ಕವಿವಿ ಶೈಕ್ಷಣಿಕ ಬೆಳವಣಿಗೆಗೆ ಡಾ.ಸಿದ್ದಗಂಗಮ್ಮರಿಂದ ಉತ್ತಮ ಸೇವೆ:ಡಾ. ಶ್ರೀಧರ್


ಸಂಜೆವಾಣಿ ವಾರ್ತೆ
ಹೊಸಪೇಟೆ ಜೂ12: ಹಂಪಿ ಕನ್ನಡ ವಿಶ್ವವಿದ್ಯಾಲಯದ ಶೈಕ್ಷಣಿಕೆ ಬೆಳೆವಣಿಗೆಗೆ ನಿವೃತ್ತ ಪ್ರಾಧ್ಯಾಪಕಿ ಡಾ.ಸಿದ್ದಗಂಗಮ್ಮ ಅವರು ಕೊಡುಗೆ ಅಪಾರವಿದೆ ಎಂದು ಹಿರಿಯ ಪ್ರಾಧ್ಯಾಪಕ ಡಾ. ಶ್ರೀಧರ್ ಹೇಳಿದರು.
ನಗರದ ಅಂಬೇಡ್ಕರ್ ಭವನದ ಗೌತಬುದ್ಧ ಪಂಕ್ಷನ್ ಹಾಲ್‍ನಲ್ಲಿ ಬಹುಜನ ಸಾಹಿತ್ಯ ಅಕಾಡೆಮಿಯ ಕರ್ನಾಟಕ ರಾಜ್ಯ ಸಮಿತಿ ವತಿಯಿಂದ ಹಮ್ಮಿಕೊಂಡ ಕನ್ನಡ ವಿವಿಯ ಡಾ. ಸಿದ್ದಗಂಗಮ್ಮ ಅವರ ಭಾನುವಾರ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
ನೇರ ನಿಷ್ಟುರವಾದಿಗಳಾಗಿ ಸಂಶೋಧನಾರ್ಥಿಗಳ ಸಮಸ್ಯೆಗಳನ್ನು ಈಡೇರಿಸುವಲ್ಲಿ ಯಶಸ್ವಿ ಯಾಗಿದ್ದಾರೆ. ಹುಟ್ಟು ಹೋರಾಟಗಾರರದ ಅವರು ಸೃಜನಶೀಲ ಬರವಣಿಗೆಯಲ್ಲಿ ತಮ್ಮನ್ನು ತೊದಗಿಸಿಕೊಂಡಿದ್ದರು ಎಂದು ಸ್ಮರಿಸಿದರು.
ಡಾ. ಪಿ. ಮಹಾದೇವ ಅವರು ಮಾತನಾಡಿ, ಬಡ ವಿದ್ಯಾರ್ಥಿಗಳಿಗೆ ನೆರವು ನೀಡುವ ಮೂಲಕ ಅವರಲ್ಲಿ ಸಂಶೋಧನ ಗುಣವನ್ನು ಬೆಳೆಸಿದರು. ಉತ್ತಮ ವಾಗ್ಮಿಗಳಾಗಿ ಆಡಳಿತದಲ್ಲಿ ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸಿದರು ಎಂದು ಹೇಳಿದರು.
ಬಹುಜನ ಸಾಹಿತ್ಯ ಅಕಾಡೆಮಿಯ ರಾಜ್ಯಾಧ್ಯಕ್ಷ ಡಾ. ವೆಂಕಟೇಶ್ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ತಾಯ್ತನದ ಗುಣವು ಅವರ ಬೆಳಣಿಗೆಗೆ ಕಾರಣವಾಯಿತು. ಹಾಸ್ಟೆಲ್ ನಿಲಯಪಾಲಕರಾಗಿ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಈಡೇರಿಸುವಲ್ಲಿ ಅವರು ಯಶ್ಸಸಿಯಾಗಿದರು ಎಂದರು.
ಡಾ. ಬಿ ಆರ್ ಅಂಬೇಡ್ಕರ್ ಸಂಘದ ಜಿಲ್ಲಾಧ್ಯಕ್ಷ ಕೆ ಪಿ ಉಮಾಪತಿ ಹಾಗೂ ಕವಿಯತ್ರಿ ವೆಂಕಮ್ಮ ಮಾತಾಡಿದರು. ಬಹುಜನ ಸಾಹಿತ್ಯ ಅಕಾಡೆಮಿಯ ಪ್ರಧಾನ ಕಾರ್ಯದರ್ಶಿ ಡಾ. ಗೋವಿಂದ ಪ್ರಾಸ್ತಾವಿಕವಾಗಿ ಮಾತಾಡಿದರು. ಅಂಬೇಡ್ಕರ್ ಸಂಘದ ಗೌರವ ಅಧ್ಯಕ್ಷರಾದ ವೀರಸ್ವಾಮಿ ಹಾಗೂ ಕವಿಯತ್ರಿ ಎನ್ ಡಿ ವೆಂಕಮ್ಮ ಉಪಸ್ಥಿತರಿದ್ದರು.

One attachment • Scanned by Gmail