಿಗ್ಗಜ ಕಲಾವಿದರು, ಲೇಖಕರು, ಕವಿಗಳು, ಮೇಧಾವಿಗಳು, ಪಂಡಿತ, ಪಾಮರರನ್ನು ಕಾಣುವ, ಅವರ ಭಾಷಣ ಆಲಿಸುವ ಸೌಭಾಗ್ಯ ದೊರೆತಿದೆ, ಈ ದಿಶೆಯಲ್ಲಿ ನಾನು ಸಂಘಕ್ಕೆ ಸದಾ ಚಿರಋಣಿಯಾಗಿದ್ದೇನೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕರಾದ ಡಾ. ಸದಾಶಿವ ಮರ್ಜಿ ಹೇಳಿದರು 65 ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ, À `ಛಾಯಾಚಿತ್ರಗಳ ಪ್ರದರ್ಶನ’ ಉದ್ಘಾಟಿಸಿ ಮಾಲನಾಡಿದ ಅವರು ಫೋಟೊಗ್ರಫಿ ಒಂದು ಮಾಂತ್ರಿಕ ಬೆಳಕು-ನೆರಳಿನ ಕಲೆ, ಇದು ಅಪಾರ ಶೃದ್ದೆ, ತಾಳ್ಮೆ, ಶ್ರಮದಾಯಕ ಪ್ರಕ್ರಿಯೆಯಾಗಿದ್ದು, ಡಾ. ಸದಾಶಿವ ಮರ್ಜಿಯವರು ವೃತ್ತಿಯಿಂದ ಕ್ರಿಯಾಶೀಲ, ಉತ್ಸಾಹಿ ಸರಕಾರಿ ಅಧಿಕಾರಿಗಳಾಗಿ ತಮ್ಮ ಬಿಡುವಿಲ್ಲದ ಕೆಲಸ ಕಾರ್ಯಗಳ ಬಾಹುಲ್ಯದ ನಡುವೆ ಪ್ರವೃತ್ತಿಯಾಗಿ ಫೋಟೊಗ್ರಫಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಮಯ, ಶೃದ್ದೆ, ತಾಳ್ಮೆ ಒಟ್ಟುಗೂಡಿಸಿ, ಕರ್ನಾಟಕದ ರಂಗನತಿಟ್ಟು, ಶಿವಮೊಗ್ಗ ಜಿಲ್ಲೆಯ ಗುಡವಿ, ಗದಗ ಜಿಲ್ಲೆಯ ಮಾಗಡಿ, ದರೋಜಿ, ಕರಡಿ ಧಾಮ, ಪಶ್ಚಿಮ ಘಟ್ಟದ ಸತ್ಯ ಹರಿದ್ವರ್ಣ ಕಾಡುಗಳು, ಧಾರವಾಡ ಸುತ್ತಮುತ್ತಲಿನ ನಿಸರ್ಗ ರಮಣೀಯ ಪರಿಸರದಲ್ಲಿ ಮನಮೋಹಕ, ಸೊಗಸಾದ ಅದ್ಭುತ ಹಕ್ಕಿಗಳ ಛಾಯಾಚಿತ್ರಗಳನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಇವರ ಈ ಕಾರ್ಯ ಶ್ಲಾಘನೀಯವಾಗಿದೆ, ಇದಕ್ಕೆ ಸೂಕ್ತ ವೇದಿಕೆ ಒದಗಿಸಿಕೊಟ್ಟ ಸಂಘದ ಪರಿಕಲ್ಪನೆ ಅದ್ಭುತವಾದದ್ದು ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಖ್ಯಾತ ವೈದ್ಯರು ಹಾಗೂ ಹವ್ಯಾಸಿ ಛಾಯಾಗ್ರಾಹಕರಾದ ಡಾ. ಎಸ್. ಆರ್. ಹೆಬ್ಬಾಳ ಅವರು ಮಾತನಾಡಿ, ಯಾವುದೇ ಒಂದು ಛಾಯಾಚಿತ್ರ ಮೂರ್ತರೂಪ ತಳೆಯಲು ಒಂದು ಚಿತ್ರ ತೆಗೆದರೆ ಹೇಗೆ ಮೂಡಿಬರಬಹುದು ಎಂಬ ಪರಿಕಲ್ಪನೆ ಅವಶ್ಯ. ಶೃದ್ಧೆ, ತಲ್ಲಿನತೆ, ಏಕಾಗ್ರತೆ, ಸೂಕ್ಷಗ್ರಾಹಿ ಗುಣಗಳಿಂದ ಮೂಡಿಬಂದ ಛಾಯಾಚಿತ್ರ ಪ್ರೇಕ್ಷಕರ ಮನಗೆಲ್ಲುತ್ತದೆ. ಇಂಥ ಗುಣ ಡಾ. ಸದಾಶಿವ ಮರ್ಜಿಯವರಲ್ಲಿರುವುದು ಅವರ ಛಾಯಾಚಿತ್ರಗಳನ್ನು ಅವಲೋಕಿಸಿದಾಗ ಕಂಡುಬರುತ್ತದೆ. ವೃತ್ತಿಯ ಜೊತೆಗೆ ಮನಸಿಗೆ ಮುದನೀಡುವ ಸಮಾಜಮುಖಿ ಹವ್ಯಾಸಗಳಲ್ಲಿ ತೊಡಗಿಕೊಳ್ಳುವುದರಿಂದ ದೈಹಿಕ, ಮಾನಸಿಕ ಶಕ್ತಿಯ ಜೊತೆಗೆ ಜ್ಞಾನವೃದ್ಧಿಯು ಆಗುತ್ತದೆ. ಈ ಎಲ್ಲ ಗುಣಗಳು ಡಾ. ಸದಾಶಿವ ಮರ್ಜಿಯವರಲ್ಲಿ ಅಡಕವಾಗಿದ್ದು ಮುಂಬರುವ ದಿನಗಳಲ್ಲಿ ಅವರಿಂದ ಮತ್ತಷ್ಟು ಉತ್ಕøಷ್ಟ ಛಾಯಾಚಿತ್ರಗಳು ಮೂಡಿಬರುವುದರಲ್ಲಿ ಸಂಶಯವಿಲ್ಲ ಎಂದು, ತಮ್ಮ ವೈದ್ಯವೃತ್ತಿ ಮತ್ತು ಛಾಯಾಚಿತ್ರ ಕಲೆ ಹವ್ಯಾಸ ಮತ್ತು ಅನುಭವಗಳನ್ನು ವಿವರಿಸಿದರು.
ಸಂಘದ ಸಹಕಾರ್ಯದರ್ಶಿ ಸದಾನಂದ ಶಿವಳ್ಳಿಯವರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕರಾದ ಡಾ. ಸದಾಶಿವ ಮರ್ಜಿಯವರು ಗೌರವ ಉಪಸ್ಥಿತರಿದ್ದು, ತಮ್ಮ ಛಾಯಾಚಿತ್ರ ಹವ್ಯಾಸ ಕುರಿತು ಮಾತನಾಡಿ ತಮ್ಮ ಅನುಭವ ಹಂಚಿಕೊಂಡರು. ಕಲಾವಿದ ಸಂಜೀವ ಕಾಳೆ ಛಾಯಾಚಿತ್ರ ವ್ಯವಸ್ಥೆಯನ್ನು ನಿರ್ವಹಿಸಿದರು.
ಇದೇ ಸಂದರ್ಭದಲ್ಲಿ ಡಾ. ಸದಾಶಿವ ಮರ್ಜಿ ಅವರನ್ನು ಸಂಘದಿಂದ ಸನ್ಮಾನಿಸಿ ಗೌರವಿಸಲಾಯಿತು. ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ಶಿವಾನಂದ ಭಾವಿಕಟ್ಟಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿಗಳಾದ ಪ್ರಕಾಶ ಎಸ್. ಉಡಿಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸತೀಶ ತುರಮರಿ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷರಾದ ನಿಂಗಣ್ಣ ಕುಂಟಿ (ಇಟಗಿ), ಕಾರ್ಯಕಾರಿ ಸಮಿತಿ ಸದಸ್ಯರಾದ ಶಾಂತೇಶ ಗಾಮನಗಟ್ಟಿ, ಶಂಕರ ಕುಂಬಿ, ಬಸವಪ್ರಭು ಹೊಸಕೇರಿ, ಮನೋಜ ಪಾಟೀಲ ಹಾಗೂ ಡಾ. ಶಶಿಧರ ತೋಡ್ಕರ, ಹೇಮಂತ ಲಮಾಣಿ, ಅನಿಲ ಮೇತ್ರಿ, ವಿಲಾಸ ಶೇರಖಾನೆ ಮುಂತಾದವರು ಇದ್ದರು.