ಕವಿರತ್ನ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

ಬೀದರ್:ನ.3: ನಗರದಲ್ಲಿರುವ ಮಹಾತ್ಮ ಬೊಮ್ಮಗೊಂಡೇಶ್ವರ ಶಿಕ್ಷಣ ಸಂಸ್ಥೆ ಅಡಿಯಲ್ಲಿ ನಡೆಯುತ್ತಿರುವ ಡಿ. ದೇವರಾಜ ಅರಸ್ ಶಿಕ್ಷಕರ ತರಬೇತಿ ಕೇಂದ್ರ, ಕವಿರತ್ನ ಕಾಳಿದಾಸ ಪದವಿ ಮಹಾವಿದ್ಯಾಲಯ, ಮಾತೋಶ್ರೀ ಅಹೀಲ್ಯಾಬಾಯಿ ಹೋಳ್ಕರ್ ಪ್ರೌಢ ಶಾಲೆ ಮತ್ತು ಏಕಲವ್ಯ ಹಿರಿಯ ಪ್ರಾಥಮಿಕ ಶಾಲೆ ಇವರ ಸಂಯುಕ್ತಾಶ್ರಯದಲ್ಲಿ ಸಂಸ್ಥೆಯ ಆವರಣದಲ್ಲಿ 68ನೇ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಅಮೃತರಾವ ಚಿಮಕೋಡೆ ಅವರು ಮಹಾತ್ಮ ಗಾಂಧಿಜಿಯವರ ಹಾಗೂ ಭುವನೇಶ್ವರಿಯ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ, ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಸಂಸ್ಥೇಯ ಪ್ರಧಾನ ಕಾರ್ಯದರ್ಶಿಗಳಾದ ಗೋವರ್ಧನರಾಠೋಡ, ಮಖ್ಯ ಅತಿಥಿ ಸ್ಥಾನವಹಿಸಿ ಮಾತನಾಡಿದರು.
ಕವಿರತ್ನ ಕಾಳಿದಾಸ ಪದವಿ ಮಹಾವಿದ್ಯಾಲಯ, ಪ್ರಾಂಶುಪಾಲರಾದ ಡಾ.ಗಿರಿರಾವ ಕುಲಕರ್ಣಿ, ಮಾತೋಶ್ರೀ ಅಹೀಲ್ಯಾಬಾಯಿ ಹೋಳ್ಕರ್ ಪ್ರೌಢ ಶಾಲೆ ಮತ್ತು ಏಕಲವ್ಯ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಸಲಾವೋದ್ದಿನ, ಅವಿನಾಸ ಚಿಮಕೋಡೆ ರವರು ಅತಿಥಿ ಸ್ಥಾನ ವಹಿಸಿ ಮಾತನಾಡಿದರು.
ಡಿ. ದೇವರಾಜ ಅರಸ್ ಶಿಕ್ಷಕರ ತರಬೇತಿ ಕೇಂದ್ರದ ಅಧಿಕ್ಷಕರಾದ ವೈಜಿನಾಥ ಬೀರಾದರ ರವರು ಅದ್ಯಕ್ಷತೆ ವಹಿಸಿ ಮಾತನಾಡಿದರು.

ಸನ್ಮಾನ: ಇದೇ ಸಂದರ್ಭದಲ್ಲಿ ಕವಿರತ್ನ ಕಾಳಿದಾಸ ಪದವಿ ಮಹಾವಿದ್ಯಾಲಯ, ಪ್ರಾಂಶುಪಾಲರಾದ ಡಾ. ಗಿರಿರಾವ ಕುಲಕರ್ಣಿಯವರು ಇತ್ತಿಚೆಗೆ ಡಾ. ಸಿಂಧೆ ಜಗನ್ನಾಥ ಅವರ ಮಾರ್ಗದರ್ಶನದಲ್ಲಿ ಪ್ರಾಬ್ಲಮ್ಸ್ಸ್ ಸುಗರ್ ಕ್ಯಾನ್ ವರ್ಕರ್ಸ್ ಎ ಸೋಷಿಯಲೋಜಿಕಲ್ ಸ್ಟಡಿ ಆಫ್ ಬೀದರ್ ಡಿಸ್ಟ್ರ್ರಿಕ್ಟ್ (Pಡಿobಟems oಜಿ Sugಚಿಡಿಛಿಚಿಟಿ ತಿoಡಿಞeಡಿs ಚಿ Soಛಿioಟogiಛಿಚಿಟ sಣuಜಥಿ oಜಿ ಃiಜಚಿಡಿ ಆisಡಿiಛಿಣ) ಎಂಬ ಪ್ರಬಂಧ ಮಂಡಿಸಿದಕ್ಕೆ ಗುಲಬರ್ಗಾ ವಿಶ್ವವಿದ್ಯಾಲಯ ಕಲಬುರಗಿ ಪಿ.ಎಚ್.ಡಿ.ಪದವಿ ಪ್ರಧಾನ ಮಾಡಿದೆ. ಶ್ರೀ ಕುಲಕರ್ಣಿ ಗಿರಿರಾವ ಅವರು ಡಾಕ್ಟರೇಟ್ ಪದವಿ ಪಡೆದಿದ್ದಕ್ಕೆ ಸಂಸ್ಥೆಯ ಆಡಳಿತ ಮಂಡಳಿ ಹಾಗೂ ಶಾಲಾ-ಕಾಲೇಜಿನ ಎಲ್ಲಾ ಸಿಬ್ಬಂದಿಯವರು ಸೇರಿ ಸನ್ಮಾನಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಶಾಲಾ-ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಇದ್ದರು. ನಂತರ ವಿವಿದ ಸಾಂಸ್ಕøತಿಕ ಕಾರ್ಯಕ್ರಮ ನಡೆದವು.